ಕರ್ನಾಟಕ

karnataka

ETV Bharat / bharat

EXPLAINER: ಇಸ್ರೇಲ್ ಅಥವಾ ಹಮಾಸ್.. ಯಾರಿಂದ ಯುದ್ಧಾಪರಾಧ? - ಇಸ್ರೇಲ್, ಹಮಾಸ್ ಯುದ್ಧಾಪರಾಧ

ತಳಮಟ್ಟದ ಚಳವಳಿಯಾಗಿ ಬೆಳೆದು ಬಂದ ಹಮಾಸ್ ಪ್ಯಾಲೇಸ್ಟಿನಿಯನ್ ಸಮಾಜದಲ್ಲಿ ಆಳವಾಗಿ ಬೇರೂರಿದೆ. ತನ್ನ ರಾಜಕೀಯ ಕಾರ್ಯಾಚರಣೆ ಮತ್ತು ಸಾಮಾಜಿಕ ಕಾರ್ಯಗಳಿಂದ ಸಶಸ್ತ್ರ ವಿಭಾಗವನ್ನು ಇದು ರಹಸ್ಯವಾಗಿ ಪ್ರತ್ಯೇಕವಾಗಿಟ್ಟಿದೆ. ಇಸ್ರೇಲ್ ಮತ್ತು ಪಾಶ್ಚಿಮಾತ್ಯ ದೇಶಗಳು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಪರಿಗಣಿಸುತ್ತವೆ. ಆದರೆ, ಇದು ಗಾಜಾದ ವಾಸ್ತವಿಕ ಸರ್ಕಾರವಾಗಿದ್ದು, ಸಾವಿರಾರು ಜನರನ್ನು ನಾಗರಿಕ ಸೇವಕರು ಮತ್ತು ಪೊಲೀಸರನ್ನಾಗಿ ನೇಮಿಸಿದೆ. ಹೀಗಾಗಿ ಹಮಾಸ್​ನೊಂದಿಗೆ ಸಂಪರ್ಕ ಹೊಂದಿರುವ ಯಾವುದೇ ವ್ಯಕ್ತಿಯೊಬ್ಬನನ್ನು ಉಗ್ರವಾದಿ ಎಂದು ಕರೆಯುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವಿಸಿವೆ.

EXPLAINER: Are Israel, Hamas committing war crimes in Gaza?
EXPLAINER: ಇಸ್ರೇಲ್, ಹಮಾಸ್... ಗಾಜಾದಲ್ಲಿ ಯಾರಿಂದ ಯುದ್ಧಾಪರಾಧ?

By

Published : May 18, 2021, 6:27 PM IST

ಜೆರುಸಲೆಮ್: ಇಸ್ರೇಲ್ ಹಾಗೂ ಹಮಾಸ್​ ಉಗ್ರಗಾಮಿಗಳ ಸಂಘಟನೆಯ ಮಧ್ಯೆ ಈಗ ನಾಲ್ಕನೆಯ ಯುದ್ಧ ಆರಂಭವಾಗಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿ ಗುಂಪುಗಳೆರಡೂ ಗಾಜಾದಲ್ಲಿ ಯುದ್ಧ ಅಪರಾಧಗಳನ್ನು ಎಸಗುತ್ತಿರುವ ಬಗ್ಗೆ ಆರೋಪ ಎದುರಿಸುತ್ತಿವೆ. ಹಮಾಸ್ ಪ್ಯಾಲೆಸ್ಟೈನ್ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದೆ ಎಂದು ಇಸ್ರೇಲ್ ಹೇಳಿದರೆ, ಇಸ್ರೇಲ್ ಅಪರಿಮಿತ ಮಿಲಿಟರಿ ಶಕ್ತಿಯನ್ನು ಬಳಸುತ್ತಿದೆ ಎಂದು ವಿಮರ್ಶಕರು ಹೇಳುತ್ತಾರೆ.

ಯಾವುದು ಸರಿ, ಯಾವುದು ತಪ್ಪು?

ಹಮಾಸ್ ಮತ್ತು ಇತರ ಪ್ಯಾಲೆಸ್ಟೈನ್ ಉಗ್ರವಾದಿ ಗುಂಪುಗಳು ಇಸ್ರೇಲ್ ಒಳಗೆ ನೂರಾರು ರಾಕೆಟ್​​ಗಳನ್ನು ಹಾರಿಸುತ್ತಿರುವುದು ಸ್ಪಷ್ಟ. ಈ ರಾಕೆಟ್ಟುಗಳು ಗೊತ್ತು ಗುರಿಯಿಲ್ಲದೇ ನಾಗರಿಕರನ್ನು ಗುರಿಯಾಗಿಸಿ ಸ್ಫೋಟಗೊಳ್ಳುತ್ತಿವೆ. ಹೀಗೆ ನಾಗರಿಕರನ್ನು ಗುರಿಯಾಗಿಸಿಕೊಳ್ಳುವುದು ಅಥವಾ ನಾಗರಿಕ ಪ್ರದೇಶಗಳಲ್ಲಿ ವಿವೇಚನೆಯಿಲ್ಲದೇ ದಾಳಿ ನಡೆಸುವುದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ. ಹಾಗೆಯೇ ಇಸ್ರೇಲ್ ಗಾಜಾ ಪ್ರದೇಶದ ಅಪಾರ್ಟಮೆಂಟ್​ ಬ್ಲಾಕ್​ಗಳ ಮೇಲೆ ರಾಕೆಟ್ ದಾಳಿ ಮಾಡುವುದು ಕೂಡ ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ಗಾಜಾದಲ್ಲಿ ಸುಮಾರು 2 ಮಿಲಿಯನ್ ಜನರು ಕಿರಿದಾದ ಕರಾವಳಿ ಪ್ರದೇಶದಲ್ಲಿ ಕಿಕ್ಕಿರಿದು ವಾಸಿಸುತ್ತಾರೆ. ಗಾಜಾ ಪ್ರದೇಶವು ಅತ್ಯಂತ ಇಕ್ಕಟ್ಟಾಗಿದ್ದು, ದಾಳಿ ನಡೆದಾಗ ಎರಡೂ ಬದಿಗಳಲ್ಲಿ ತಪ್ಪಿಸಿಕೊಳ್ಳುವುದು ಕಷ್ಟವೇ ಆಗಿದೆ. 2007 ರಲ್ಲಿ ಗಾಜಾದಲ್ಲಿ ಹಮಾಸ್​ ಆಡಳಿತವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಹಾಗೂ ಈಜಿಪ್ಟ್​ ಎರಡೂ ರಾಷ್ಟ್ರಗಳು ಗಾಜಾ ವಿರುದ್ಧ ದಿಗ್ಬಂಧನ ವಿಧಿಸಿರುವುದರಿಂದ ಇಲ್ಲಿನ ಜನರಿಗೆ ತಪ್ಪಿಸಿಕೊಂಡು ಹೊರಹೋಗಲು ಜಾಗವೇ ಇಲ್ಲದಂತಾಗಿದೆ.

ಗಾಜಾ ದ ವಾಸ್ತವಿಕ ಸರ್ಕಾರ ಹಮಾಸ್

ತಳಮಟ್ಟದ ಚಳವಳಿಯಾಗಿ ಬೆಳೆದು ಬಂದ ಹಮಾಸ್ ಪ್ಯಾಲೇಸ್ಟಿನಿಯನ್ ಸಮಾಜದಲ್ಲಿ ಆಳವಾಗಿ ಬೇರೂರಿದೆ. ತನ್ನ ರಾಜಕೀಯ ಕಾರ್ಯಾಚರಣೆ ಮತ್ತು ಸಾಮಾಜಿಕ ಕಾರ್ಯಗಳಿಂದ ಸಶಸ್ತ್ರ ವಿಭಾಗವನ್ನು ಇದು ರಹಸ್ಯವಾಗಿ ಪ್ರತ್ಯೇಕವಾಗಿಟ್ಟಿದೆ. ಇಸ್ರೇಲ್ ಮತ್ತು ಪಾಶ್ಚಿಮಾತ್ಯ ದೇಶಗಳು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಪರಿಗಣಿಸುತ್ತವೆ. ಆದರೆ, ಇದು ಗಾಜಾದ ವಾಸ್ತವಿಕ ಸರ್ಕಾರವಾಗಿದ್ದು, ಸಾವಿರಾರು ಜನರನ್ನು ನಾಗರಿಕ ಸೇವಕರು ಮತ್ತು ಪೊಲೀಸರನ್ನಾಗಿ ನೇಮಿಸಿದೆ. ಹೀಗಾಗಿ ಹಮಾಸ್​ನೊಂದಿಗೆ ಸಂಪರ್ಕ ಹೊಂದಿರುವ ಯಾವುದೇ ವ್ಯಕ್ತಿಯೊಬ್ಬನನ್ನು ಉಗ್ರವಾದಿ ಎಂದು ಕರೆಯುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಗಾಜಾದಲ್ಲಿನ ಗಮನಾರ್ಹ ನಾಗರಿಕರು ಹಮಾಸ್ ಗುಂಪನ್ನು ವಿರೋಧಿಸುವುದು ಕೂಡ ಸುಳ್ಳಲ್ಲ. ಆದರೆ ಇವರಾರೂ ಈ ಪ್ರದೇಶ ಬಿಟ್ಟು ಹೊರಹೋಗಲಾಗದು ಎಂಬುದು ಕೂಡ ವಾಸ್ತವ.

ಯುದ್ಧಾಪರಾಧ ಸಾಬೀತು ಮಾಡುವುದೇ ಕಷ್ಟ

ಪ್ಯಾಲೇಸ್ಟಿನಿಯನ್ ಉಗ್ರವಾದಿಗಳು ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಶಾಲೆ, ಮಸೀದಿಗಳು ಮತ್ತು ಮನೆಗಳ ಬಳಿ ಸುರಂಗಗಳು, ರಾಕೆಟ್ ಲಾಂಚರ್, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರುಗಳನ್ನು ಹೊಂದಿದ್ದಾರೆ. ಆದರೆ, ಯುದ್ಧದ ಸಮಯದಲ್ಲಿ ನಾಗರಿಕರಿಗೆ ಸಿಗುವ ರಕ್ಷಣೆಯ ಲಾಭ ಪಡೆಯಲು ಸೈನಿಕರು ಉದ್ದೇಶಪೂರ್ವಕವಾಗಿ ತಮ್ಮ ಮಿಲಿಟರಿ ಆಸ್ತಿಗಳನ್ನು ನಾಗರಿಕ ಪ್ರದೇಶಗಳಲ್ಲಿ ಇಟ್ಟಿದ್ದಾರೆ ಎಂಬುದನ್ನು ಸಾಬೀತು ಪಡಿಸುವುದು ಹೇಗೆ ಎಂಬುದು ಪ್ರಶ್ನೆ.

ಇಸ್ರೇಲ್ ಯಾವಾಗಲೂ ಅಸಮಾನವಾದ, ಹೆಚ್ಚು ಪ್ರಮಾಣದ ಬಲವನ್ನು ಪ್ಯಾಲೆಸ್ಟೈನ್ ಮೇಲೆ ಬಳಸುತ್ತದೆ ಎಂದು ಇಸ್ರೇಲ್​ ಟೀಕಾಕಾರರು ಹೇಳುತ್ತಾರೆ. ಅಘೋಷಿತ ಪರಮಾಣು ಶಸ್ತ್ರಸಜ್ಜಿತ ಹಾಗೂ ಈ ಪ್ರದೇಶದ ಅತಿ ಬಲಿಷ್ಠ ಮಿಲಿಟರಿ ಹೊಂದಿರುವ ಇಸ್ರೇಲ್, ಕೆಲವೇ ಕೆಲವು ಕಡಿಮೆ ದೂರ ಹಾರುವ ರಾಕೆಟ್ಟುಗಳನ್ನು ಹೊಂದಿದ ಉಗ್ರಗಾಮಿ ಸಂಘಟನೆಯೊಂದರ ವಿರುದ್ಧ ಯುದ್ಧ ಸಾರುತ್ತಿದೆ ಎನ್ನುತ್ತಾರೆ ಈ ಟೀಕಾಕಾರರು. ಈ ಹಿಂದಿನ ಯುದ್ಧದಲ್ಲಿ ಗಾಜಾ ಕಡೆಯಲ್ಲಿ 200 ಜನ ಮೃತಪಟ್ಟಿದ್ದರು. ಇದರಲ್ಲಿ ಅರ್ಧಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳೇ ಆಗಿದ್ದರು. ಇನ್ನು ಇಸ್ರೇಲ್ ಕಡೆಯಲ್ಲಿ ಕೇವಲ 10 ಜನ ಸತ್ತಿದ್ದು, ಅದರಲ್ಲಿ ಒಬ್ಬನನ್ನು ಬಿಟ್ಟು ಉಳಿದವರೆಲ್ಲ ನಾಗರಿಕರಾಗಿದ್ದರು.

ತನ್ನ ದೇಶದ ಮೇಲೆ ಹಾರಿ ಬರುವ ರಾಕೆಟ್ಟುಗಳಿಂದ ರಕ್ಷಣೆಗೆ ಮುಂದಾಗುವುದು ತನ್ನ ಹಕ್ಕು ಎಂದು ಇಸ್ರೇಲ್ ಹೇಳುತ್ತದೆ. ಗಾಜಾ ಮೇಲೆ ದಾಳಿ ಮಾಡುವ ಮುನ್ನ ಅಲ್ಲಿನ ಯಾವುದೇ ನಾಗರಿಕರ ಪ್ರಾಣಹಾನಿಯಾಗದಂತೆ ತಾನು ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಇಸ್ರೇಲ್ ಹೇಳುತ್ತದೆ. ದಾಳಿಗೂ ಮುನ್ನ ನಾಗರಿಕರು ದೂರ ಹೋಗುವಂತೆ ತಾನು ಎಚ್ಚರಿಕೆ ನೀಡುವುದಾಗಿ ಇಸ್ರೇಲ್ ಹೇಳಿಕೊಂಡಿದೆ.

ಏನೇ ಆದರೂ ದಾಳಿಯೊಂದು ನಡೆದಾಗ ಅದು ಅಸಮಾಂತರ ಹಾಗೂ ಅತಿ ಹೆಚ್ಚು ಬಲ ಪ್ರಯೋಗದಿಂದ ನಡೆದಿದೆ ಎಂಬುದನ್ನು ಸಾಬೀತು ಪಡಿಸುವುದು ಕಷ್ಟವಾಗುತ್ತದೆ. ಅಂಥದೊಂದು ದಾಳಿಯಿಂದ ಯಾವ ರೀತಿಯ ಮಿಲಿಟರಿ ಲಾಭವಾಯಿತು, ಇದರಿಂದ ನಾಗರಿಕ ಹಾಗೂ ಸಮಾಜದ ಮೇಲೆ ಎಷ್ಟು ಹಾನಿಯಾಯಿತು ಎಂಬುದನ್ನು ಅರಿಯುವುದು ಕಷ್ಟ. ಅಂದರೆ ವಿಪರೀತ ಹಂತದ ಪ್ರಕರಣಗಳಲ್ಲಿ ಮಾತ್ರ ದೇಶವೊಂದನ್ನು ಉತ್ತರದಾಯಿಯನ್ನಾಗಿ ಮಾಡಬಹುದು.

ಶನಿವಾರದಂದು ಗಾಜಾದಲ್ಲಿರುವ 12 ಮಹಡಿಯ ಕಟ್ಟಡವೊಂದರ ಮೇಲೆ ಇಸ್ರೇಲ್ ದಾಳಿ ಮಾಡಿತ್ತು. ಈ ಕಟ್ಟಡದಲ್ಲಿ ಅಸೋಸಿಯೇಟೆಡ್ ಪ್ರೆಸ್ ಹಾಗೂ ಅಲ್ ಜಜೀರಾ ಮಾಧ್ಯಮ ಸಂಸ್ಥೆಗಳ ಕಚೇರಿಗಳು ಮತ್ತು ಇನ್ನೂ ಹಲವಾರು ಖಾಸಗಿ ಕಂಪನಿಗಳ ಕಚೇರಿಗಳಿದ್ದವು. ಇಸ್ರೇಲ್ ಬಾಂಬ್ ದಾಳಿಯಲ್ಲಿ ಈ ಕಟ್ಟಡ ಸಂಪೂರ್ಣ ನಾಮಾವಶೇಷವಾಗಿದೆ. ಆದರೆ ದಾಳಿಗೂ ಮುನ್ನ ಎಚ್ಚರಿಕೆ ನೀಡಿದ್ದರಿಂದ ಈ ಬಾಂಬ್ ದಾಳಿಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ.

ಈ ಕಟ್ಟಡದಲ್ಲಿ ಹಮಾಸ್​ಗೆ ಸೇರಿದ ಯುದ್ಧ ನಿರ್ವಹಣಾ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು ಹಾಗೂ ಹಮಾಸ್​ನ ಹಲವಾರು ಮೂಲ ಸಲಕರಣೆಗಳು ಇಲ್ಲಿದ್ದವು ಎಂದು ಇಸ್ರೇಲ್ ಆರೋಪಿಸಿದೆಯಾದರೂ ಅದಕ್ಕೆ ಸಾಕ್ಷಿಗಳನ್ನು ನೀಡಿಲ್ಲ.

ತನ್ನ ಜನರ ಮಧ್ಯೆ ರಹಸ್ಯವಾಗಿಯೇ ಇರುವ ಹಮಾಸ್

ಹಮಾಸ್​ ಸಂಘಟನೆಯ ಸದಸ್ಯರು ಯಾವತ್ತಿಗೂ ಮಿಲಿಟರಿ ಸಮವಸ್ತ್ರಗಳನ್ನು ಧರಿಸುವುದೇ ಇಲ್ಲ. ಇವರು ಸಮಾಜದ ಮಧ್ಯೆ ತಾವು ಹಮಾಸ್ ಸದಸ್ಯರಾಗಿರುವುದನ್ನು ಕೂಡ ಬಹಿರಂಗಪಡಿಸಿಕೊಂಡಿರುವುದಿಲ್ಲ. ಯುದ್ಧದ ಕಾರ್ಮೋಡ ಆವರಿಸುತ್ತಲೇ ಇವರೆಲ್ಲರೂ ರಾಜಕೀಯ ನಾಯಕರ ಗುಂಪಿನೊಂದಿಗೆ ಭೂಗತರಾಗಿ ಬಿಡುತ್ತಾರೆ.

ಹಮಾಸ್​ ಬೆಂಬಲಿಸುವ ಬಹುದೊಡ್ಡ ಪ್ರಮಾಣದ ಜನರು ಸ್ವತಃ ಯಾವುದೇ ಹೋರಾಟದಲ್ಲಿ ಪಾಲ್ಗೊಂಡಿರುವುದಿಲ್ಲ. ಹೀಗಾಗಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ತಪ್ಪು ಎನ್ನುತ್ತದೆ ಇಂಟರನ್ಯಾಷನಲ್ ರೆಡ್ ಕ್ರಾಸ್ ಸೊಸೈಟಿ.

ABOUT THE AUTHOR

...view details