ಕರ್ನಾಟಕ

karnataka

ETV Bharat / bharat

ಪಂಜಾಬ್​ನಲ್ಲಿ ಮೂರು ಗಂಟೆಗಳ ಕಾಲ ರೈಲು ತಡೆ ಹೋರಾಟ ನಡೆಸಿದ ರೈತರು

ಪಂಜಾಬ್​ನ ಮೊಗಾ ಜಿಲ್ಲೆಯಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಮೂರು ಗಂಟೆಗಳ ಕಾಲ ರೈಲು ತಡೆ ಹೋರಾಟ ನಡೆಸಿದ್ದಾರೆ.

By

Published : Jan 29, 2023, 9:59 PM IST

farmers-stopped-trains-in-punjab-in-protest-against-state-and-central-government
ಪಂಜಾಬ್​ನಲ್ಲಿ ಮೂರು ಗಂಟೆಗಳ ಕಾಲ ರೈಲು ತಡೆ ಹೋರಾಟ ನಡೆಸಿದ ರೈತರು

ಮೊಗಾ (ಪಂಜಾಬ್​):ಪಂಜಾಬ್​ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರೈತರು ಮತ್ತೆ ಪ್ರತಿಭಟನೆಗಿಳಿದಿದ್ದಾರೆ. ಇಂದು ಮೊಗಾ ಜಿಲ್ಲೆಯಲ್ಲಿ ರೈತರು ರೈಲು ತಡೆದು ಪ್ರತಿಭಟನೆ ನಡೆಸಿದರು. ಇಲ್ಲಿನ ರೈಲು ನಿಲ್ದಾಣದ ಬಳಿ ರೈತರು ಮತ್ತು ಕೂಲಿ ಕಾರ್ಮಿಕರು ರೈಲ್ವೆ ಹಳಿಗಳ ಮೇಲೆ ಧರಣಿ ಕುಳಿತು ಕೇಂದ್ರ ಮತ್ತು ಪಂಜಾಬ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ನೇತೃತ್ವದಲ್ಲಿ ರೈತರು ರೈಲು ತಡೆ ಹೋರಾಟ ನಡೆಸಿದರು. ರೈತರು ರೈಲ್ವೆ ಹಳಿಗಳ ಮೇಲೆ ಧರಣಿ ಕುಳಿತಿದ್ದರಿಂದ ಮೂರು ಗಂಟೆಗಳಿಗೂ ಹೆಚ್ಚು ಕಾಲ ರೈಲುಗಳು ಸಂಚಾರ ಮತ್ತು ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಯಿತು. ಇದೇ ವೇಳೆ ರೈತರು ಮತ್ತು ಕೂಲಿ ಕಾರ್ಮಿಕರು ಕೇಂದ್ರದ ಬಿಜೆಪಿ ಮತ್ತು ಪಂಜಾಬ್​ನ ಆಮ್​ ಆದ್ಮಿ ಪಕ್ಷ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ರೈತರ ಬೇಡಿಕೆ ಏನು?: ಧರಣಿ ಕುಳಿತಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ರಾಜ್ಯ ನಾಯಕ ರಾಣಾ ರಣಬೀರ್ ಸಿಂಗ್ ಥಟ್ಟಾ, 2021ರ ಜನವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಮೂರು ಕೃಷಿ ಕಾನೂನುಗಳ ರದ್ದತಿಗಾಗಿ ಸಿಂಘು ಗಡಿಯಲ್ಲಿ ಆಂದೋಲನ ನಡೆಸಲಾಗುತ್ತಿದೆ. ಈ ಆಂದೋಲನದಲ್ಲಿ ಪಾಲ್ಗೊಂಡಿದ್ದ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ವೇದಿಕೆ ಮೇಲೆ ಪೊಲೀಸರ ಸಹಕಾರದೊಂದಿಗೆ ಕೆಲವರು ದಾಳಿ ಮಾಡಿದ್ದರು ಎಂದರು.

ಅಲ್ಲದೇ, ರೈತರ ಮೇಲೆ ಗೂಂಡಾಗಳು ದಾಳಿ ಮಾಡಿ ಅನೇಕ ರೈತರನ್ನು ಗಾಯಗೊಳಿಸಿದ್ದರು. ಇಷ್ಟೇ ಅಲ್ಲ, ಮಹಿಳೆಯರ ಟೆಂಟ್‌ಗಳ ಸಾಮಾನುಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಆದರೆ, ಅಂದಿನಿಂದಲೂ ಕೇಂದ್ರ ಸರ್ಕಾರವು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಇಂದು ಪಂಜಾಬ್‌ನಲ್ಲಿ ರೈತರು ರೈಲು ತಡೆ ನಡೆಸುವ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆಂದೋಲನ ಕೈಗೊಂಡಿದ್ದ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಮುಖರ ದಾಳಿ ನಡೆಸಿದ ಆರೋಪಿಗಳನ್ನು ವಿರುದ್ಧ ಕ್ರಮ ಜರುಗಿಸಬೇಕೆಂದು ಪಂಜಾಬ್‌ನಲ್ಲಿ 51 ದಿನಗಳಿಂದ ಆಗ್ರಹಿಸುತ್ತಲೇ ಇದ್ದೇವೆ. ಆದರೆ, ಇದುವರೆಗೂ ಸರ್ಕಾರಕ್ಕೆ ಮುಂದಾಗುತ್ತಿಲ್ಲ. ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದವರನ್ನು ಶಿಕ್ಷೆಗೆ ಒಳಪಡಿಸಬೇಕು. ಅಲ್ಲದೇ, ಬಂಧಿತರಾದ ಅಮಾಯಕ ಸಿಖ್​ ರೈತರನ್ನು ಬಿಡುಗಡೆ ಮಾಡಬೇಕು. ಇದೇ ಕೇಂದ್ರ ಮತ್ತು ಪಂಜಾಬ್ ಸರ್ಕಾರಕ್ಕೆ ನಮ್ಮ ಬಲವಾದ ಬೇಡಿಕೆಯಾಗಿದೆ ಎಂದು ಹೇಳಿದರು.

ಸಂಪುಟದಿಂದ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹ: ಇದೇ ವೇಳೆ ಉತ್ತರ ಪ್ರದೇಶದ ಲಖೀಂಪುರ ಖೇರಿ ಪ್ರಕರಣ ಸಂಬಂಧ ಸಚಿವ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಅಲ್ಲದೇ, ಈ ಪ್ರಕರಣದ ಪ್ರಮುಖ ಆರೋಪಿಯಾದ ಅಜಯ್ ಮಿಶ್ರಾ ಅವರ ಮಗನ ಜಾಮೀನು ರದ್ದುಗೊಳಿಸಿ ಬಂಧಿಸಬೇಕೆಂದು ರಾಣಾ ರಣಬೀರ್ ಸಿಂಗ್ ಒತ್ತಾಯಿಸಿದರು.

ಇದನ್ನೂ ಓದಿ:ಮಹಿಳಾ ಸಹೋದ್ಯೋಗಿಯ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪೊಲೀಸ್​ ಕಾನ್ಸ್​ಟೇಬಲ್

ABOUT THE AUTHOR

...view details