ಕರ್ನಾಟಕ

karnataka

By

Published : Jan 15, 2022, 5:24 PM IST

ETV Bharat / bharat

ಬಂಡಿಪೋರಾದಲ್ಲಿ ಸುಧಾರಿತ ಬಾಂಬ್​ ಸ್ಫೋಟಕ ಪತ್ತೆ.. ಭಾರಿ ಅವಘಡ ತಪ್ಪಿಸಿದ ಸೇನೆ

IED found in Bandipora of Kashmir: ಉತ್ತರ ಕಾಶ್ಮೀರದ ಬಾಗ್​ ಏರಿಯಾದ ತೋಟವೊಂದರಲ್ಲಿ ಸುಧಾರಿತ ಬಾಂಬ್​ ಸ್ಫೋಟಕವನ್ನು ಪೊಲೀಸರು ಮತ್ತು ಸೇನಾಪಡೆಗಳು ಪತ್ತೆ ಮಾಡಿವೆ. ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ತಂಡ ಮತ್ತು ಕಾಶ್ಮೀರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ied
ಸ್ಫೋಟಕ ಪತ್ತೆ

ಬಂಡಿಪೋರಾ(ಜಮ್ಮು-ಕಾಶ್ಮೀರ):ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಹೊಸ್ತಿಲಲ್ಲಿರುವ ದೇಶದ ಜನರಿಗೆ ಭದ್ರತೆಯ ಕಾಟ ಶುರುವಾಗಿದೆ. ನಿನ್ನೆಯಷ್ಟೇ ದೆಹಲಿಯಲ್ಲಿ 3 ಕೆ.ಜಿ. ತೂಕದ ಸುಧಾರಿತ ಬಾಂಬ್ ಸ್ಫೋಟಕ​ ಸಿಕ್ಕ ಬೆನ್ನಲ್ಲೇ ಮತ್ತೆ ಇಂದು ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಸುಧಾರಿತ ಸ್ಫೋಟಕ ಪತ್ತೆಯಾಗಿದೆ.

ಉತ್ತರ ಕಾಶ್ಮೀರದ ಬಾಗ್​ ಏರಿಯಾದ ತೋಟವೊಂದರಲ್ಲಿ ಸುಧಾರಿತ ಬಾಂಬ್​ ಸ್ಫೋಟಕವನ್ನು ಪೊಲೀಸರು ಮತ್ತು ಸೇನಾಪಡೆಗಳು ಪತ್ತೆ ಮಾಡಿವೆ. ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ತಂಡ ಮತ್ತು ಕಾಶ್ಮೀರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ABOUT THE AUTHOR

...view details