ಕರ್ನಾಟಕ

karnataka

ETV Bharat / bharat

ಕೊಚ್ಚಿ ವಿಶ್ವವಿದ್ಯಾಲಯದ ಟೆಕ್​ ಫೆಸ್ಟ್​ನಲ್ಲಿ ಕಾಲ್ತುಳಿತ: ನಾಲ್ವರ ಸಾವು, 60ಕ್ಕೂ ಹೆಚ್ಚಿನ ಜನರಿಗೆ ಗಾಯ ​

Stampede in Kochi University: ಟೆಕ್​ ಫೆಸ್ಟ್​ನಲ್ಲಿ ಕಾಲ್ತುಳಿತ ಉಂಟಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಕೇರಳದ ಕೊಚ್ಚಿ ವಿಶ್ವವಿದ್ಯಾಲಯದಲ್ಲಿ ಜರುಗಿದೆ.

By ETV Bharat Karnataka Team

Published : Nov 25, 2023, 9:11 PM IST

Updated : Nov 25, 2023, 10:30 PM IST

ಕೊಚ್ಚಿಯ ವಿಶ್ವವಿದ್ಯಾಲಯದ ಟೆಕ್​ ಫೆಸ್​ನಲ್ಲಿ ಕಾಲ್ತುಳಿತ
ಕೊಚ್ಚಿಯ ವಿಶ್ವವಿದ್ಯಾಲಯದ ಟೆಕ್​ ಫೆಸ್​ನಲ್ಲಿ ಕಾಲ್ತುಳಿತ

ಕೊಚ್ಚಿ:ಕೇರಳದಕೊಚ್ಚಿ ವಿಶ್ವವಿದ್ಯಾಲಯದಲ್ಲಿ ನಡೆದ ಟೆಕ್​ ಫೆಸ್ಟ್​ನಲ್ಲಿ ಕಾಲ್ತುಳಿತ ಉಂಟಾಗಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಅನೇಕ ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರನ್ನು ಗುರುತಿಸಲಾಗಿದೆ. ಕೂತತುಕುಲಂನಿಂದ ಅತುಲ್ ತಂಬಿ ಮತ್ತು ಉತ್ತರ ಪರವೂರಿದ ಅಂದ್ರಿಫ್ತಾ ಎಂದು ಗುರುತಿಸಲಾಗಿದೆ. ಇನ್ನೂ ನಾಲ್ವರ ಸ್ಥಿತಿ ಗಂಭಿರವಾಗಿದೆ ಎಂದು ತಿಳಿದು ಬಂದಿದೆ

ಇಲ್ಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಟೆಕ್ ಫೆಸ್ಟ್ ಆಯೋಜಿಸಲಾಗಿತ್ತು. ಸಭಾಂಗಣದಲ್ಲಿ ಖ್ಯಾತ ಗಾಯಕಿ ನಿಕಿತಾ ಗಾಂಧಿ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ನೂಕುನುಗ್ಗಲು ಉಂಟಾಗಿ ನಾಲ್ವರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಇಲ್ಲಿಯ ಕಲಮಸ್ಸೆರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಗಾಯನ ವೇಳೆ ವಿದ್ಯಾರ್ಥಿಗಳು ಸಭಾಂಗಣದಲ್ಲಿ ನೃತ್ಯ ಮಾಡುತ್ತಿದ್ದರು. ಇದೇ ವೇಳೆ, ದಿಢೀರ್​ ಮಳೆ ಸುರಿದಿದ್ದರಿಂದ ಹೊರಗಿದ್ದ ವಿದ್ಯಾರ್ಥಿಗಳು ಏಕಾಏಕಿ ಸಭಾಂಗಣ ಒಳಗೆ ಓಡಿ ಹೋಗಲು ಆರಂಭಿಸಿದ್ದಾರೆ. ಪರಿಣಾಮ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವೆ:ಘಟನೆ ಬಗ್ಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಪ್ರತಿಕ್ರಿಯೆ ನೀಡಿದ್ದಾರೆ. ಟೆಕ್​ ಫೆಸ್ಟ್​ ಕಾರ್ಯಕ್ರಮದ ಕೊನೆಯ ದಿನವಾದ ಇಂದು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ ವಿದ್ಯಾರ್ಥಿಗಳ ಕಾಲ್ತುಳಿತ ಉಂಟಾಗಿದೆ. ಈ ವರೆಗೂ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಕೊಚ್ಚಿ ವಿಶ್ವವಿದ್ಯಾಲಯದ ವೈಸ್​ ಚಾನ್ಸೆಲರ್​ ಡಾ. ಶಂಕರನ್​ ಮಾತನಾಡಿ, ಟೆಕ್​ ಫೆಸ್ಟ್ ಅಂಗವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 2000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥಿರ್ಗಳು ಭಾಗಿಯಾಗಿದ್ದರು. ಮಳೆಯಿಂದ ವಿದ್ಯಾರ್ಥಿಗಳು ಸಭಾಂಗಣದೊಳಗೆ ಬರಲು ಮುಂದಾದ ವೇಳೆ ನೂಕುನುಗ್ಗಲು ಉಂಟಾಗಿ ಕೆಲ ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.

ಒಂದೇ ಗೇಟ್​​ ಮೂಲಕ ಪ್ರವೇಶ - ನಿರ್ಗಮನ ದ್ವಾರ ಮಾಡಿದ್ದೇ ಘಟನೆಗೆ ಕಾರಣ:ಪುರಸಭಾ ಸದಸ್ಯ ಪ್ರಮೋದ್ ಪ್ರತಿಕ್ರಿಯಿಸಿ, ಒಂದೇ ಗೇಟ್‌ನಿಂದ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಮಾಡಿದರಿಂದ ಕಾಲ್ತುಳಿತಕ್ಕೆ ಕಾರಣವಾಯಿತು. ಮಳೆ ಬಂದ ವೇಳೆ ವಿದ್ಯಾರ್ಥಿಗಳು ಅದೇ ಗೇಟ್‌ನಿಂದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದರು, ಕಡಿದಾದ ಮೆಟ್ಟಿಲುಗಳಿದ್ದ ಕಾರಣ ಕೆಲ ವಿದ್ಯಾರ್ಥಿಗಳು ಕೆಳಗೆ ಬಿದ್ದ ಪರಿಣಾಮ ಹೀಗಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರೀಶಿಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಯುವತಿಗೆ ಕಿರುಕುಳ ಆರೋಪ: ದಲಿತ ಯುವಕನಿಗೆ ಥಳಿಸಿ, ಮೂತ್ರ ಕುಡಿಸಿ, ಹುಬ್ಬುಗಳ ಕಿತ್ತು ಕ್ರೌರ್ಯ

Last Updated : Nov 25, 2023, 10:30 PM IST

ABOUT THE AUTHOR

...view details