ಹೈದರಾಬಾದ್:ಕೇಂದ್ರ ಸರ್ಕಾರ ಸೇನಾ ನೇಮಕಾತಿಗೆ ಹೊಸ ಯೋಜನೆ ಜಾರಿ ಮಾಡಿದೆ. ಅಗ್ನಿಪಥ ಯೋಜನೆ ಭಾಗಿ ಅಗ್ನಿವೀರರ ನೇಮಕ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿತ್ತು. ಆದರೆ ಈ ಯೋಜನೆ ವಿರೋಧಿಸಿ, ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟಗಳಾಗಿದ್ದವು.
ಸಿಕಂದರ್ಬಾದ್ ರೈಲು ನಿಲ್ದಾಣದಲ್ಲಿ ಪ್ರತಿಭಟನಕಾರರು ರೈಲಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿಯನ್ನು ನಡೆಸಿದ್ದರು. ಅದರಲ್ಲಿ ರಾಕೇಶ್ ಎನ್ನುವ ಯುವಕನಿಗೆ ಗುಂಡು ತಗುಲಿ ಮೃತಪಟ್ಟಿದ್ದ. ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆಯನ್ನು, ಹಿಂಸಾತ್ಮಕ ರೂಪಕ್ಕೆ ತಿರುಗುವಂತೆ ಯಾರೋ ಪ್ರಚೋದನೆ ನೀಡಿದ್ದಾರೆ ಎಂಬ ಮಾತಗಳು ಕೇಳಿಬರುತ್ತಿದ್ದ ಬೆನ್ನಲ್ಲೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಇದೀಗ ಈ ವಿಧ್ವಂಸಕ ಕೃತ್ಯದಲ್ಲಿ ಸಾಯಿ ಡಿಫೆನ್ಸ್ ಅಕಾಡೆಮಿ ನಿರ್ದೇಶಕ ಸುಬ್ಬರಾವ್ನ ಕೈವಾಡವಿರುವುದಾಗಿ ಖಚಿತ ಆಧಾರಗಳು ದೊರೆತಿವೆ.
ಜೂನ್ 16ಕ್ಕೆ ಹೈದರಾಬಾದ್‌ಗೆ ಬಂದಿದ್ದ ಸುಬ್ಬರಾವ್:ಜೂನ್ 16ರಂದು ಸುಬ್ಬರಾವ್ ಅವರು ತಮ್ಮ ಹಿಂಬಾಲಕರೊಂದಿಗೆ ಗುಂಟೂರಿನಿಂದ ಹೈದರಾಬಾದ್‌ಗೆ ಆಗಮಿಸಿ, ಸಿಕಂದರಾಬಾದ್ ರೈಲು ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ತಂಗಿದ್ದರು. ತಮ್ಮ ಅನುಯಾಯಿಗಳಾದ ಶಿವ ಹಾಗೂ ಮಲ್ಲಾರೆಡ್ಡಿ ಅವರಿಗೆ ಪ್ರತಿಭಟನಕಾರರನ್ನು ಕರೆ ತನ್ನಿ ಎಂದು ಹೇಳಿದ್ದರು. ನಂತರ ಪ್ರತಿಭಟನಕಾರರೊಂದಿಗೆ ಆ ರಾತ್ರಿ ಪ್ರತಿಭಟನೆ ಕುರಿತು ಸಮಾಲೋಚನೆ ನಡೆಸಿದ್ದಾರೆ. ರೈಲು ನಿಲ್ದಾಣಕ್ಕೆ ನುಗ್ಗಿ ಪ್ರತಿಭಟನೆ ನಡೆಸುವಂತೆ ಸೂಚಿಸಿದ್ದಾರೆ. ವಿಧ್ವಂಸಕ ಕೃತ್ಯ ಆರಂಭವಾದ ಕೆಲವೇ ದಿನಗಳಲ್ಲಿ ಆತ ಗುಂಟೂರಿಗೆ ಪರಾರಿಯಾಗಿದ್ದ ಎಂದು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದರು.
ಅಗ್ನಿಪಥದ ವಿರುದ್ಧ ಸೇನಾ ಆಕಾಂಕ್ಷಿಗಳು ಆಯೋಜಿಸಿದ್ದ ಪ್ರತಿಭಟನೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳಲ್ಲಿ ಸುಬ್ಬರಾವ್ ಭಾಗಿಯಾಗಿದ್ದಾರೆ ಎಂದು ಈ ಹಿಂದೆ ಶಂಕಿಸಿಲಾಗಿತ್ತು. ವಿಧ್ವಂಸಕ ಕೃತ್ಯದ ಅರ್ಧ ಗಂಟೆಯೊಳಗೆ, ಹದಿನೈದು ಪೊಲೀಸ್ ಅಧಿಕಾರಿಗಳು ಮತ್ತು ಮೂವರು ಇನ್ಸ್‌ಪೆಕ್ಟರ್‌ಗಳು, ಪ್ರತಿಭಟನಾಕಾರರಿಂದ ವಶಕ್ಕೆ ಪಡೆದುಕೊಂಡ ಮೊಬೈಲ್ ತನಿಖೆಗೆ ಒಳಪಡಿಸಿದ್ದರು. ಅದರಲ್ಲಿ ಪ್ರತಿಭಟನೆ ಕುರಿತಾಗಿ ರಚಿಸಲಾಗಿದ್ದ, ವಾಟ್ಸ್ಆ್ಯಪ್ ಗ್ರೂಪ್ಗಳನ್ನು ಪರಿಶೀಲಿಸಿ ಗ್ರೂಪ್ನ ಸದಸ್ಯರ ಫೋನ್ ನಂಬರ್ಗಳನ್ನು ತೆಗೆದುಕೊಂಡಿದ್ದರು.