ನವದೆಹಲಿ: ಆಸ್ತಿ ಮೇಲಿನ ವ್ಯಾಮೋಹದಿಂದಾಗಿ ಮೊಮ್ಮಗನೋರ್ವ 70 ವರ್ಷದ ಅಜ್ಜಿಯ ಮೇಲೆ ನಾಯಿಯಿಂದ ದಾಳಿ ಮಾಡಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇದರ ಜೊತೆಗೆ ಆಕೆಗೆ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಜ್ಜಿ ಬಳಿ ಇರುವ ಆಸ್ತಿ ದೋಚುವ ಉದ್ದೇಶದಿಂದ ಮೊಮ್ಮಗ ಈ ರೀತಿಯಾಗಿ ನಡೆದುಕೊಂಡಿದ್ದು, ದೆಹಲಿ ಮಹಿಳಾ ಆಯೋಗಕ್ಕೆ ಮಾಹಿತಿ ಗೊತ್ತಾಗುತ್ತಿದ್ದಂತೆ ಇದೀಗ ಆರೋಪಿ ಮೊಮ್ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನೋಟಿಸ್ ಸಹ ಜಾರಿ ಮಾಡಲಾಗಿದೆ.
ಮೊಮ್ಮಗನ ದುಷ್ಕೃತ್ಯದಿಂದ ಬೇಸತ್ತ 70 ವರ್ಷದ ವೃದ್ಧೆ, ಕಳೆದ ಜನವರಿ 20ರಂದು ಸಹಾಯವಾಣಿ ಮೂಲಕ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಇದರ ಬೆನ್ನಲ್ಲೇ ವೃದ್ಧೆಯನ್ನ ಭೇಟಿ ಮಾಡಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಹಾಯ ಮಾಡಿದೆ.
ಪೊಲೀಸ್ರಿಗೆ ನೋಟಿಸ್ ಜಾರಿ ಮಾಡಿದ ಮಹಿಳಾ ಆಯೋಗ ಇದನ್ನೂ ಓದಿರಿ:ಪ್ರಧಾನಿಗೆ ಭದ್ರತೆ ನೀಡುವ ಎಸ್ಪಿಜಿಗೆ ಹೆಚ್ಚಿನ ಅಧಿಕಾರ: ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್
ಪೂರ್ವ ದೆಹಲಿಯ ವಿನೋದ್ ನಗರ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಗೆ ಆಕೆಯ ಮೊಮ್ಮಗ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಕಿರುಕುಳ ನೀಡಿದ್ದಾನೆ. ಇದರ ಜೊತೆಗೆ ನಾಯಿಯಿಂದ ಮೇಲಿಂದ ಮೇಲೆ ದಾಳಿ ಮಾಡಿಸಿ, ಕಚ್ಚಿಸಲು ಪ್ರಯತ್ನಿಸಿದ್ದಾನೆ. ಜನವರಿ 13ರಂದು ದಾಳಿ ಮಾಡಿಸಿದಾಗ ಅದು ಅಜ್ಜಿಗೆ ಕಚ್ಚಿ, ಗಾಯಗೊಳಿಸಿದೆ.
ಮಹಿಳಾ ಆಯೋಗದ ತಂಡ ಅಜ್ಜಿಯನ್ನ ಭೇಟಿ ಮಾಡಿರುವ ಸಂದರ್ಭದಲ್ಲಿ ಆಕೆಯ ಕೈಯಲ್ಲಿ ನಾಯಿ ಕಚ್ಚಿರುವ ತೀವ್ರ ಗಾಯ ಕಂಡು ಬಂದಿದೆ. ಈ ವೇಳೆ ಪ್ರಕರಣದ ಗಂಭೀರತೆ ಅರಿತು ಆರೋಪಿಯ ಬಂಧನಕ್ಕೆ ನೋಟಿಸ್ ಜಾರಿ ಮಾಡಿದೆ.
ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ