ಕರ್ನಾಟಕ

karnataka

'ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗುವ ಹುಡುಗಿಯರ ಕೊಲೆ, ಮಾಂಸದ ವ್ಯಾಪಾರಕ್ಕೆ ಒತ್ತಾಯಿಸಲಾಗ್ತದೆ' : ಬಿಹಾರ ಡಿಜಿಪಿ

ಪೋಷಕರು ಪ್ರತಿದಿನ ತಮ್ಮ ಮಕ್ಕಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಬೇಕೆಂದು ನಾನು ಮನವಿ ಮಾಡುತ್ತೇನೆ. ಅವರಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಇದರ ಜೊತೆಗೆ ಅವರ ಭಾವನೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು..

By

Published : Dec 31, 2021, 7:31 PM IST

Published : Dec 31, 2021, 7:31 PM IST

Bihar DGP SK Singhal
Bihar DGP SK Singhal

ಸಮಸ್ತಿಪುರ(ಬಿಹಾರ):ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗುವ ಅನೇಕ ಹುಡುಗಿಯರನ್ನ ಕೊಲೆ ಮಾಡಲಾಗುತ್ತದೆ ಅಥವಾ ಮಾಂಸದ ವ್ಯಾಪಾರಕ್ಕೆ ಒತ್ತಾಯ ಮಾಡಲಾಗುತ್ತಿದೆ ಎಂದು ಬಿಹಾರದ ಡಿಜಿಪಿ ಎಸ್​ಕೆ ಸಿಂಘಾಲ್ ವಿವಾದಿತ​ ಹೇಳಿಕೆ ನೀಡಿದ್ದಾರೆ.

'ಸಮಾಜ ಸುಧಾರ್​' ಅಭಿಯಾನದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಎಸ್​ಕೆ ಸಿಂಘಾಲ್​ ಈ ರೀತಿಯಾಗಿ ಹೇಳಿಕೆ ನೀಡಿದ್ದು, ಪೋಷಕರು ತಮ್ಮ ಮಕ್ಕಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಬೇಕು ಮತ್ತು ಅವರಿಗೆ ಉತ್ತಮವಾದ ಮೌಲ್ಯಗಳನ್ನ ಕಲಿಸಬೇಕೆಂದು ಸಲಹೆ ನೀಡಿದ್ದಾರೆ.

ಮದುವೆ ಮಾಡಿಕೊಳ್ಳಲು ಹೆಣ್ಣು ಮಕ್ಕಳು ಪೋಷಕರ ಒಪ್ಪಿಗೆಯಿಲ್ಲದೆ ಮನೆ ತೊರೆದ ಅನೇಕ ಪ್ರಕರಣ ನಾವು ನೋಡಿದ್ದೇವೆ. ಅವರಲ್ಲಿ ಅನೇಕ ಯುವತಿಯರನ್ನ ಕೊಲೆ ಮಾಡಲಾಗುತ್ತದೆ. ಕೆಲವರನ್ನ ಮಾಂಸದ ವ್ಯಾಪಾರಕ್ಕೆ ಒತ್ತಾಯಿಸಲಾಗುತ್ತದೆ. ಮಕ್ಕಳ ಇಂತಹ ನಿರ್ಧಾರದಿಂದ ಪೋಷಕರು ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.

ಪೋಷಕರು ಪ್ರತಿದಿನ ತಮ್ಮ ಮಕ್ಕಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಬೇಕೆಂದು ನಾನು ಮನವಿ ಮಾಡುತ್ತೇನೆ. ಅವರಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಇದರ ಜೊತೆಗೆ ಅವರ ಭಾವನೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿರಿ: ಇದು ಬಿಜೆಪಿ ಹಣವಲ್ಲ.. ಯುಪಿಯಲ್ಲಿ ಸಿಕ್ಕ ₹200 ಕೋಟಿ ಬಗ್ಗೆ ವಿತ್ತ ಸಚಿವೆ ಸೀತಾರಾಮನ್​

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​​ ಆಯೋಜನೆ ಮಾಡಿದ್ದ ಸಮಾಜ ಸುಧಾರ್​ ಅಭಿಯಾನದಲ್ಲಿ ಭಾಗಿಯಾಗಿ ಸಿಘಾಲ್​ ಈ ರೀತಿಯಾಗಿ ಮಾತನಾಡಿದ್ದು, ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ವ್ಯಸನ, ವರದಕ್ಷಿಣೆ ಪದ್ಧತಿ ನಿರ್ಮೂಲನೆ ಮತ್ತು ಬಾಲ್ಯವಿವಾಹ ಹೊಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ABOUT THE AUTHOR

...view details