ಜಲಗಾಂವ್ (ಮಹಾರಾಷ್ಟ್ರ):ಜಿಲ್ಲೆಯ ಚಾಲಿಸ್‌ಗಾಂವ್ ರೈಲು ನಿಲ್ದಾಣದ ಬಳಿಯ ವಾಗ್ಲೆ ಗ್ರಾಮದ ಬಳಿ ಎಕ್ಸ್‌ಪ್ರೆಸ್ ರೈಲಿನ ಕೋಚ್ ಮತ್ತು ಇಂಜಿನ್ ಬೇರ್ಪಟ್ಟ ಆಘಾತಕಾರಿ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿದುಬಂದಿದೆ.
ಲೋಕಮಾನ್ಯ ತಿಲಕ್ ಟರ್ಮಿನಸ್ ಪಾಟ್ಲಿಪುತ್ರ ಎಕ್ಸ್‌ಪ್ರೆಸ್ ಮುಂಬೈನಿಂದ ಭೂಸಾವಲ್‌ಗೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಭದ್ರತಾ ಪಡೆ ಮತ್ತು ರೈಲ್ವೆ ಇಲಾಖೆ ನೌಕರರು ಸ್ಥಳಕ್ಕೆ ಧಾವಿಸಿ, ನಂತರ ಬೋಗಿಗಳಿಂದ ದೂರ ಸಂಚರಿಸಿದ್ದ ಎಂಜಿನ್ ಅನ್ನು ಮರಳಿ ತಂದು ಕೋಚ್‌ಗಳಿಗೆ ಜೋಡಿಸಿದ್ದಾರೆ.