ಕರ್ನಾಟಕ

karnataka

ETV Bharat / bharat

ಅತಿಥಿ ಗೃಹದಲ್ಲಿ ನಡೀತಿತ್ತು ನಕಲಿ ಪೊಲೀಸ್​ ಠಾಣೆ.. ಇಲ್ಲಿ ಫೇಕ್​ ಲೇಡಿ ಇನ್ಸ್​ಪೆಕ್ಟರ್​ನಿಂದ ಪ್ರಕರಣ ಇತ್ಯರ್ಥ

ಇದುವರೆಗೆ ಬಿಹಾರದಲ್ಲಿ ನಕಲಿ ಪೊಲೀಸರು, ನಕಲಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದರು. ಆದರೆ ಇದೀಗ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಕಲಿ ಪೊಲೀಸ್ ಠಾಣೆಯೊಂದು ಕಾರ್ಯನಿರ್ವಹಿಸುತ್ತಿದೆ. ಇದು ಬಹಿರಂಗಗೊಂಡ ನಂತರ ಪೊಲೀಸ್ ಅಧಿಕಾರಿಗಳೂ ಬೆಚ್ಚಿಬಿದ್ದಿದ್ದಾರೆ. ಸದ್ಯ ನೈಜ ಪೋಲೀಸರೇ ನಕಲಿ ಠಾಣೆ ಹಾಗೂ ನಕಲಿ ಪೊಲೀಸರ ಹಾವಳಿ ಬಯಲಿಗೆ ಎಳೆದಿದ್ದಾರೆ.

By

Published : Aug 18, 2022, 12:39 PM IST

Fake police station in Anurag guest house  Fake police station busted in Bihar  Bihar crime news  ಅತಿಥಿ ಗೃಹದಲ್ಲಿ ನಕಲಿ ಪೊಲೀಸ್​ ಠಾಣೆ  ನಕಲಿ ಪೊಲೀಸ್​ ಠಾಣೆಯಲ್ಲಿ ಲೇಡಿ ಇನ್ಸ್​ಪೆಕ್ಟರ್  ಖಾಕಿ​ ಸಮವಸ್ತ್ರದಲ್ಲಿ ಆರೋಪಿಗಳು ಬಂಧನ  ದಿನಗೂಲಿ ನೌಕರರಂತೆ ನಕಲಿ ಪೊಲೀಸರ ಕಾರ್ಯ  ನಕಲಿ ಪೊಲೀಸ್​ ಠಾಣೆಯಲ್ಲಿ ಜನರ ದಂಡು  ನಕಲಿ ಪೊಲೀಸ್​ ಠಾಣೆಯ ಕಿಂಗ್​ ಪಿನ್​ ಯಾರು  ಅತಿಥಿ ಗೃಹದಲ್ಲಿ ನಡೀತಿತ್ತು ನಕಲಿ ಪೊಲೀಸ್​ ಠಾಣೆ  ಫೇಕ್​ ಲೇಡಿ ಇನ್ಸ್​ಪೆಕ್ಟರ್​ನಿಂದ ಪ್ರಕರಣ ಇತ್ಯರ್ಥ  ಬಂಕಾ ಜಿಲ್ಲೆಯಲ್ಲಿ ನಕಲಿ ಪೊಲೀಸ್ ಠಾಣೆ
ಅತಿಥಿ ಗೃಹದಲ್ಲಿ ನಡೀತಿತ್ತು ನಕಲಿ ಪೊಲೀಸ್​ ಠಾಣೆ

ಬಂಕಾ, ಬಿಹಾರ: ನಗರದಲ್ಲಿ ನಕಲಿ ಪೊಲೀಸ್ ಠಾಣೆಯೊಂದು ನಡೆಯುತ್ತಿದ್ದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೂ ಪೊಲೀಸರು ಇದನ್ನು ಪತ್ತೆ ಹಚ್ಚಿದ್ದಾರೆ. ಅತಿಥಿ ಗೃಹವೊಂದರಲ್ಲಿ ನಕಲಿ ಪೊಲೀಸ್ ಠಾಣೆಯೊಂದು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು, ಕ್ಲೆರಿಕಲ್ ಸಿಬ್ಬಂದಿ ಮತ್ತು ಶಸ್ತ್ರಾಸ್ತ್ರಗಳು, ಶ್ರೇಣಿಯ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಈ ನಕಲಿ ಪೊಲೀಸ್​ ಠಾಣೆಗೆ ದೂರು ನೀಡಲು ಜನರ ದಂಡೇ ಹರಿದು ಬರುತ್ತಿರುವುದು ಅಚ್ಚರಿ ಮೂಡಿಸಿದೆ. ಸದ್ಯ ಅತಿಥಿ ಗೃಹದಲ್ಲಿ ನಡೆಯುತ್ತಿದ್ದ ನಕಲಿ ಪೊಲೀಸ್ ಠಾಣೆಯ ಕಾರ್ಯಾಚರಣೆ ಬಳಿಕ ಪೊಲೀಸ್ ಆಡಳಿತದಲ್ಲಿ ಸಂಚಲನ ಮೂಡಿಸಿದೆ.

ಅತಿಥಿ ಗೃಹದಲ್ಲಿ ನಕಲಿ ಪೊಲೀಸ್​ ಠಾಣೆ: ಅನುರಾಗ್ ಅತಿಥಿ ಗೃಹದಲ್ಲಿ ನಕಲಿ ಪೊಲೀಸ್​ ಠಾಣೆ ನಡೆಯುತ್ತಿತ್ತು ಎನ್ನಲಾಗಿದೆ. ಅತಿಥಿ ಗೃಹದಲ್ಲಿ ಕೃತಕ ಪೊಲೀಸ್ ಠಾಣೆಯನ್ನು ನಕಲಿ ರೀತಿಯಲ್ಲಿ ನಡೆಸುತ್ತಿರುವುದು ಪೊಲೀಸರಿಗೆ ತಿಳಿದಿದ್ದು, ನಂತರ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ ನಕಲಿ ಸಮವಸ್ತ್ರದಲ್ಲಿದ್ದ ಹಲವರು ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಒಬ್ಬ ನಕಲಿ ಪೊಲೀಸ್ ಅಧಿಕಾರಿಯೂ ಇದ್ದದ್ದು ದೊಡ್ಡ ವಿಷಯವಾಗಿದೆ.

ಅತಿಥಿ ಗೃಹದಲ್ಲಿ ನಡೀತಿತ್ತು ನಕಲಿ ಪೊಲೀಸ್​ ಠಾಣೆ

ನಕಲಿ ಪೊಲೀಸ್​ ಠಾಣೆಯಲ್ಲಿ ಲೇಡಿ ಇನ್ಸ್​ಪೆಕ್ಟರ್: ಈ ನಕಲಿ ಪೊಲೀಸ್​ ಠಾಣೆಯಲ್ಲಿ ಲೇಡಿ ಇನ್ಸ್​ಪೆಕ್ಟರ್​ ಆಗಿ ಅನಿತಾ ದೇವಿ ಎಂಬ ಯುವತಿ ಕಾರ್ಯ ನಿರ್ವಹಿಸುತ್ತಿದ್ದರು. ಬಂಧಿತ ಅನಿತಾ ಬಳಿಯಿಂದ ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಪಿಸ್ತೂಲ್ ಅ​ನ್ನು ತನ್ನ ಹಿರಿಯ ಅಧಿಕಾರಿ ಕಲಿಕೆಗಾಗಿ ನೀಡಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸೂಚನೆ ಮೇರೆಗೆ ನನನ್ನು ಇಲ್ಲಿ ನಿಯೋಜಿಸಲಾಗಿದೆ ಎಂದು ಆರೋಪಿ ಅನಿತಾ ಹೇಳಿಕೊಂಡಿದ್ದಾರೆ.

ಖಾಕಿ​ ಸಮವಸ್ತ್ರದಲ್ಲಿ ಆರೋಪಿಗಳು ಬಂಧನ: ನಕಲಿ ಪೊಲೀಸರಲ್ಲಿ ದೂರು ದಾಖಲಿಸುವ ಕಾರ್ಯನಿರ್ವಹಿಸುತ್ತಿದ್ದ ಫುಲ್ಲಿಡುಮಾರ್‌ನ ಲೋಧಿಯಾ ಗ್ರಾಮದ ರಮೇಶ್ ಕುಮಾರ್ ಮತ್ತು ಸುಲ್ತಂಗಂಜ್‌ನ ಖಾನ್‌ಪುರ ನಿವಾಸಿ ಜೂಲಿ ಕುಮಾರಿಯನ್ನು ಕೂಡ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಪೊಲೀಸ್ ಸಮವಸ್ತ್ರದಲ್ಲಿ ಭಾಗಲ್‌ಪುರ ಜಿಲ್ಲೆಯ ಖಾನ್‌ಪುರದ ಆಕಾಶ್‌ ಕುಮಾರ್‌ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ನಾವು ನಮ್ಮ ಹಿರಿಯ ಅಧಿಕಾರಿ, ಫುಲ್ಲಿಡುಮಾರ್ ನಿವಾಸಿ ಭೋಲಾ ಯಾದವ್ ಅವರ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದೇವೆ ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ದಿನಗೂಲಿ ನೌಕರರಂತೆ ನಕಲಿ ಪೊಲೀಸರ ಕಾರ್ಯ: ಬಂಧಿತ ನಕಲಿ ಪೊಲೀಸರಿಗೆ ಪ್ರತಿದಿನ ಐನೂರು ರೂಪಾಯಿ ಕೂಲಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಅತಿಥಿ ಗೃಹದಿಂದ ಅವರ ಅಡುಗೆ ಭಟ್ಟನನ್ನು ಸಹ ಬಂಧಿಸಿದ್ದು, ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.

ಅತಿಥಿ ಗೃಹದಲ್ಲಿ ನಡೀತಿತ್ತು ನಕಲಿ ಪೊಲೀಸ್​ ಠಾಣೆ

ನಕಲಿ ಪೊಲೀಸ್​ ಠಾಣೆಯಲ್ಲಿ ಜನರ ದಂಡು:ಈ ನಕಲಿ ಠಾಣೆಯಲ್ಲಿ ನಿತ್ಯ ಫಿರ್ಯಾದುದಾರರ ದಂಡೇ ಇರುತ್ತಿತ್ತು. ಅತ್ಯಂತ ಆಘಾತಕಾರಿ ಘಟನೆಯೆಂದರೇ, ಹೆಚ್ಚಿನ ಸಂಖ್ಯೆಯ ಸ್ಥಳೀಯರು ತಮ್ಮ ದೂರುಗಳೊಂದಿಗೆ ಅಲ್ಲಿಗೆ ತಲುಪುತ್ತಿದ್ದರು. ಅಲ್ಲಿ ಅವರನ್ನು ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿತ್ತು ಮತ್ತು ಅರ್ಜಿ ಪಡೆದು ಎರಡೂ ಕಡೆಯವರನ್ನು ಬೆದರಿಸಿ, ಸಮಾಧಾನ ಪಡಿಸಿ ಪ್ರಕರಣ ಇತ್ಯರ್ಥಗೊಳಿಸುತ್ತಿದ್ದರು.

ನಕಲಿ ಪೊಲೀಸ್​ ಠಾಣೆಯ ಕಿಂಗ್​ ಪಿನ್​ ಯಾರು?: ದಂಧೆ ಎಷ್ಟು ದಿನ ಸಕ್ರಿಯವಾಗಿತ್ತು ಮತ್ತು ಕಿಂಗ್‌ಪಿನ್ ಯಾರು? ಎಂಬ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ. ಸದ್ಯಕ್ಕೆ ಎಸ್‌ಡಿಪಿಒ, ಡಿಸಿ ಶ್ರೀವಾಸ್ತವ ಮಾತನಾಡಿ, ದಂಧೆಯಲ್ಲಿನ ಪ್ರಮುಖ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಓದಿ:ನಕಲಿ ಔಷಧಿ ತಯಾರಿಕಾ ಕಾರ್ಖಾನೆ ಮೇಲೆ ದಾಳಿ: ₹1000 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ

ABOUT THE AUTHOR

...view details