ಅಲಿಗಢ(ಉತ್ತರ ಪ್ರದೇಶ): ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದುರ್ಗಾ ದೇವಾಲಯಗಳ ಧ್ವಂಸ ಮತ್ತು ಇಸ್ಕಾನ್ ದೇವಸ್ಥಾನದ ಮೇಲಿನ ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ಹಿಂದೂ ಸಂಘಟನೆಗಳು ಬೀದಿಗಿಳಿದಿವೆ. ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಗಳ ಸದಸ್ಯರು ಇಂದು ಸಾಸ್ನಿ ಗೇಟ್ ಛೇದಕದ ಭೂತೇಶ್ವರ ಮಹಾಬಲಿ ದೇವಸ್ಥಾನದ ಮುಂದೆ ಪ್ರತಿಭಟಿಸಿದ್ದಾರೆ.
ದೇವಸ್ಥಾನದ ಮುಂದೆ ಬಜರಂಗದಳದ ಕಾರ್ಯಕರ್ತರು ಹಾಗೂ ಇತರ ಹಿಂದೂ ಸಂಘಟನೆಗಳು ರಸ್ತೆ ತಡೆದು ರಂಪತ್ ಮತ್ತು ಹನುಮಾನ್ ಚಾಲೀಸ ಪಠಿಸಿದರು. ಘಟನೆ ಸಂಬಂಧ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನೆ ಸಮಯದಲ್ಲಿ ಹಿಂದೂ ಕಾರ್ಯಕರ್ತರು ವಂದೇ ಮಾತರಂ ಮತ್ತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದರು.
ಹಿಂದೂ ಸಂಘಟನೆಗಳಿಂದ ಭಾರೀ ಪ್ರತಿಭಟನೆ ನಮ್ಮ ಸಂಘರ್ಷವು ಸರ್ಕಾರದೊಂದಿಗೆ ಅಲ್ಲ, ಸರ್ಕಾರದೊಂದಿಗೆ ಅಥವಾ ಭದ್ರತಾ ಪಡೆಗಳೊಂದಿಗೆ ಅಲ್ಲ. ಬಾಂಗ್ಲಾದೇಶದಲ್ಲಿ ನಮ್ಮ ದೇಶವು ಒಂದು ಪ್ರಮುಖ ಪಾತ್ರವನ್ನು ವಹಿಸಿದೆ. ಅದೇ ದೇಶದಲ್ಲಿ ಹಿಂದೂಗಳನ್ನು ಈ ರೀತಿ ಹಿಂಸಿಸಲಾಗುತ್ತಿದ್ದರೂ ಸಹ ನಾವು ಮೌನವಾಗಿದ್ದೇವೆ. ಇದನ್ನು ಯಾವುದೇ ರೀತಿಯಲ್ಲಿ ಸಹಿಸಲಾಗದು ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ.
ಆಹುತಿ ಸಂಸ್ಥೆಯ ಅಶೋಕ್ ಚೌಧರಿ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳ ನಂಬಿಕೆಗಳಿಗೆ ಧಕ್ಕೆಯಾಗುತ್ತಿದೆ. ಅಲ್ಲಿನ 22 ಜಿಲ್ಲೆಗಳಲ್ಲಿ ಹಿಂದೂ ದೇವಾಲಯಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆ ಹೋರಾಟದ ಕಾರ್ಯಕ್ರಮವನ್ನು ಶಿಸ್ತಿನಿಂದ ಮುನ್ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.