ಮುಂಬೈ: ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕೋಟ್ಯಂತರ ಜನರು ಇನ್ಸ್ಟಾಗ್ರಾಂ, ಟ್ವಿಟರ್, ಫೇಸ್ಬುಕ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣ ಬಳಕೆ ಮಾಡ್ತಿದ್ದಾರೆ. ಆದರೆ, ಅನೇಕ ಸಲ ಸೋಷಿಯಲ್ ಮೀಡಿಯಾಗಳಿಂದ ಅನೇಕರು ವಂಚನೆಗೊಳಗಾಗಿದ್ದಾರೆ.
ಇದರ ಮಧ್ಯೆ ಇನ್ಸ್ಟಾಗ್ರಾಂನಲ್ಲಿನ ಸಮಸ್ಯೆವೊಂದನ್ನ ಕಂಡು ಹಿಡಿದಿರುವುದಕ್ಕಾಗಿ ಭಾರತೀಯ ಹ್ಯಾಕರ್ಗೆ ಫೇಸ್ಬುಕ್ ಸಂಸ್ಥೆ ದಾಖಲೆಯ 22 ಲಕ್ಷ ರೂ.($30000) ಬಹುಮಾನ ಘೋಷಣೆ ಮಾಡಿದ್ದು, ಇದರ ಬಗ್ಗೆ ತನ್ನ ಅಕೌಂಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಮಹಾರಾಷ್ಟ್ರದ ಸೋಲಾಪುರ ಮೂಲದ ಮಯೂರ್ಗೆ ಫೇಸ್ಬುಕ್ ಈ ಬಹುಮಾನ ನೀಡಿದೆ. ಇನ್ಸ್ಟಾಗ್ರಾಂನಲ್ಲಿನ ದೋಷ ಕಂಡು ಹಿಡಿದಿರುವುದಕ್ಕಾಗಿ ಈ ಬಹುಮಾನ ನೀಡಿರುವುದಾಗಿ ಅದು ಹೇಳಿಕೊಂಡಿದೆ. C++, ಫೈಥಾನ್ನಂತಹ ಕೌಶಲ್ಯ ಹೊಂದಿರುವ ಸೋಲಾಪುರ ಮೂಲದ ಮಯೂರ್, ಏಪ್ರಿಲ್ 16ರಂದು ಫೇಸ್ಬುಕ್ಗೆ ಇನ್ಸ್ಟಾಗ್ರಾಂ ದೋಷದ ಬಗ್ಗೆ ಮಾಹಿತಿ ನೀಡಿದ್ದರು.
ಇದಕ್ಕೆ ಏಪ್ರಿಲ್ 19ರಂದು ಪ್ರತಿಕ್ರಿಯೆ ಸಹ ಬಂದಿತ್ತು. ಜತೆಗೆ ಹೆಚ್ಚಿನ ಮಾಹಿತಿ ನೀಡುವಂತೆ ತಂಡ ಆತನ ಬಳಿ ಮನವಿ ಮಾಡಿಕೊಂಡಿತ್ತು. ಸಂಪೂರ್ಣ ಮಾಹಿತಿ ನೀಡಿದ ಬಳಿಕ ಅದರ ಮೇಲೆ ಕೆಲಸ ಮಾಡಿರುವ ತಂಡ ಇನ್ಸ್ಟಾಗ್ರಾಂ ಬಗ್ ಸಮಸ್ಯೆಗೆ ಜೂನ್ 15ರಂದು ಮುಕ್ತಿ ಹೇಳಿದೆ.