ಕರ್ನಾಟಕ

karnataka

By

Published : Apr 3, 2021, 10:42 PM IST

Updated : Apr 3, 2021, 10:54 PM IST

ETV Bharat / bharat

'ಉಭಯ ದೇಶಗಳು ಪರಸ್ಪರ ನಂಬಿಕೆಯಿದ್ದರೆ ಭಾರತ ಮತ್ತು ಪಾಕ್​ ಮಧ್ಯೆ ಮಾತುಕತೆ ಸಾಧ್ಯ'

ಕಳೆದ ಕೆಲವು ವರ್ಷಗಳಿಂದ ಇದರ ಪರಿಣಾಮಗಳು ಸ್ಪಷ್ಟವಾಗಿವೆ. ಪಾಕಿಸ್ತಾನವು ತನ್ನ ನಿಯಂತ್ರಣದಲ್ಲಿರುವ ಭೂಪ್ರದೇಶದಿಂದ ನಮ್ಮನ್ನು ಗುರಿಯಾಗಿರಿಸಿಕೊಂಡ ಎಲ್ಲಾ ಭಯೋತ್ಪಾದನೆಯನ್ನು ಕೊನೆಗೊಳಿಸಬೇಕು ಎಂಬುದು ಭಾರತದ ಪ್ರಮುಖ ಅಂಶವಾಗಿದೆ. ಆಗ ಮಾತ್ರ ಸಂಬಂಧಗಳು ಸುಧಾರಿಸುತ್ತವೆ..

India-Pak dialogue possible only if decisions are implemented sincerely: Indias ex-envoy to Pak
'ಉಭಯ ದೇಶಗಳು ಪರಸ್ಪರ ನಂಬಿಕೆಯಿದ್ದರೆ ಭಾರತ ಮತ್ತು ಪಾಕ್​ ಮಧ್ಯೆ ಮಾತುಕತೆ ಸಾಧ್ಯ'

ನವದೆಹಲಿ :ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ದಿನಕ್ಕೊಂದು ತಿರುವು ಕಾಣುತ್ತಿದೆ. ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ್ದ ಪಾಕ್ ಸರ್ಕಾರ ಮತ್ತೆ ಯು-ಟರ್ನ್ ತೆಗೆದುಕೊಂಡಿದ್ದು, ರಾಜಕೀಯ ವಿಶ್ಲೇಷಕರನ್ನು ಅಚ್ಚರಿಗೊಳಿಸಿದೆ.

ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಚಂದ್ರಕಲಾ ಚೌಧರಿ, ಪಾಕಿಸ್ತಾನದಲ್ಲಿದ್ದ ಭಾರತದ ಮಾಜಿ ರಾಯಭಾರಿ ಗೌತಮ್ ಬಂಬಾವಲೆ ಅವರೊಂದಿಗೆ ನಡೆಸಿದ ಕ್ವಿಕ್ ಚಾಟ್​​ನ ವರದಿ ಇಲ್ಲಿದೆ.

ಚಂದ್ರಕಲಾ ಚೌಧರಿ :ಪಾಕ್​ ಸರ್ಕಾರ ಈ ಮೊದಲು ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿ, ನಂತರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಈ ಬಗ್ಗೆ ಗೊಂದಲವೇಕೆ..? ನಿಮ್ಮ ಅಭಿಪ್ರಾಯವೇನು..?.

ಗೌತಮ್ ಬಂಬಾವಲೆ :ಈ ಗೊಂದಲ ಅವರಿಗೆ ಅನಿವಾರ್ಯ. ಇಮ್ರಾನ್​ ಖಾನ್​ನ ಪಿಟಿಐ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಈಗ ಪಾಕಿಸ್ತಾನ ಈ ಸರಕುಗಳನ್ನು ಬೇರೆ ದೇಶಗಳಿಂದ ಹೆಚ್ಚಿನ ಬೆಲೆಗೆ ಆಮದು ಮಾಡಿಕೊಳ್ಳಬೇಕು. ಈ ರೀತಿಯ ದ್ವಂದ್ವಗಳು ಪಾಕ್​ನಲ್ಲಿ ಸಾಮಾನ್ಯವಾಗಿದೆ.

ಚಂದ್ರಕಲಾ ಚೌಧರಿ : ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದುಗೊಳಿಸಿದ ನಂತರ ಭಾರತದೊಂದಿಗೆ ಸಂಬಂಧ ಸುಧಾರಣೆಗೊಳ್ಳಲು ಸಾಧ್ಯವಿಲ್ಲ ಎಂದು ಪಾಕ್ ಹೇಳಿದೆ. ಇದು ಪಾಕ್​ನ ಮತ್ತೊಂದು ಪಿತೂರಿ ಎಂದು ಭಾವಿಸುತ್ತೀರಾ..?

ಗೌತಮ್ ಬಂಬಾವಲೆ : ಇದು ಹೊಸದಾದ ಬೇಡಿಕೆ. ಇದನ್ನು ತುಂಬಾ ಮಂದಿ ವಿಶ್ಲೇಷಕರು ಊಹಿಸಬಹುದಾಗಿದೆ. ಇದರಲ್ಲಿ ಅಚ್ಚರಿ ಪಡುವಂತದ್ದೇನೂ ಇಲ್ಲ.

ಚಂದ್ರಕಲಾ ಚೌಧರಿ : ಎರಡೂ ನೆರೆಹೊರೆಯ ರಾಷ್ಟ್ರಗಳ ಮಧ್ಯೆ ಸಂಬಂಧ ಸುಧಾರಿಸುವ ಸಭೆ, ಚರ್ಚೆ ಸಾಧ್ಯವಿದೆ ಎಂದು ನೀವು ಭಾವಿಸುತ್ತೀರಾ?

ಗೌತಮ್ ಬಂಬಾವಲೆ : ಎರಡೂ ಕಡೆಯವರು ಬಯಸಿದಾಗ ಮಾತ್ರ ಈ ರೀತಿಯ ಸಂಭಾಷಣೆ ಸಾಧ್ಯ. ಈ ರೀತಿಯ ಸಂಭಾಷಣೆ ನಡೆದರೆ ಯಾವುದೇ ನಿರ್ಧಾರಗಳು ಪ್ರಾಮಾಣಿಕವಾಗಿ ಪಾಲಿಸಲ್ಪಡುತ್ತವೆ ಮತ್ತು ಕಾರ್ಯಗತಗೊಳ್ಳುತ್ತವೆ ಎಂಬ ನಂಬಿಕೆಯಿದೆ.

ಚಂದ್ರಕಲಾ ಚೌಧರಿ : ಭಾರತದೊಂದಿಗೆ ವ್ಯಾಪಾರ ಪುನಾರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್ ತನ್ನ ನಿರ್ಧಾರ ಬದಲಿಸಿಕೊಳ್ಳಲು ಕಾರಣವೇನು..?

ಗೌತಮ್ ಬಂಬಾವಲೆ : ಪ್ರಸ್ತುತ ಈ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಪಾಕ್ ಸೇನೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮೊದಲಿಗೆ ಎಲ್​ಒಸಿಯಲ್ಲಿ ಶಾಂತಿ ಕಾಪಾಡಲು ಮೊದಲು ಭಾರತ ಮತ್ತು ಪಾಕ್​ನೊಡನೆ ಒಪ್ಪಂದವಾಗಿತ್ತು. ಪಾಕ್​ಸೇನೆಯ ಈ ಒಪ್ಪಂದದ ಕೇಂದ್ರ ಬಿಂದುವಾಗಿದೆ. ಪಾಕ್​ನ ಈ ನಿರ್ಧಾರಗಳು ಸೇನೆಯ ನಿರ್ಧಾರಗಳೇ ಆಗಿವೆ.

ಚಂದ್ರಕಲಾ ಚೌಧರಿ : ಭಾರತದ ಮೇಲೆ ಪಾಕ್​ ರಾಜಕೀಯ ಮತ್ತು ವಿದೇಶಾಂಗ ನೀತಿಯ ಪರಿಣಾಮಗಳೇನು? ಪಾಕಿಸ್ತಾನ ಈ ನಡೆ ಮುಂದುವರಿಸಿದರೆ ದಕ್ಷಿಣ ಏಷ್ಯಾದ ಮೇಲಾಗುವ ಪರಿಣಾಮಗಳೇನು?

ಗೌತಮ್ ಬಂಬಾವಲೆ : ಕಳೆದ ಕೆಲವು ವರ್ಷಗಳಿಂದ ಇದರ ಪರಿಣಾಮಗಳು ಸ್ಪಷ್ಟವಾಗಿವೆ. ಪಾಕಿಸ್ತಾನವು ತನ್ನ ನಿಯಂತ್ರಣದಲ್ಲಿರುವ ಭೂಪ್ರದೇಶದಿಂದ ನಮ್ಮನ್ನು ಗುರಿಯಾಗಿರಿಸಿಕೊಂಡ ಎಲ್ಲಾ ಭಯೋತ್ಪಾದನೆಯನ್ನು ಕೊನೆಗೊಳಿಸಬೇಕು ಎಂಬುದು ಭಾರತದ ಪ್ರಮುಖ ಅಂಶವಾಗಿದೆ. ಆಗ ಮಾತ್ರ ಸಂಬಂಧಗಳು ಸುಧಾರಿಸುತ್ತವೆ ಎಂದು ನಿರೀಕ್ಷಿಸಬಹುದು.

ಚಂದ್ರಕಲಾ ಚೌಧರಿ : ಒಂದು ಕಡೆ, ಪಾಕ್​ ಭಾರತದೊಂದಿಗೆ ವ್ಯಾಪಾರ ಪುನಾರಂಭಿಸದಿರಲು ನಿರ್ಧರಿಸಿದೆ. ಚೀನಾದಿಂದ ಸರಕುಗಳನ್ನು ಕೊಳ್ಳಲು ನಿರ್ಧಾರ ಮಾಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಕಡಿಮೆ ಮಾಡಲು ಚೀನಾ ನಡೆಸಿದ ಮತ್ತೊಂದು ನಡೆ ಇದು ಎಂದು ನೀವು ಭಾವಿಸುತ್ತೀರಾ?

ಗೌತಮ್ ಬಂಬಾವಲೆ : ಇದು ಪ್ರಮುಖವಲ್ಲದ ಬೆಳವಣಿಗೆ. ಅದರ ಮೇಲೆ ಯಾವುದೇ ಮಹತ್ವವನ್ನು ನೀಡಬೇಡಿ.

ಈ ರೀತಿಯಾಗಿ ಭಾರತ ಪಾಕ್​ ನಡುವಿನ ಸಂಬಂಧದ ಬಗ್ಗೆ ಪಾಕಿಸ್ತಾನದಲ್ಲಿದ್ದ ಭಾರತದ ಮಾಜಿ ರಾಯಭಾರಿ ಗೌತಮ್ ಬಂಬಾವಲೆ ಉತ್ತರಿಸಿದ್ದಾರೆ.

Last Updated : Apr 3, 2021, 10:54 PM IST

ABOUT THE AUTHOR

...view details