ಕರ್ನಾಟಕ

karnataka

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾಗತಿಕ ಮಾನದಂಡಗಳನ್ನು ಹೊಂದಿದೆ : ಪಿಎಂ ಮೋದಿ

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. ಡಾ.ಅಂಬೇಡ್ಕರ್ ಅವರು ಜ್ಞಾನ, ಸ್ವಾಭಿಮಾನ ಮತ್ತು ಸಭ್ಯತೆಯನ್ನು ತಮ್ಮ ಮೂರು ಪೂಜ್ಯ ದೇವತೆಗಳೆಂದು ಪರಿಗಣಿಸಿದ್ದಾರೆ. ಸ್ವಾಭಿಮಾನವು ಜ್ಞಾನದೊಂದಿಗೆ ಬರುತ್ತದೆ ಮತ್ತು ಒಬ್ಬ ವ್ಯಕ್ತಿಯ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತದೆ..

By

Published : Apr 14, 2021, 5:15 PM IST

Published : Apr 14, 2021, 5:15 PM IST

Updated : Apr 14, 2021, 5:33 PM IST

India National Education Policy is futuristic: Modi
ಪಿಎಂ ಮೋದಿ

ಅಹ್ಮದಾಬಾದ್‌ :ಭವಿಷ್ಯದ ದೃಷ್ಟಿಯಿಂದ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಜಾಗತಿಕ ಮಟ್ಟದ ಮಾನದಂಡಗಳನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿಯ 95ನೇ ವಾರ್ಷಿಕ ಸಭೆ ಮತ್ತು ಉಪಕುಲಪತಿಗಳ ರಾಷ್ಟ್ರೀಯ ಸೆಮಿನಾರ್​ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಭಾರತ ಆತ್ಮನಿರ್ಭರದ ಪಥದಲ್ಲಿ ಸಾಗುತ್ತಿದೆ. ಕೌಶಲ್ಯ ಹೊಂದಿರುವ ಯುವಕರ ಪಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಿಸಿಕೊಳ್ಳಲು ಭಾರತಕ್ಕೆ ಹೆಮ್ಮೆ ಇದೆ. ಪ್ರಜಾಪ್ರಭುತ್ವದ ಮೌಲ್ಯಗಳು ನಮ್ಮ ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಿವೆ ಎಂದರು.

ಶಿಕ್ಷಣ ಕ್ಷೇತ್ರದ ಭವಿಷ್ಯವನ್ನು ಗಮನಿಸಿ ಜಾಗತಿಕವಾಗಿ ಮುನ್ನಡೆ ಕಾಣಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವು ಕಳೆದ ವರ್ಷ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಅನಾವರಣಗೊಳಿಸಿದೆ. ಪ್ರತಿ ವಿದ್ಯಾರ್ಥಿಗೆ ಕೆಲವು ಸಾಮರ್ಥ್ಯಗಳಿವೆ. ಇಡೀ ಜಗತ್ತನ್ನು ಒಂದು ಘಟಕವಾಗಿಡಲು ಶಿಕ್ಷಣ ನಿರ್ವಹಣೆಯನ್ನು ಕೈಗೊಳ್ಳಬೇಕು. ಆದರೆ, ಭಾರತೀಯ ಶಿಕ್ಷಣದ ಸ್ವರೂಪವನ್ನು ಕೇಂದ್ರೀಕರಿಸಬೇಕು ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ದೊಡ್ಡ ಡೇಟಾ, 3ಡಿ ಪ್ರಿಂಟಿಂಗ್, ವರ್ಚುವಲ್ ರಿಯಾಲಿಟಿ ಮತ್ತು ರೊಬೊಟಿಕ್ಸ್, ಮೊಬೈಲ್ ತಂತ್ರಜ್ಞಾನ, ಜಿಯೋ-ಇನ್ಫಾರ್ಮ್ಯಾಟಿಕ್ಸ್, ಸ್ಮಾರ್ಟ್ ಹೆಲ್ತ್‌ಕೇರ್ ಮತ್ತು ರಕ್ಷಣಾ ಕ್ಷೇತ್ರದ ಮುಂದಿನ ಕೇಂದ್ರವಾಗಿ ಭಾರತವನ್ನು ನೋಡಲಾಗುತ್ತಿದೆ ಎಂದರು. ವಿವಿಧ ಕೌಶಲ್ಯಗಳ ಅಗತ್ಯವನ್ನು ಪೂರೈಸಲು, ದೇಶದ ಮೂರು ದೊಡ್ಡ ನಗರಗಳಲ್ಲಿ ಭಾರತೀಯ ಕೌಶಲ್ಯ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಮುಂಬೈನಲ್ಲಿ ಭಾರತೀಯ ಕೌಶಲ್ಯ ಸಂಸ್ಥೆಯ ಮೊದಲ ಬ್ಯಾಚ್ ಈಗಾಗಲೇ ಪ್ರಾರಂಭವಾಗಿದೆ ಎಂದು ಮೋದಿ ಹೇಳಿದರು.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. ಡಾ.ಅಂಬೇಡ್ಕರ್ ಅವರು ಜ್ಞಾನ, ಸ್ವಾಭಿಮಾನ ಮತ್ತು ಸಭ್ಯತೆಯನ್ನು ತಮ್ಮ ಮೂರು ಪೂಜ್ಯ ದೇವತೆಗಳೆಂದು ಪರಿಗಣಿಸಿದ್ದಾರೆ. ಸ್ವಾಭಿಮಾನವು ಜ್ಞಾನದೊಂದಿಗೆ ಬರುತ್ತದೆ ಮತ್ತು ಒಬ್ಬ ವ್ಯಕ್ತಿಯ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತದೆ.

ಸಮಾನ ಹಕ್ಕುಗಳ ಮೂಲಕ ಸಾಮಾಜಿಕ ಸಾಮರಸ್ಯವು ಹೊರಹೊಮ್ಮುತ್ತದೆ ಮತ್ತು ದೇಶವು ಪ್ರಗತಿಯಾಗುತ್ತದೆ. ಬಾಬಾಸಾಹೇಬ್ ತೋರಿಸಿದ ಹಾದಿಯಲ್ಲಿ ದೇಶವನ್ನು ಮುಂದೆ ಸಾಗಿಸುವ ಜವಾಬ್ದಾರಿಯನ್ನು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ವಿಶ್ವವಿದ್ಯಾಲಯಗಳು ಹೊಂದಿವೆ ಮೋದಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಗುಜರಾತ್ ಗೌರ್ನರ್ ಆಚಾರ್ಯ ದೇವವ್ರತ್, ಸಿಎಂ ವಿಜಯ್ ರುಪಾನಿ ಭಾಗಿಯಾಗಿದ್ದರು.

Last Updated : Apr 14, 2021, 5:33 PM IST

ABOUT THE AUTHOR

...view details