ಮಥುರಾ(ಉತ್ತರ ಪ್ರದೇಶ): ದೇಶಾದ್ಯಂತ ಇಂದು ಸಡಗಡ ಸಂಭ್ರಮದಿಂದ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲಾಗುತ್ತಿದೆ. ಉತ್ತರ ಪ್ರದೇಶದ ಮಥುರಾ ಸಮೀಪದಲ್ಲಿ ಹೋಳಿ ಹಬ್ಬದ ನಿಮಿತ್ತ ಉರಿಯುತ್ತಿರುವ ಬೃಹತ್ ಬೆಂಕಿಯ ಜ್ವಾಲೆಯನ್ನು ವ್ಯಕ್ತಿಯೊರ್ವ ಹಾದು ಹೋಗುವ ಪ್ರಾಚೀನಾಕಾಲದ ಸಂಪ್ರದಾಯ ಮೈ ಜುಮ್ ಎನಿಸುವಂತಿದೆ.
ಶೆರ್ಗಢ್ ಪ್ರದೇಶದ ಫಲೇನ್ ಗ್ರಾಮದಲ್ಲಿ ಬೆಂಕಿ ದಾಟುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪಾಂಡವರ ಮನೆತನದ ಮೋನು ಪಂದಳ ಒಂದು ತಿಂಗಳ ಕಠಿಣ ತಪಸ್ಸಿನ ನಂತರ ಹೋಲಿ ದಹನದ ಬೆಂಕಿಯಿಂದ ಹೊರಬಂದು ಪ್ರಹ್ಲಾದ ಕುಂಡದಲ್ಲಿ ಸ್ನಾನ ಮಾಡುತ್ತಾರೆ. ಧಗಧಗನೆ ಉರಿಯುವ ಜ್ವಾಲೆ ನಡುವೆಯೂ ಬರಿಗಾಲಿನಲ್ಲಿ ಹೊರಬರುವ ಮೋನುಗೆ ಮೈಮೇಲೆ ಒಂದೇ ಒಂದು ಸಣ್ಣ ಗಾಯವೂ ಆಗುವುದಿಲ್ಲ.
ಇದನ್ನು ನೋಡಲು ಲಕ್ಷಾಂತರ ಭಕ್ತರು ಫಲೇನ್ ಗ್ರಾಮಕ್ಕೆ ಆಗಮಿಸಿದ್ದರು. ಈ ಗ್ರಾಮವನ್ನು ಪ್ರಹ್ಲಾದ್ ನಗರಿ ಎಂತಲೂ ಕರೆಯುತ್ತಾರೆ. ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿರುವ ಶೇರ್ಗಢ್ ಪ್ರದೇಶದಲ್ಲಿರುವ ಫಲೇನ್‌ನಲ್ಲಿ ವಿಶಿಷ್ಟ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.