ಕರ್ನಾಟಕ

karnataka

ETV Bharat / bharat

ಅಪ್ರಾಪ್ತನೊಂದಿಗೆ ಹೆಂಡತಿಯ ಸಲುಗೆ: ಕೊಲೆಯಲ್ಲಿ ಅಂತ್ಯ ಕಂಡ ವಿವಾಹೇತರ ಸಂಬಂಧ..! - Extramarital affair of wife with boy

Extra marital affair that ended in murder: ಅಪ್ರಾಪ್ತನೊಂದಿಗೆ ಹೆಂಡತಿಯು ವಿವಾಹೇತರ ಸಂಬಂಧ ಹೊಂದಿರುವ ಹಿನ್ನೆಲೆ, ಆಕ್ರೋಶಗೊಂಡ ಪತಿ 17 ವರ್ಷದ ವ್ಯಕ್ತಿಯನ್ನ (ಬಾಲಕ) ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮೈಲಾರದೇವಪಲ್ಲಿ ಪೊಲೀಸರು ಹತ್ಯೆ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ.

Extramarital affair of wife with boy
ಬಾಲಕನೊಂದಿಗೆ ಹೆಂಡತಿಯ ಲವ್ವಿ ಡವ್ವಿ: ಕೊಲೆಯಲ್ಲಿ ಅಂತ್ಯ ಕಂಡ ವಿವಾಹೇತರ ಸಂಬಂಧ..!

By ETV Bharat Karnataka Team

Published : Aug 30, 2023, 1:07 PM IST

Updated : Aug 30, 2023, 1:27 PM IST

ಮೈಲಾರದೇವಪಲ್ಲಿ(ತೆಲಂಗಾಣ):ಅವಳಿಗೆ 23 ವರ್ಷ. ಹುಡುಗನಿಗೆ 17 ವರ್ಷ... ಪತಿಗೆ ತಿಳಿಯದಂತೆ ಪತ್ನಿಯು, ಅಪ್ರಾಪ್ತನೊಂದಿಗೆ ವಿವಾಹೇತರ ಸಂಬಂಧ ಮುಂದುವರಿಸಿದ್ದಾಳೆ. ಮದ್ಯದ ಅಮಲಿನಲ್ಲಿದ್ದ ಬಾಲಕ ತನ್ನ ವಿವಾಹೇತರ ಸಂಬಂಧವನ್ನು ತಿಳಿಸಿದ್ದಾನೆ. ಈ ವಿಚಾರವು ಪತಿಗೆ ಸಹಿಸಿಕೊಳ್ಳಲು ಆಗಿಲ್ಲ. ಆಕ್ರೋಶಗೊಂಡ ಪತಿ ಬಾಲಕ( ಸಹೋದರನನ್ನೇ) ಹತ್ಯೆ ಮಾಡಿದ್ದಾನೆ. ಇದೇ 27ರಂದು ಮೈಲಾರದೇವಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಗೌಡ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿ ಪಂಕಜ್ ಪಾಸ್ವಾನ್​ನನ್ನು ಮಂಗಳವಾರ ಬಂಧಿಸಿದ್ದಾರೆ.

ಪೊಲೀಸರು ಹೇಳಿದ್ದೇನು?:ಪ್ರಕರಣದ ಕುರಿತು ವಿವರ ನೀಡಿದ ಮೈಲಾರ ದೇವಪಲ್ಲಿ ಇನ್ಸ್​​ಪೆಕ್ಟರ್​​ ಮಧು, ಬಿಹಾರ ಮೂಲದ ಪಂಕಜಕುಮಾರ್ ಪಾಸ್ವಾನ್ ಅಲಿಯಾಸ್ ಪಂಕಜ್ ಪಾಸ್ವಾನ್ (26) ಎರಡು ತಿಂಗಳ ಹಿಂದೆ ಪತ್ನಿಯೊಂದಿಗೆ ಲಕ್ಷ್ಮೀಗೌಡ ಹೌಸಿಂಗ್ ಬೋರ್ಡ್ ಕಾಲೋನಿಗೆ ವಲಸೆ ಬಂದಿದ್ದ. ಪಂಕಜ್ ಅವರೊಂದಿಗೆ ಬಂದ ಒಡಹುಟ್ಟಿದ ಸಹೋದರ (17 ವರ್ಷ) ಒಂದೇ ಮನೆಯ ಬೇರೆ ಬೇರೆ ಕೊಠಡಿಗಳಲ್ಲಿ ವಾಸಿಸುತ್ತಿದ್ದರು. ಪಂಕಜ್ ಪಾಸ್ವಾನ್ ಹಾಗೂ ಅಪ್ರಾಪ್ತ ಉದ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ನಿತ್ಯ ಭೇಟಿಯಾಗುತ್ತಿದ್ದರು. ಇಬ್ಬರೂ ಸೇರಿಕೊಂಡು ಮದ್ಯ ಸೇವಿಸುತ್ತಿದ್ದರು.

ಈ ಬಾಲಕನು ಪತಿ ಪಂಕಜ್ ಪಾಸ್ವಾನ್ ಹೆಂಡತಿಯೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದ. ಬಾಲಕ, ಪಂಕಜ್ ಪಾಸ್ವಾನ್ ಹೆಂಡತಿಯ ಕಿರಿಯ ಸಹೋದರ ಎನ್ನುವ ಕಾರಣಕ್ಕೆ ಆತನ ಅನುಮಾನ ಮೂಡಿರಲಿಲ್ಲ. ಕುಡಿತದ ಅಮಲಿನಲ್ಲಿ ಪಂಕಜ್ ಪತ್ನಿಯೊಂದಿಗೆ ಹಲವು ಬಾರಿ ವೈವಾಹಿಕ ಸಂಬಂಧ ಹೊಂದಿದ್ದಾಗಿ ಬಾಲಕ ಹೇಳುತ್ತಿದ್ದ. ಆರಂಭದಲ್ಲಿ ಇದನ್ನು ಲಘುವಾಗಿ ಪರಿಗಣಿಸಿದ. ಪದೇ ಪದೆ ಅದನ್ನೇ ವಿಚಾರವನ್ನು ಪ್ರಸ್ತಾಪಿಸಿದ ಹಿನ್ನೆಲೆ ಪಂಕಜ್​ಗೆ ಸಹಿಸಲಾಗಲಿಲ್ಲ.

ಈ ವಿಷಯ ಹೊರಗೆ ಬಂದರೆ, ಮಾನ ಮರ್ಯಾದೆ ಹೋಗಬಹುದು ಎಂದುಕೊಂಡು ಬಾಲಕನನ್ನು ಕೊಂದರೆ ಸಮಸ್ಯೆ ಬಗೆಹರಿಯುತ್ತದೆ ಎಂದುಕೊಂಡ. ಇಬ್ಬರೂ ಸೇರಿಕೊಂಡು ಇದೇ ತಿಂಗಳ 27ರಂದು ಕೆಲಸಕ್ಕೆ ಹೋಗಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಮನೆ ತಲುಪಿದ್ದಾರೆ. ಬಳಿಕ ಪಂಕಜ್ ತರಕಾರಿ ಕತ್ತರಿಸುವ ಚಾಕು ತೆಗೆದುಕೊಂಡು ತನ್ನ ಬಳಿ ಬಚ್ಚಿಟ್ಟುಕೊಂಡಿದ್ದಾನೆ. ಅಷ್ಟೇ ಅಲ್ಲ ಸಿಗರೇಟ್ ಸೇದಲು ಹೊರಗೆ ಹೋಗಲೆಂದು ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.

ಅಲ್ಲಿದ್ದ ಸೀತಾಫಲ ಮರವನ್ನು ತೋರಿಸಿ ಹಣ್ಣನ್ನು ಕತ್ತರಿಸಲು ಹೇಳಿದ್ದಾನೆ. ಬಾಲಕ ಹಣ್ಣು ಕಿತ್ತುಕೊಳ್ಳಲು ಹೋಗುತ್ತಿದ್ದಾಗ ಪಂಕಜ್ ಪಾಸ್ವಾನ್ ಹಿಂದಿನಿಂದ ಚಾಕುವಿನಿಂದ ಇರಿದಿದ್ದಾನೆ. ಬಾಲಕ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಸ್ಥಳದಿಂದ ತೆರಳಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪಂಕಜ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪಂಕಜ್ ತನ್ನ ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ:ಮೂವರ ಬರ್ಬರ ಹತ್ಯೆ: ಪತ್ನಿ, ಆಕೆಯ ಇಬ್ಬರು ಪುತ್ರಿಯರ ಸಾವು, ಪತಿಗೆ ಗಂಭೀರ ಗಾಯ...

Last Updated : Aug 30, 2023, 1:27 PM IST

ABOUT THE AUTHOR

...view details