ನವದೆಹಲಿ :ಕೋವಿಡ್ ನಂತರ ಭಾರತದಲ್ಲಿ ಆರ್ಥಿಕವಾಗಿ ಸಾಕಷ್ಟು ನಷ್ಟಕ್ಕೊಳಗಾದ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ನೆರವಿಗೆ ಗೂಗಲ್ ಸಂಸ್ಥೆ ಬಂಡವಾಳ ಹೂಡುವುದಾಗಿ ಘೋಷಿಸಿದೆ.
ಸುಮಾರು 15 ಮಿಲಿಯನ್ ಡಾಲರ್ (190 ಕೋಟಿ ರೂಪಾಯಿ) ನೀಡುವುದಾಗಿ ಘೋಷಣೆ ಮಾಡಿದ್ದು, ಅಮೆರಿಕದಿಂದ ಹೊರಗೆ ಸಣ್ಣ ಉದ್ಯಮಗಳಿಗೆ ನೆರವು ನೀಡುವ 75 ಮಿಲಿಯನ್ ಡಾಲರ್ ಬಂಡವಾಳ ಹೂಡುವ ಒಪ್ಪಂದದ ಭಾಗವಾಗಿದೆ.
ಭಾರತದಲ್ಲಿ ನಾವು 15 ಮಿಲಿಯನ್ ಡಾಲರ್‌ನ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ನೆರವು ನೀಡುವ ಸಲುವಾಗಿ ಹೂಡಿಕೆ ಮಾಡುತ್ತಿದ್ದೇವೆ. ಈ ಬಗ್ಗೆ ಸ್ಥಳೀಯ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಗೂಗಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 378 ಮಂದಿಗೆ ಕೊರೊನಾ ದೃಢ: ಮೂವರು ಸೋಂಕಿತರು ಬಲಿ
ಸರ್ಕಾರೇತರ ಸಂಸ್ಥೆಗಳೊಂದಿಗೆ ಬಂಡವಾಳ ಹೂಡಿಕೆ ಮಾಡಲಿದ್ದು, ಈ ಸಂಸ್ಥೆಗಳು ದೀರ್ಘಕಾಲದಿಂದ ವ್ಯವಹಾರಗಳಿಗೆ ಸಂಪನ್ಮೂಲ ಒದಗಿಸುವಲ್ಲಿ ಸಫಲತೆ ಹೊಂದಿರಬೇಕೆಂದು ಗೂಗಲ್ ಹೇಳಿದೆ.
ಹಿಂದಿನ ವರ್ಷ ಕೊರೊನಾ ಸೋಂಕು ಹಾವಳಿಯ ವೇಳೆ 800 ಮಿಲಿಯನ್ ಡಾಲರ್ಗಿಂತ ಹೂಡಿಕೆಯ ಒಪ್ಪಂದವಾಗಿದ್ದು, ಇದರ ಅಂಗವಾಗಿ 200 ಮಿಲಿಯನ್ ಡಾಲರ್‌ನ ಸಣ್ಣ ಉದ್ಯಮಗಳಿಗೆ ಬೆಂಬಲ ನೀಡಲು ಹೂಡಿಕೆ ಮಾಲಾಗಿತ್ತು.
ಗೂಗಲ್ ವಿಶ್ವದಾದ್ಯಂತ ಇರುವ ಸಣ್ಣ ಉದ್ಯಮಗಳೊಂದಿಗೆ ವಿಶೇಷ ಸಂಬಂಧ ಹೊಂದಿದೆ. ಆ ಉದ್ಯಮಗಳಲ್ಲಿ ಅನ್ವೇಷಣೆ ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಸಹಕಾರ ನೀಡುತ್ತಿದ್ದೇವೆ. ಅವುಗಳ ಚೇತರಿಕೆಗೆ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿಕೆ ನೀಡಿದೆ.