ಭುಜ್ (ಗುಜರಾತ್) :ಭುಜ್‌ನ ದಂಡಾ ಬಜಾರ್‌ನಲ್ಲಿ ಶ್ರೀನಾಥಜಿ ಸ್ವೀಟ್ಸ್ ಎಂಬ ಅಂಗಡಿ ಇದೆ. ಈ ಅಂಗಡಿ 75 ವರ್ಷಕ್ಕಿಂತ ಹಳೆಯದು. ಮೂಲ ಮಾಲೀಕ ಜಯಂತಿಲಾಲ್ ರತಂಶಿ ಜೋಶಿ ಮತ್ತು ಅವರ ಅಳಿಯ ಪ್ರದೀಪ್ ಈಸ್ವರಲಾಲ್ ಜೋಶಿ ಕಳೆದ 40 ವರ್ಷಗಳಿಂದ ಅಂಗಡಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಇದರಲ್ಲೇನು ವಿಶೇಷ ಇದೆ ಎಂದುಕೊಳ್ಳಬಹುದು. ಹೌದು, ಇದರಲ್ಲಿ ಒಂದು ವಿಶಿಷ್ಟತೆ ಇದೆ.
40 ವರ್ಷಗಳಿಂದ ಪ್ರದೀಪ ಜೋಶಿ ಬೆಳಗ್ಗೆಯಿಂದ ಸಂಜೆಯವರೆಗೆ ಯಾವುದೇ ಭಿಕ್ಷುಕ ಬಂದರೆ ಅವರಿಗೆ ಬೇಕಾದಷ್ಟು ತಿನಿಸು ಕೊಟ್ಟು ಕಳುಹಿಸುತ್ತಾರೆ.ಪ್ರದೀಪ್ ಜೋಶಿ ಅವರು ಬೆಳಗ್ಗೆ ಅಂಗಡಿ ತೆರೆಯುತ್ತಾರೆ ಇವರಿಗೆ ಮೊದಲ ಗ್ರಾಹಕರು ಹೆಚ್ಚಾಗಿ ಭಿಕ್ಷುಕರೇ ಆಗಿರುತ್ತಾರೆ. ಅವರ ಸೇವೆ ಮಾಡುವ ಮೂಲಕ ಜೋಶಿ ವ್ಯವಹಾರವನ್ನು ಪ್ರಾರಂಭಿಸುತ್ತಾರೆ.
ಬೆಳಗ್ಗೆ ಬೂಂದಿ, ಜಿಲೇಬಿ, ಮೋಹನ್ ತಾಲ್, ಸಾಟ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಏಕಕಾಲಕ್ಕೆ ಭಿಕ್ಷುಕರು ಸಮಯಕ್ಕೆ ತಕ್ಕಂತೆ ಬಂದು ತಮಗೆ ಬೇಕಾದಷ್ಟು ಸಿಹಿತಿಂಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ.