ಕರ್ನಾಟಕ

karnataka

By

Published : Jul 11, 2021, 8:27 PM IST

ETV Bharat / bharat

ಗೋವಾದಲ್ಲಿ ಕೊರೊನಾ ಕರ್ಫ್ಯೂ ಕಾಲಾವಧಿ ಜುಲೈ 19 ರವರೆಗೆ ವಿಸ್ತರಣೆ

ಕೊರೊನಾ ಮತ್ತಷ್ಟು ತಡೆಗೆ ಗೋವಾ ರಾಜ್ಯದಲ್ಲಿ ಕರ್ಫ್ಯೂ ಕಾಲಾವಧಿಯನ್ನು ಜುಲೈ 19 ರವರೆಗೆ ವಿಸ್ತರಣೆ ಮಾಡಲಾಗಿದೆ.

Goa extends Covid curfew till 19 July
ಗೋವಾದಲ್ಲಿ ಕೊರೊನಾ ಕರ್ಫ್ಯೂ ಕಾಲಾವಧಿ ಜುಲೈ 19 ರ ವರೆಗೆ ವಿಸ್ತರಣೆ

ಪಣಜಿ (ಗೋವಾ): ಕೋವಿಡ್ -19 ಪಾಸಿಟಿವ್‌ ದರವು ಶೇಕಡಾ 3-4 ಕ್ಕೆ ತಲುಪಿದ್ದು, ಕೊರೊನಾ ಮತ್ತಷ್ಟು ತಡೆಗೆ ಗೋವಾ ರಾಜ್ಯದಲ್ಲಿ ಕರ್ಫ್ಯೂ ಕಾಲಾವಧಿಯನ್ನು ಜುಲೈ 19 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಅಲ್ಲದೇ ಹಲವು ರಿಯಾಯತಿಗಳೊಂದಿಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಸರ್ಕಾರವು ಕಳೆದ ವಾರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕೂಟಗಳು, ಮದುವೆಗಳು ಮತ್ತು ಇತರ ಸಭೆಗಳಿಗೆ 100 ಜನರ ಅಥವಾ ಸ್ಥಳ ಸಾಮರ್ಥ್ಯದ ಶೇಕಡಾ 50ರಷ್ಟನ್ನು ಅನುಮತಿಸಿತ್ತು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೊರೊನಾ ಕರ್ಫ್ಯೂ ಆದೇಶವನ್ನು ಜುಲೈ 21, 2021 ರಂದು ಬೆಳಿಗ್ಗೆ 7 ಗಂಟೆಯವರೆಗೆ ವಿಸ್ತರಿಸಲಾಗಿದೆ. ಕೆಲವು ರಿಯಾಯಿತಿ ನೀಡಲಾಗಿದ್ದು, ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಜಿಮ್ ತೆರೆಯಲು ಅನುವು ಮಾಡಿಕೊಡಲಾಗಿದೆ. ಪ್ರೇಕ್ಷಕರು ಇಲ್ಲದ ಕ್ರೀಡಾ ಸಂಕೀರ್ಣ, ಧಾರ್ಮಿಕ ಸ್ಥಳಗಳಲ್ಲಿ 15 ವ್ಯಕ್ತಿಗಳ ಪ್ರವೇಶಕ್ಕೆ ಅನುಮತಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಸದ್ಯ ಆರಂಭದಲ್ಲಿರುವ ಕರ್ಫ್ಯೂ ಜುಲೈ 12 ರಂದು ಬೆಳಿಗ್ಗೆ 7 ಗಂಟೆಗೆ ಮುಕ್ತಾಯಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯದಲ್ಲಿ ಕರ್ಫ್ಯೂ ಕಾಲಾವಧಿಯನ್ನು ಜುಲೈ 19 ರವರೆಗೆ ವಿಸ್ತರಣೆ ಮಾಡಲಾಗಿದೆ. ಸರ್ಕಾರ ಕೆಲ ರಿಯಾಯತಿಯನ್ನು ನೀಡಿದ್ದು, ಸಭೆ ಸಮಾರಂಭಗಳನ್ನು 100 ಜನರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಮಾನ್ಯತೆ ಪಡೆದು ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ. ಧಾರ್ಮಿಕ ಸ್ಥಳಗಳನ್ನು 15 ಜನರ ಉಪಸ್ಥಿತಿಯಲ್ಲಿ ನಡೆಸಲು ಅನುಮತಿ ನೀಡಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತೆರೆಯಲು ಅವಕಾಶ ನೀಡಿದೆ.

ಗೋವಾದಲ್ಲಿ ಶುಕ್ರವಾರ 220 ಹೊಸ ಪ್ರಕರಣಗಳು ವರದಿಯಾಗಿವೆ. ಕೋವಿಡ್ -19 ಗೆ ಇಬ್ಬರು ಬಲಿಯಾಗಿದ್ದಾರೆ. ಚೇತರಿಕೆ ಪ್ರಮಾಣ 97% ಕ್ಕೆ ತಲುಪಿದೆ.

ಇದನ್ನೂ ಓದಿ:ಉತ್ತರಾಖಂಡದಲ್ಲಿ ಅಧಿಕಾರಕ್ಕೆ ಬಂದ್ರೆ 300 ಯೂನಿಟ್‌ ವಿದ್ಯುತ್ ಫ್ರೀ: ಆಮ್ ಆದ್ಮಿ ಪಾರ್ಟಿ ಭರವಸೆ

ABOUT THE AUTHOR

...view details