ಕರ್ನಾಟಕ

karnataka

ETV Bharat / bharat

ಡಿವೈಡರ್​ನಿಂದ ಹಾರಿ ಎರಡು ಬೈಕ್​ ಮತ್ತು ಕಾರಿಗೆ ಗುದ್ದಿದ ಟ್ರಕ್​: ಐವರ ಸಾವು, ಐವರಿಗೆ ಗಾಯ! - ಮಹಾರಾಷ್ಟ್ರ ಅಪರಾಧ ಸುದ್ದು

ಎದುರಿನಿಂದ ಬರುತ್ತಿದ್ದ ಕಾರು ಹಾಗೂ ಎರಡು ಬೈಕ್​ಗಳಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸಾವು - ನೋವು ಸಂಭವಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಬೈಕ್​ ಮತ್ತು ಕಾರ್​ಗೆ ಗುದ್ದಿದ ಟ್ರಕ್​
ಐವರು ಸಾವು, ಐವರಿಗೆ ಗಾಯ

By

Published : Jan 24, 2022, 11:48 AM IST

Updated : Jan 24, 2022, 3:37 PM IST

ಪುಣೆ:ಪುಣೆ - ಅಹ್ಮದನಗರ ರಸ್ತೆಯಲ್ಲಿ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿ ಐವರು ಸಾವನ್ನಪ್ಪಿದ್ದು, ಐವರಿಗೆ ಗಾಯಗಳಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಐವರು ಸಾವು, ಐವರಿಗೆ ಗಾಯ

ಟ್ರಕ್ ಪುಣೆಯಿಂದ ಅಹ್ಮದನಗರಕ್ಕೆ ತೆರಳುತ್ತಿತ್ತು. ಕಾರು ಮತ್ತು ದ್ವಿಚಕ್ರ ವಾಹನ ಅಹ್ಮದನಗರದಿಂದ ಪುಣೆ ಕಡೆಗೆ ಸಂಚರಿಸುತ್ತಿದ್ದವು. ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಡಿವೈಡರ್​​​ಗೆ ಗುದ್ದಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿದೆ. ಪರಿಣಾಮ ಎದುರಿಗೆ ಬರುತ್ತಿದ್ದ ಕಾರು ಮತ್ತು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ.

ಓದಿ:ಹೊಸಗನ್ನಡದ ಕವಿ ಮುದ್ದಣ ಹೆಸರಲ್ಲಿ 150 ರೂ.ನಾಣ್ಯ ಅನಾವರಣ

ಟ್ರಕ್​ ಡಿಕ್ಕಿಯಾದ ರಭಸಕ್ಕೆ ದಂಪತಿ ವಿಠ್ಠಲ್ ಹಿಂಗಾಡೆ ಮತ್ತು ರೇಷ್ಮಾ ಹಿಂಗಾಡೆ ಸೇರಿದಂತೆ ಕಾರಿನಲ್ಲಿದ್ದ ಲೀನಾ ನಿಕ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಿಬ್ಬರ ಹೆಸರುಗಳು ಇನ್ನಷ್ಟೇ ಪತ್ತೆಯಾಗಬೇಕಿದೆ. ಇನ್ನು ಈ ಘಟನೆಯಲ್ಲಿ ಸುಮಾರು ಐವರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೃತ ದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಐವರು ಸಾವು, ಐವರಿಗೆ ಗಾಯ

ಈ ಘಟನೆ ಕುರಿತು ಶಿಕ್ರಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 24, 2022, 3:37 PM IST

ABOUT THE AUTHOR

...view details