ಕರ್ನಾಟಕ

karnataka

ETV Bharat / bharat

ಮಾಜಿ ಐಎಎಸ್​, ಕರ್ನಲ್​ ಈಗ ಸನ್ಯಾಸಿ..ಈ ಅಧಿಕಾರಿಗೆ ಈಗ ಅಲೌಕಿಕ ಸೆಳವು

ಮಾಜಿ ಸೇನಾಧಿಕಾರಿ, ಮಾಜಿ ಐಎಎಸ್​ ಅಧಿಕಾರಿ, ಡಾಕ್ಟರೇಟ್​ ಪಡೆದ ಉತ್ತರಾಖಂಡ ವ್ಯಕ್ತಿಯೊಬ್ಬ ಸನ್ಯಾಸ ಜೀವನ ಸ್ವೀಕರಿಸಿ ಅಲೌಕಿಕ ಬದುಕಿನತ್ತ ಒಲುವು ಹೊಂದಿದ್ದಾರೆ.

By

Published : Nov 5, 2022, 8:56 PM IST

ex ias officer who became a monk
ಉತ್ತರಾಖಂಡ ಅಧಿಕಾರಿಗೆ ಲೌಕಿಕ ಸೆಳವು

ಶ್ರೀನಗರ (ಉತ್ತರಾಖಂಡ):ಡಾಕ್ಟರೇಟ್​ ಪಡೆದ ವಿದ್ಯಾವಂತರು, ಮಾಜಿ ಸೇನಾಧಿಕಾರಿ, ಐಎಎಸ್​ ಅಧಿಕಾರಿಗಳು ಸೇವೆಯಿಂದ ನಿವೃತ್ತಿ ಪಡೆದ ಬಳಿಕ ಬರುವ ಪಿಂಚಣಿಯಲ್ಲಿ ಸುಖಕರವಾದ ಜೀವನ ಸಾಗಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಈ ಮೂರು ಪಾತ್ರಗಳಲ್ಲಿದ್ದರೂ ಸನ್ಯಾಸ ಜೀವನ ಸ್ವೀಕರಿಸಿ ಅಲೌಕಿಕ ಜೀವನ ಬಿಟ್ಟು ಆಧ್ಯಾತ್ಮಿಕತೆಯೆಡೆಗೆ ಮುಖ ಮಾಡಿದ್ದಾರೆ.

ಐಎಎಸ್​ ಅಧಿಕಾರಿಯಾಗಿ ನಿವೃತ್ತಿ ಪಡೆದಿರುವ ಡಾ ಕಮಲ್​ ತೌರಿ ಸನ್ಯಾಸ ಸ್ವೀಕರಿಸಿದವರು. ಉತ್ತರಾಖಂಡದ ಡಾ.ಕಮಲ್​ ಅವರು ಲೌಕಿಕ ಜೀವನದಿಂದ ಬೇಸತ್ತು ಅಲೌಕಿಕ ಜಗತ್ತಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.

1962 ರಲ್ಲಿ ಭಾರತೀಯ ಸೇನೆಗೆ ಸೇರಿಕೊಂಡ ಕಮಲ್​ ಅವರು ಕರ್ನಲ್​ ಹುದ್ದೆ ಪಡೆದಿದ್ದರು. ಬಳಿಕ 1968 ರಲ್ಲಿ ಸೇನೆಯಿಂದ ಹೊರಬಂದು ಐಎಎಸ್​ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಸರ್ಕಾರದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಕಮಲ್​ ಅವರು 2006 ರಲ್ಲಿ ನಿವೃತ್ತಿ ಹೊಂದಿದರು. ಬಳಿಕ ಸನ್ಯಾಸ ಜೀವನ ಆಯ್ದುಕೊಂಡ ಅವರು ಪರಮಾತ್ಮನ ಸ್ತುತಿಸುತ್ತಾ ಜೀವನ ಕಳೆಯುತ್ತಿದ್ದಾರೆ.

ಭಾರತೀಯ ಆಡಳಿಯ ಸೇವೆಯಲ್ಲಿದ್ದ ವೇಳೆ ಅವರನ್ನು ಹಲವಾರು ಪ್ರಮುಖವಲ್ಲದ ಹುದ್ದೆಗಳಿಗೆ ವರ್ಗ ಮಾಡಲಾಗಿತ್ತು. ಇದರಿಂದ ಅವರು ಜನರಿಗೆ ಹತ್ತಿರವಾಗಿ ಸೇವೆ ಮಾಡಲು ಅವಕಾಶ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಡಾ ಕಮಲ್​ ಅವರು, ಸನ್ಯಾಸತ್ವ ಪಡೆದ ಬಳಿಕ ಕಳೆದ 16 ವರ್ಷಗಳಲ್ಲಿ ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ. ಎಲ್ಲ ದೇಶಗಳು ಎದುರಿಸುತ್ತಿರುವ ಮೂಲ ಸಮಸ್ಯೆಯೆಂದರೆ ಅದು ಕೃಷಿ. ಕೃಷಿಯತ್ತ ಹೆಚ್ಚಿನ ಗಮನಹರಿಸಿದರೆ ದೇಶ ಮತ್ತು ಜನರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸನ್ಯಾಸಿಯಾಗಿ ನಾನು ಈಗ ನನ್ನ ಜೀವನವನ್ನು ಸಂತರೊಂದಿಗೆ ಕಳೆಯುತ್ತೇನೆ. ಗೋವುಗಳನ್ನು ಸಾಕಲು ಜನರಿಗೆ ಸಲಹೆ ನೀಡುವೆ ಎಂದು ಹೇಳಿದರು.

ಶಾಲಾ- ಕಾಲೇಜಿನಂತೆ ಹಿಂದಿನ ಶಿಕ್ಷಣ ಪದ್ಧತಿಯಾದ ಗುರುಕುಲಗಳನ್ನು ಪುನಾರಂಭಿಸಬೇಕು. ಇದಕ್ಕಾಗಿ ಸರ್ಕಾರವನ್ನು ಅವಲಂಬಿಸುವ ಬದಲು ಜನರೇ ಸ್ವಯಂಪ್ರೇರಿತರಾಗಿ ಬೆಂಬಲಿಸಬೇಕು ಎಂದು ಹೇಳುತ್ತಾರೆ. ಅಲ್ಲದೇ. ಕೇಂದ್ರ ಸರ್ಕಾರ ಆರಂಭಿಸಿರುವ ಸಶಸ್ತ್ರ ಪಡೆಗಳಿಗೆ ಅಗ್ನಿವೀರರ ನೇಮಕ ಪದ್ಧತಿಯನ್ನು ಹೊಗಳಿರುವ ಡಾ.ಕಮಲ್​, ಸರ್ಕಾರ ಇಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸರ್ಕಾರಿ ಇಲಾಖೆಗಳಲ್ಲೂ ಜಾರಿಗೆ ತರಬೇಕು. ಇದು ಸರಿಯಾದ ನೀತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಓದಿ:ಮೆಟ್ರೋ ಪ್ಲಾಟ್​ ಫಾರ್ಮ್​ ಮೇಲೆ ವ್ಯಕ್ತಿ ಮೂತ್ರ ವಿಸರ್ಜನೆ: ವಿಲಕ್ಷಣ ವಿಡಿಯೋ!

ABOUT THE AUTHOR

...view details