ನವದೆಹಲಿ: ವಿಯೆಟ್ನಾನಿಂದ ಭಾರತಕ್ಕೆ ಆಗಮಿಸಿದ್ದ ದಂಪತಿಗಳ ಬಳಿ ಎರಡು ಟ್ರಾಲಿ ಬ್ಯಾಗ್ಗಳಲ್ಲಿ ಬರೋಬ್ಬರಿ 45 ಪಿಸ್ತೂಲ್ ಪತ್ತೆಯಾಗಿದ್ದು, ಅವರನ್ನ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಪಿಸ್ತೂಲ್ಗಳ ಒಟ್ಟು ಮೌಲ್ಯ ಬರೋಬ್ಬರಿ 22 ಲಕ್ಷ ರೂಪಾಯಿ ಆಗಿರುವುದಾಗಿ ತಿಳಿದು ಬಂದಿದ್ದು, 25 ಗನ್ಗಳು 12ಲಕ್ಷಕ್ಕೂ ಹೆಚ್ಚಿನ ಮೌಲ್ಯ ಹೊಂದಿವೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರನ್ನ ಜಗಜಿತ್ ಸಿಂಗ್ ಮತ್ತು ಆತನ ಪತ್ನಿ ಜಸ್ವಿದರ್ ಕೌರ್ ಎಂದು ಗುರುತಿಸಲಾಗಿದೆ. ವಿಯೆಟ್ನಾನಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಜೋಡಿ ಬಂದಿದ್ದು, ತಪಾಸಣೆಗೊಳಪಡಿಸಿದಾಗ ಇಷ್ಟೊಂದು ಪಿಸ್ತೂಲ್ ಪತ್ತೆಯಾಗಿವೆ.