ಕರ್ನಾಟಕ

karnataka

By

Published : Jan 9, 2022, 3:40 PM IST

Updated : Jan 9, 2022, 6:05 PM IST

ETV Bharat / bharat

ಬೆಲ್ಟ್​ನಲ್ಲಿ ಚಿನ್ನ ಸಾಗಣೆ : 2,330 ಗ್ರಾಂ ಬಂಗಾರ ವಶಪಡಿಸಿಕೊಂಡ ದೆಹಲಿ ಏರ್ ಕಸ್ಟಮ್

ಈವರೆಗೆ ಈತ ದುಬೈನಿಂದ ಸುಮಾರು ಎರಡು ಕೋಟಿ 60 ಲಕ್ಷ ಮೌಲ್ಯದ ಚಿನ್ನವನ್ನೂ ಈ ರೀತಿಯೇ ತಂದಿದ್ದಾನೆ ಎಂದು ತಿಳಿದು ಬಂದಿದೆ. ಇದಲ್ಲದೆ, ದೆಹಲಿ ಏರ್ ಕಸ್ಟಮ್ ತಂಡವು ಈ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಯನ್ನು ವಿಚಾರಣೆ ನಡೆಸುತ್ತಿದೆ..

2,330 ಗ್ರಾಂ ಬಂಗಾರ ವಶಪಡಿಸಿಕೊಂಡ ದೆಹಲಿ ಏರ್ ಕಸ್ಟಮ್
2,330 ಗ್ರಾಂ ಬಂಗಾರ ವಶಪಡಿಸಿಕೊಂಡ ದೆಹಲಿ ಏರ್ ಕಸ್ಟಮ್

ನವದೆಹಲಿ: ದೆಹಲಿ ಏರ್ ಕಸ್ಟಮ್ ತಂಡವು 2,330 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಹೇಳಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಶನಿವಾರ ಬೆಳಗ್ಗೆ ದುಬೈನಿಂದ ದೆಹಲಿಗೆ ಬಂದಿದ್ದ. ಈ ವೇಳೆ ವಿಚಾರಣೆ ನಡೆಸಿದಾಗ ಆರೋಪಿ ತನ್ನ ಸೊಂಟದಲ್ಲಿ ಕಟ್ಟಿದ್ದ ಬೆಲ್ಟ್​ ಮೂಲಕ ಚೈನ್ ರೂಪದಲ್ಲಿ ಚಿನ್ನ ಅಡಗಿಸಿಟ್ಟುಕೊಂಡಿದ್ದ.

ಆರೋಪಿ ಬಂಧಿಸಿ ಬೆಲ್ಟ್​ನಲ್ಲಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ನಾಲ್ಕು ಬಾರಿ ಇಂತಹ ಕಳ್ಳಸಾಗಣೆ ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

2,330 ಗ್ರಾಂ ಬಂಗಾರ ವಶಪಡಿಸಿಕೊಂಡ ದೆಹಲಿ ಏರ್ ಕಸ್ಟಮ್

ಈವರೆಗೆ ಈತ ದುಬೈನಿಂದ ಸುಮಾರು ಎರಡು ಕೋಟಿ 60 ಲಕ್ಷ ಮೌಲ್ಯದ ಚಿನ್ನವನ್ನೂ ಈ ರೀತಿಯೇ ತಂದಿದ್ದಾನೆ ಎಂದು ತಿಳಿದು ಬಂದಿದೆ. ಇದಲ್ಲದೆ, ದೆಹಲಿ ಏರ್ ಕಸ್ಟಮ್ ತಂಡವು ಈ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಯನ್ನು ವಿಚಾರಣೆ ನಡೆಸುತ್ತಿದೆ.

ಬಂಧಿತ ಆರೋಪಿ ಭಾರತದ ನಿವಾಸಿವಾಗಿದ್ದು, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೊತೆಗಿರುವ ಇತರ ವ್ಯಕ್ತಿಗಳು ಯಾರು ಎಂಬ ಬಗ್ಗೆಯೂ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Last Updated : Jan 9, 2022, 6:05 PM IST

ABOUT THE AUTHOR

...view details