ಕರ್ನಾಟಕ

karnataka

ETV Bharat / bharat

ಭಾರತಕ್ಕೆ ಫ್ರಾನ್ಸ್‌ನ ಸಹಾಯ ಹಸ್ತ: ಮುಂಬೈಗೆ ಎರಡು ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಹೊತ್ತು ತಂದ ತ್ರಿಕಾಂಡ್

ಹೆಚ್ಚಿನ ಸಂಖ್ಯೆಯ ಕೊರೊನಾ ಹಿನ್ನೆಲೆ ವೈದ್ಯಕೀಯ ಸಹಾಯವನ್ನು ವಿದೇಶದಿಂದ ಭಾರತಕ್ಕೆ ಕಳುಹಿಸಲಾಗುತ್ತಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ತ್ರಿಕಾಂಡ್ ಕತಾರ್ ಬಂದರಿನಿಂದ ಮುಂಬೈಗೆ ತಲಾ 20 ಟನ್ ತೂಕದ 2 ದ್ರವ ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಹೊತ್ತು ತಂದಿದೆ.

By

Published : May 10, 2021, 9:34 PM IST

Help of France to India, two liquid oxygen tankers brought by Indian warship
Help of France to India, two liquid oxygen tankers brought by Indian warship

ಮುಂಬೈ: ಕೊರೊನಾ ಸೋಂಕಿನ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ಅಗತ್ಯವಾಗಿ ಬೇಕಾದ ಆಮ್ಲಜನಕ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಕೊರೊನಾ ಹಿನ್ನೆಲೆ ವೈದ್ಯಕೀಯ ಸಹಾಯವನ್ನು ವಿದೇಶದಿಂದ ಭಾರತಕ್ಕೆ ಕಳುಹಿಸಲಾಗುತ್ತಿದೆ.

ಇದರ ಭಾಗವಾಗಿ ಫ್ರಾನ್ಸ್ ಭಾರತಕ್ಕೆ 40 ಟನ್ ದ್ರವ ಆಮ್ಲಜನಕವನ್ನು ಕಳುಹಿಸಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ತ್ರಿಕಾಂಡ್ ಕತಾರ್ ಬಂದರಿನಿಂದ ಮುಂಬೈಗೆ ತಲಾ 20 ಟನ್ ತೂಕದ 2 ದ್ರವ ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಹೊತ್ತು ತಂದಿದೆ. ಮೇ 5 ರಂದು ಭಾರತೀಯ ನೌಕಾಪಡೆಯ ಹಡಗು ಕತಾರ್‌ನ ಬಂದರಿಗೆ ತಲುಪಿ ಈ ಎರಡೂ ದ್ರವ ಆಮ್ಲಜನಕ ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಭಾರತಕ್ಕೆ ಹೊತ್ತು ತಂದಿದೆ. ಇದನ್ನು ಮುಂಬೈಗೆ ಸರಬರಾಜು ಮಾಡಲಾಗುತ್ತದೆ.

ABOUT THE AUTHOR

...view details