ನವದೆಹಲಿ: ಸುಸ್ಥಿರ ಅಭಿವೃದ್ಧಿಯಲ್ಲಿ ಎರಡು ದೇಶಗಳ ಸಹಕಾರವನ್ನು ಬಲಪಡಿಸಲು ಮತ್ತು ಜಾಗತಿಕ ಪರಿಸರ ಸಂರಕ್ಷಣೆಯ ಪರವಾಗಿ ಕ್ರಮಗಳನ್ನು ಯೋಜಿಸಲು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಫ್ರೆಂಚ್ ಪರಿಸರ ಸಚಿವೆ ಬಾರ್ಬರಾ ಪೊಂಪಿಲಿ ಅವರು 'ಇಂಡೋ-ಫ್ರೆಂಚ್ ಪರಿಸರ ವರ್ಷ'ವನ್ನು ಪ್ರಾರಂಭಿಸಿದರು.
ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಭಾರತ - ಚೀನಾ ಮೈತ್ರಿಕೂಟದ ಮಹತ್ವ ಹೇಳಿದರು. "ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಎರಡು ಪ್ರಮುಖ ಸ್ತಂಭಗಳು ನಾವು. ಜಾಗತಿಕ ಪರಿಸರ ಸಂರಕ್ಷಣೆಯ ಬಗೆಗಿನ ಈ ಸಹಭಾಗಿತ್ವವು ಪ್ರಪಂಚದ ಉಳಿದ ಭಾಗಗಳಿಗೆ ಸುಸ್ಥಿರ ಅಭಿವೃದ್ಧಿಯತ್ತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಒಂದು ಉದಾಹರಣೆಯಾಗುತ್ತದೆ" ಎಂದು ಹೇಳಿದರು.