ಕರ್ನಾಟಕ

karnataka

ETV Bharat / bharat

ಚೆಕ್​ಬೌನ್ಸ್​ ಪ್ರಕರಣ : ಮಹೇಂದ್ರ ಸಿಂಗ್ ಧೋನಿ ವಿರುದ್ಧ ಪ್ರಕರಣ - 30 ಲಕ್ಷಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಧೋನಿ

30 ಲಕ್ಷಗಳ ಚೆಕ್‌ಬೌನ್ಸ್ ಪ್ರಕರಣ ಇದಾಗಿದೆ. ಧೋನಿ ಉತ್ಪನ್ನವೊಂದರ ಪ್ರಚಾರಕರೂ ಆಗಿದ್ದು, ಕಂಪನಿಯ ಅಧ್ಯಕ್ಷರೂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ..

ಮಹೇಂದ್ರ ಸಿಂಗ್ ಧೋನಿ ವಿರುದ್ಧ ಪ್ರಕರಣ ದಾಖಲು
ಮಹೇಂದ್ರ ಸಿಂಗ್ ಧೋನಿ ವಿರುದ್ಧ ಪ್ರಕರಣ ದಾಖಲು

By

Published : May 30, 2022, 7:03 PM IST

ಬೇಗುಸರಾಯ್(ಬಿಹಾರ್​): ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಎಂಟು ಮಂದಿಯ ವಿರುದ್ಧ ಬಿಹಾರದ ಬೇಗುಸರಾಯ್ ಸಿಜೆಎಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. 30 ಲಕ್ಷಗಳ ಚೆಕ್ ಬೌನ್ಸ್ ಪ್ರಕರಣ ಇದಾಗಿದೆ. ಧೋನಿ ಉತ್ಪನ್ನವೊಂದರ ಪ್ರಚಾರಕರೂ ಆಗಿದ್ದು, ಕಂಪನಿಯ ಅಧ್ಯಕ್ಷರೂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬೇಗುಸರಾಯ್ ಸಿಜೆಎಂ ಕೋರ್ಟ್‌ನಲ್ಲಿ ಡಿಎಸ್ ಎಂಟರ್‌ಪ್ರೈಸಸ್‌ನ ಮಾಲೀಕರು ಈ ಪ್ರಕರಣ ದಾಖಲಿಸಿದ್ದಾರೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಜೂನ್ 28ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.

ಧೋನಿ ಸೇರಿ 8 ಮಂದಿ ವಿರುದ್ಧ ಎಫ್‌ಐಆರ್‌ : ಈ ಪ್ರಕರಣದಲ್ಲಿ ದೂರುದಾರ ನೀರಜ್‌ಕುಮಾರ್‌ ನಿರಾಲಾ ಅವರು ಸಂಸ್ಥೆಯ ಸದಸ್ಯರು ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಏನಿದು ಪ್ರಕರಣದ?: ದೂರುದಾರರಾದ ಡಿಎಸ್ ಎಂಟರ್‌ಪ್ರೈಸಸ್‌ನ ಮಾಲೀಕ ನೀರಜ್ ಕುಮಾರ್ ನಿರಾಲಾ ಅವರು 2021ರಲ್ಲಿ ನ್ಯೂ ಗ್ಲೋಬಲ್ ಅಪ್‌ಗ್ರೇಡ್ ಇಂಡಿಯಾ ಲಿಮಿಟೆಡ್‌ನ ಸಿಎನ್‌ಎಫ್ ಅನ್ನು ತೆಗೆದುಕೊಂಡಿದ್ದಾರೆ. ಸಿಎನ್‌ಎಫ್ ತೆಗೆದುಕೊಳ್ಳಲು ಕಂಪನಿಗೆ 36 ಲಕ್ಷ 86 ಸಾವಿರ ರೂಪಾಯಿ ನೀಡಿದ್ದು, ದೂರುದಾರರಿಗೆ ಗೊಬ್ಬರವನ್ನು ಕಂಪನಿ ಕಳುಹಿಸಿದೆ.

ಆದರೆ, ಕಂಪನಿಯ ಅಸಹಕಾರದಿಂದ ರಸಗೊಬ್ಬರ ಮಾರಾಟಕ್ಕೆ ತೊಂದರೆಯಾಗಿದೆ. ಇದರಿಂದಾಗಿ ದೂರುದಾರ ಮತ್ತು ಕಂಪನಿ ನಡುವೆ ಜಗಳ ಆರಂಭವಾಗಿದೆ. ನಂತರ ಕಂಪನಿಯು 30 ಲಕ್ಷದ ಚೆಕ್ ನೀಡಿ ಎಲ್ಲಾ ರಸಗೊಬ್ಬರಗಳನ್ನು ವಾಪಸ್​ ಪಡೆದಿದೆ. ಆದರೆ, ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದ ಕಾರಣ ಕಂಪನಿ ನೀಡಿದ ಚೆಕ್ ಬೌನ್ಸ್ ಆಗಿದೆ.

ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿತ್ತು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ದೂರುದಾರರು ಎಲ್ಲಾ ಆರೋಪಿಗಳು ಹಾಗೂ ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ರಾಕೇಶ್ ಟಿಕಾಯಿತ್ ಮೇಲೆ ಮಸಿ ಬಳಿದ ಪ್ರಕರಣ : ಪತ್ರಿಕಾಗೋಷ್ಠಿ ಮೊಟಕುಗೊಳಿಸಲು ಮೂವರಿಂದ ಹಲ್ಲೆ.. ಡಿಸಿಪಿ‌

ABOUT THE AUTHOR

...view details