ಮೇಷ :ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಕುಟುಂಬದಲ್ಲಿ ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಕಾಡುತ್ತಿರುವ ಒತ್ತಡವನ್ನು ನಿವಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದಾರೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸೇರಿಕೊಂಡು ಭವಿಷ್ಯಕ್ಕಾಗಿ ಕೆಲವೊಂದು ಯೋಜನೆಗಳನ್ನು ರೂಪಿಸಲಿದ್ದೀರಿ. ವಾರದ ಆರಂಭದಲ್ಲಿ ಅಡಗಿರುವ ಕೆಲವೊಂದು ವಿಷಯಗಳನ್ನು ಕಂಡುಹಿಡಿಯಲು ನೀವು ಯತ್ನಿಸಲಿದ್ದೀರಿ. ನೀವು ವೀಲು ಅಥವಾ ಗೌಪ್ಯ ಹಣವನ್ನು ಪಡೆಯುವ ಸಾಧ್ಯತೆ ಇದೆ. ಇದು ನಿಮಗೆ ಸಾಕಷ್ಟು ಸಂತೋಷವನ್ನು ನೀಡಲಿದೆ. ನೀವು ಇದರಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ಆದರೆ ಈ ವಾರದಲ್ಲಿ ಯಾವುದೇ ಹೊಸ ವಾಹನವನ್ನು ಖರೀದಿಸಬೇಡಿ. ಏಕೆಂದರೆ ಸಮಯವು ಅನುಕೂಲಕರವಾಗಿಲ್ಲ. ಉದ್ಯೋಗದಲ್ಲಿರುವವರು ಸಹ ತಮ್ಮ ಕೆಲಸದ ಸ್ಥಿತಿಯಲ್ಲಿ ಸುಧಾರಣೆ ತರಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದ ಕುರಿತು ಸಂವೇದನೆ ತೋರಲಿದ್ದಾರೆ ಹಾಗೂ ಕಠಿಣ ಶ್ರಮ ಪಡಲಿದ್ದಾರೆ. ಆದರೆ ಕೆಲವೊಂದು ಸಣ್ಣಪುಟ್ಟ ಅಡಚಣೆಗಳು ಕಾಣಿಸಿಕೊಳ್ಳಬಹುದು.
ವೃಷಭ :ಈ ವಾರ ಒಟ್ಟಾರೆ ನಿಮಗೆ ಭಾಗಶಃ ಒಳ್ಳೆಯ ಫಲ ಲಭಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನವು ಒತ್ತಡದ ನಡುವೆಯೂ ಪ್ರೇಮದಿಂದ ಕೂಡಿರಲಿದೆ. ಆದರೆ ಪ್ರೇಮ ಜೀವನ ಸಾಗಿಸುತ್ತಿರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಗೆಳೆಯರ ಜೊತೆ ಮೋಜು ಅನುಭವಿಸಲು ಮತ್ತು ಸುತ್ತಾಡಲು ನಿಮಗೆ ಅವಕಾಶ ಸಿಗಬಹುದು. ಪ್ರಯಾಣದಲ್ಲೇ ಸಮಯ ಕಳೆದು ಹೋಗಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ವ್ಯವಹಾರದ ಕುರಿತು ಸಕ್ರಿಯರಾಗಲಿದ್ದೀರಿ. ಆದರೂ ಭವಿಷ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಲಿದ್ದು ಅದನ್ನು ನೀವು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲಿದ್ದೀರಿ. ವಾರದ ನಡುವೆ ನಿಮ್ಮ ಮಾನಸಿಕ ಚಿಂತೆ ಹೆಚ್ಚಬಹುದು. ಹಣಕಾಸಿನ ನಷ್ಟ ಉಂಟಾಗಬಹುದು. ಆದರೆ ವಾರದ ಕೊನೆಯ ದಿನಗಳು ಲಾಭದಾಯಕ ಎನಿಸಲಿವೆ. ಉದ್ಯೋಗದಲ್ಲಿ ಬಿರುಸು ಕಾಣಿಸಿಕೊಳ್ಳಬಹುದು. ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ನೀವು ಯತ್ನಿಸಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಒತ್ತಡದಿಂದ ದೂರವುಳಿಯಬೇಕು. ಒತ್ತಡವು ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ದೂರವುಳಿಯಲು ಧ್ಯಾನವು ಸಹಕಾರಿ.
ಮಿಥುನ :ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ತೃಪ್ತಿ ಅನುಭವಿಸಲಿದ್ದಾರೆ. ಗ್ರಹಗಳ ಆಶೀರ್ವಾದದಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಜೀವನ ಸಂಗಾತಿಯ ಜೊತೆಗೆ ಎಲ್ಲಾದರೂ ಹೋಗುವ ಯೋಜನೆ ರೂಪಿಸಬಹುದು. ಈ ವಾರದಲ್ಲಿ ಪ್ರೇಮ ಜೀವನದ ವಿಚಾರದಲ್ಲಿ ಉತ್ತಮ. ವಾರದ ಆರಂಭದಲ್ಲಿ ನಿಮಗೆ ಖರ್ಚುವೆಚ್ಚಗಳು ಉಂಟಾಗುವ ಸಾಧ್ಯತೆ ಇದೆ. ಯಾವುದೇ ಮುನ್ಸೂಚನೆ ಇಲ್ಲದೆಯೇ ಹಠಾತ್ ಆಗಿ ಈ ಖರ್ಚುವೆಚ್ಚಗಳು ಉಂಟಾಗಬಹುದು. ಈ ವಾರದಲ್ಲಿ ಆದಾಯವು ಚೆನ್ನಾಗಿರಲಿದೆ. ನಿಮ್ಮ ವ್ಯವಹಾರದಲ್ಲಿನ ಪ್ರಗತಿ ಚೆನ್ನಾಗಿರಲಿದೆ. ನೀವು ಈ ಹಿಂದೆ ಮಾಡಿದ ಕಠಿಣ ಶ್ರಮಕ್ಕೆ ಈ ವಾರದಲ್ಲಿ ಒಳ್ಳೆಯ ಫಲಿತಾಂಶ ದೊರೆಯಲಿದೆ. ಕಠಿಣ ಶ್ರಮದ ಕಾರಣ ಪರಿಸ್ಥಿತಿಯು ನಿಮಗೆ ಅನುಕೂಲಕರವಾಗಿ ಇರಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ತಮ್ಮ ಅಧ್ಯಯನವನ್ನು ಆನಂದಿಸಲು ಅವರಿಗೆ ಅವಕಾಶ ದೊರೆಯಲಿದೆ. ಅವರು ಶ್ರದ್ಧೆಯಿಂದ ಕಲಿಯಲಿದ್ದು ಅವರಿಗೆ ಅದು ಒಳಿತನ್ನು ಮಾಡಲಿದೆ.
ಕರ್ಕಾಟಕ :ವಾರದ ಆರಂಭಿಕ ದಿನಗಳು ನಿಮಗೆ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಮಕ್ಕಳಿಂದ ನಿಮಗೆ ಪ್ರೀತಿಯು ಲಭಿಸಲಿದೆ. ಕುಟುಂಬದ ಸದಸ್ಯರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಸಂಪೂರ್ಣವಾಗಿ ಆನಂದಿಸಲಿದ್ದಾರೆ. ಪ್ರೇಮ ಜೀವನದ ಕುರಿತು ಮಾತನಾಡುವುದಾದರೆ, ಈ ವಾರವು ಕಳೆದ ವಾರಕ್ಕಿಂತ ಒಳ್ಳೆಯದು. ಪರಸ್ಪರ ತಪ್ಪು ಗ್ರಹಿಕೆಯು ಸಾಕಷ್ಟು ಮಟ್ಟಿಗೆ ನಿವಾರಣೆಯಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮ ನಿಮಗೆ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ಬಾಸ್ ನಿಮ್ಮ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ. ಇದರ ಫಲಿತಾಂಶವನ್ನು ನೀವು ಗಮನಿಸಬಹುದು. ವಾರದ ಮಧ್ಯದಲ್ಲಿ ನಿಮ್ಮ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ನಿಮ್ಮ ಗಮನವನ್ನು ಕೇಂದ್ರೀಕರಿಸಿ ಹಾಗೂ ಹೊರಗಿನ ವಿಷಯಗಳನ್ನು ಪಕ್ಕಕ್ಕೆ ಇಟ್ಟು ಅಧ್ಯಯನಕ್ಕೆ ಒತ್ತು ನೀಡಬೇಕು. ಆಗ ಮಾತ್ರವೇ ನೀವು ಉತ್ತಮ ಸಾಧನೆ ಮಾಡಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನಿಮಗೆ ಒಳ್ಳೆಯದು.
ಸಿಂಹ :ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಪ್ರೇಮ ಜೀವನದ ವಿಚಾರದಲ್ಲಿ ಮಾತನಾಡುವುದಾದರೆ, ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಲು ನಿಮಗೆ ಅನೇಕ ಅವಕಾಶಗಳು ಲಭಿಸಲಿವೆ. ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ಲಭಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ಅನುರಾಗದ ಕ್ಷಣಗಳನ್ನು ಆನಂದಿಸಲಿದ್ದಾರೆ. ಆದರೆ ನಿಮ್ಮ ನಡುವೆ ಮಾತಿನ ಚಕಮಕಿ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ನೀವು ದುಬಾರಿ ಬಟ್ಟೆಗಳು, ಉಪಕರಣಗಳು ಮತ್ತು ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ವೈಯಕ್ತಿಕ ಆರೈಕೆಗಾಗಿ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಾಕಷ್ಟು ಹಣ ನಷ್ಟ ಉಂಟಾಗಬಹುದು ಹಾಗೂ ಆದಾಯವು ತಗ್ಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ಹಿರಿಯರ ಮಾರ್ಗದರ್ಶನದ ಸಹಾಯದಿಂದ ನಿಮ್ಮ ಕೆಲಸವನ್ನು ನೀವು ಮುಂದಕ್ಕೆ ಒಯ್ಯಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಕ್ರಿಯರಾಗಲಿದ್ದಾರೆ. ಅವರು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಕನ್ಯಾ :ಈ ವಾರ ನಿಮಗೆ ಹೊಸ ಭರವಸೆಯನ್ನು ಹೊತ್ತು ತರಲಿದೆ. ನಿಮ್ಮ ಕೆಲವೊಂದು ಆಸೆ ಆಕಾಂಕ್ಷೆಗಳು ಈಡೇರಲಿವೆ. ನಿಮ್ಮ ಗೆಳೆಯರ ಬೆಂಬಲವನು ನೀವು ಪಡೆಯಲಿದ್ದೀರಿ. ಅವರೊಂದಿಗೆ ಎಲ್ಲಾದರೂ ದೂರಕ್ಕೆ ಹೋಗುವ ಯೋಜನೆ ರೂಪಿಸುವ ಸಾಧ್ಯತೆ ಇದೆ. ಹೀಗಾಗಿ ಈ ವಾರವು ಮನರಂಜನೆಯಿಂದ ಕೂಡಿರಲಿದೆ. ವಿವಾಹಿತ ವ್ಯಕ್ತಿಗಳು, ಕೌಟುಂಬಿಕ ಜೀವನದಲ್ಲಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ಸವಾಲುಗಳ ನಡುವೆಯೂ ಪರಸ್ಪರರ ಪ್ರೀತಿಯನ್ನು ಅನುಭವಿಸಲಿದ್ದಾರೆ ಹಾಗೂ ತಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ. ಅನ್ಯೋನ್ಯತೆಯು ಹೆಚ್ಚುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನಿಮ್ಮ ಪ್ರೇಮ ಜೀವನದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಕೆಲವೊಂದು ಅನಿರೀಕ್ಷಿತ ವ್ಯಕ್ತಿಗಳ ಸಹಾಯವನ್ನು ಪಡೆದು ತಮ್ಮ ಕೆಲಸದಲ್ಲಿ ಮುಂದಕ್ಕೆ ಸಾಗಲಿದ್ದಾರೆ. ಈ ವಾರದಲ್ಲಿ ಉದ್ಯೋಗಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಈ ವಾರದಲ್ಲಿ ನೀವು ವಿವಿಧ ರೀತಿಯ ಅಡಚಣೆಗಳನ್ನು ಎದುರಿಸಬಹುದು. ಆರೋಗ್ಯದ ಕುರಿತು ಹೇಳುವುದಾದರೆ, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮನ್ನು ಸದ್ಯಕ್ಕೆ ಕಾಡದು. ಆದರೆ ವಿಪರೀತವಾಗಿ ಕರಿದ ಆಹಾರವನ್ನು ಸೇವಿಸಬೇಡಿ.