ಗಾಜಿಪುರ(ಉತ್ತರಪ್ರದೇಶ):ತನ್ನ ಕೋಳಿಗಳನ್ನು ವ್ಯಕ್ತಿಯೊಬ್ಬ ದ್ವೇಷದಿಂದ ಹೊಡೆದು ಸಾಯಿಸಿದ್ದಾನೆ ಎಂದು ಆರೋಪಿಸಿ ಮಹಿಳೆ ಸತ್ತ ಕೋಳಿಯನ್ನು ಹಿಡಿದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ 'ಕೋಳಿ' ಜಗಳ! - ಕೋಳಿ ಮಾರಣಹೋಮ ಸುದ್ದಿ
ವ್ಯಕ್ತಿಯೊಬ್ಬ ದ್ವೇಷದಿಂದ ಕೋಳಿಗಳನ್ನು ಸಾಯಿಸಿದ್ದಾನೆ ಎಂದು ಆರೋಪಿಸಿದ ಮಹಿಳೆ, ಸತ್ತ ಕೋಳಿಗಳನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಇನ್ನು ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
'ಕೋಳಿ' ಜಗಳ
ಸತ್ತ ಕೋಳಿಯೊಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮಹಿಳೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. "ಅರ್ಜುನ್ ಎಂಬಾತ ನನ್ನ ಕೋಳಿಯನ್ನು ದ್ವೇಷದಿಂದ ಕೊಂದಿದ್ದಾನೆ. ಈ ಕೋಳಿ ನಮ್ಮ ಆದಾಯದ ಮೂಲವಾಗಿತ್ತು. ಇದೀಗ ನಮ್ಮ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿದೆ" ಎಂದು ಅಳಲು ತೋಡಿಕೊಂಡಿದ್ದಾಳೆ. ಈ ಘಟನೆ ಕೊಟ್ವಾಲಿ ಪ್ರದೇಶದ ಕನ್ಶಿ ರಾಮ್ ನಿವಾಸದ ಬಳಿ ನಡೆದಿದೆ ಎಂದು ತಿಳಿದು ಬಂದಿದೆ.
Last Updated : Jul 1, 2021, 2:30 PM IST