ಕರ್ನಾಟಕ

karnataka

ETV Bharat / bharat

ಸೋತ ನಿರಾಶೆಯಲ್ಲಿ ಭಾರತೀಯರ ಕಣ್ಣೀರು; ಸಂತೈಸಿ amazing opponent ಎಂದು ಬೆನ್ನುತಟ್ಟಿದ ಬ್ರಿಟನ್ - ಭಾರತ ಮಹಿಳಾ ಹಾಕಿ ತಂಡ

ದೇಶ ನಿಮ್ಮ ಬಗ್ಗೆ ಅಪಾರ ಹೆಮ್ಮೆ ಪಡುತ್ತದೆ. ನಮ್ಮ ಮಹಿಳಾ ಹಾಕಿ ತಂಡಕ್ಕಿರುವ ನಂಬಿಕೆ ಮತ್ತು ಹೋರಾಟದ ಮನೋಭಾವ ಉನ್ನತವಾದುದು. ಇನ್ನಷ್ಟು ಸಾಧನೆ ಮಾಡಲು ದೇಶವನ್ನು ಪ್ರೇರೇಪಿಸಿದ್ದೀರಿ ಎಂದು ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.

Indian Women's hockey team crying in Tokyo Olympic Stadium
ಹಾಕಿ ಅಂಗಳದಲ್ಲಿ ಗಳಗಳನೆ ಅತ್ತ ವನಿತೆಯರ ತಂಡ: ಗ್ರೇಟ್​ ಬ್ರಿಟನ್​​ನಿಂದಲೂ ಭಾರತದ ಸಾಧನೆಗೆ ಮೆಚ್ಚುಗೆ

By

Published : Aug 6, 2021, 9:49 AM IST

ಟೋಕಿಯೋ(ಜಪಾನ್):ಫೈನಲ್ ತಲುಪಲು ಸಾಧ್ಯವಾಗದೇ ಗ್ರೇಟ್​ ಬ್ರಿಟನ್​​ನೊಂದಿಗೆ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಿ ವಿಫಲವಾದ ಭಾರತೀಯ ವನಿತೆಯರ ಹಾಕಿ ತಂಡದ ಸದಸ್ಯರು ಕ್ರೀಡಾಂಗಣದಲ್ಲೇ ಕಣ್ಣೀರು ಸುರಿಸಿದರು.

4-3 ಪಾಯಿಂಟ್​ಗಳಿಂದ ಸೋಲು ಅನುಭವಿಸಿದ ನಂತರ ಕ್ರೀಡಾಂಗಣದಲ್ಲೇ ವನಿತೆಯರು ಗಳಗಳನೆ ಅತ್ತಿದ್ದು, ಗ್ರೇಟ್​ ಬ್ರಿಟನ್​ ತಂಡದ ಆಟಗಾರ್ತಿಯರು ಸಮಾಧಾನ ಮಾಡಿದ್ದಾರೆ.

ಇತ್ತ, ಭಾರತದಲ್ಲಿ ಪದಕದ ಕನಸು ನನಸಾಗದ ಕಾರಣಕ್ಕೆ ಹಾಕಿ ತಂಡದ ಸದಸ್ಯೆ ನೇಹಾ ಗೋಯಲ್ ತಾಯಿ ಪಂದ್ಯ ವೀಕ್ಷಿಸುತ್ತಲೇ ಕಣ್ಣೀರು ಹಾಕಿದರು. ನಂತರ ಪ್ರತಿಕ್ರಿಯೆ ನೀಡಿರುವ ಅವರು, ಸೋಲು ಮತ್ತು ಗೆಲುವು ಸ್ಪರ್ಧೆಯ ಭಾಗವಾಗಿದ್ದು, ಮುಂದಿನ ಅವಕಾಶದಲ್ಲಿ ನಾವು ಗೆಲ್ಲುವ ಭರವಸೆ ಇದೆ ಎಂದರು.

ಈ ಕುರಿತು ಟ್ವೀಟ್ ಮಾಡಿರುವ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತದ ಹೆಣ್ಣು ಮಕ್ಕಳು ದೃಢಸಂಕಲ್ಪದ ಕ್ರೀಡಾಪಟುಗಳಾಗಿದ್ದಾರೆ. ದೇಶ ನಿಮ್ಮ ಬಗ್ಗೆ ಅಪಾರ ಹೆಮ್ಮೆ ಪಡುತ್ತದೆ. ನಮ್ಮ ಮಹಿಳಾ ಹಾಕಿ ತಂಡಕ್ಕಿರುವ ನಂಬಿಕೆ ಮತ್ತು ಹೋರಾಟದ ಮನೋಭಾವ ಉನ್ನತವಾದದು. ಇನ್ನಷ್ಟು ಸಾಧನೆ ಮಾಡಲು ದೇಶವನ್ನು ಪ್ರೇರೇಪಿಸಿದ್ದೀರಿ ಎಂದಿದ್ದಾರೆ.

ಗ್ರೇಟ್ ಬ್ರಿಟನ್ ಹಾಕಿ ತಂಡವೂ ಭಾರತೀಯ ಹಾಕಿ ತಂಡವನ್ನು ಹೊಗಳಿದೆ. ಟೋಕಿಯೋ ಒಲಿಂಪಿಕ್​ನಲ್ಲಿ ಹಾಕಿ ಇಂಡಿಯಾ ವಿಶೇಷ ಸಾಧನೆ ಮಾಡಿದೆ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ:Tokyo Olympics Women's Hockey: ಹಾಕಿಯಲ್ಲಿ ಇತಿಹಾಸ ಸೃಷ್ಟಿಗೆ ಹೊರಟ ಭಾರತೀಯ ವನಿತೆಯರಿಗೆ ನಿರಾಸೆ

ABOUT THE AUTHOR

...view details