ಮೇಷ:ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಮಾನಸಿಕ ಒತ್ತಡವು ದೂರವಾಗಲಿದೆ. ಸಂಪೂರ್ಣ ಚುರುಕುತನದಿಂದ ನೀವು ಮುಂದುವರಿಯಲಿದ್ದೀರಿ. ಉದ್ಯೋಗಿಗಳು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ಆದರೆ ಮಹಿಳೆಯ ಜೊತೆಗೆ ದುರ್ವರ್ತನೆ ತೋರಿದರೆ ನಿಮಗೆ ಹಾನಿಯಾದೀತು. ಆದ್ದರಿಂದ ಎಚ್ಚರಿಕೆಯಿಂದ ಇರಿ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಯೋಜನೆಗಳು ಯಶಸ್ವಿಯಾಗಿ ಮುಂದುವರಿಯಲಿವೆ. ಹೀಗಾಗಿ ನೀವು ಉತ್ತಮ ಲಾಭ ಪಡೆಯಲಿದ್ದೀರಿ. ಹಣಕಾಸಿನ ವಿಚಾರದಲ್ಲಿಯೂ ಇದು ಉತ್ತಮ ಕಾಲ. ಅದೃಷ್ಟವು ನಿಮ್ಮ ಪರ ಇರುವುದರಿಂದ ನೀವು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದೀರಿ. ಕೌಟುಂಬಿಕ ಜೀವನದಲ್ಲಿ ಸಂತಸ ಹಾಗೂ ಶಾಂತಿ ದೊರೆಯಲಿದ್ದು ಕುಟುಂಬದ ಸದಸ್ಯರು ನಿಮ್ಮ ಕೆಲಸದಲ್ಲಿ ನಿಮಗೆ ನೆರವು ಒದಗಿಸಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಬಲವಾಗಿ ಮುಂದುವರಿಯಲಿದ್ದು ತಮ್ಮ ಜೀವನ ಸಂಗಾತಿಯ ಬೆಂಬಲದಿಂದ ತಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸಲಿದ್ದಾರೆ. ಅಲ್ಲದೆ ಪ್ರೇಮ ಸಂಬಂಧದಲ್ಲಿರುವವರು ತಮ್ಮ ಪ್ರೇಮಿಯೊಂದಿಗೆ ಸಂತಸದ ಪ್ರಪಂಚದಲ್ಲಿ ಬದುಕಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಚುರುಕು ಬುದ್ಧಿಮತ್ತೆಯ ಕಾರಣ ಪ್ರಯೋಜನ ಗಳಿಸಲಿದ್ದಾರೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.
ವೃಷಭ:ಈ ವಾರ ನಿಮಗೆ ಸಾಧಾರಣವಾಗಿ ಫಲಪ್ರದ ಎನಿಸಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಅನಗತ್ಯ ಪ್ರಯಾಣದಿಂದಾಗಿ ನೀವು ಮಾನಸಿಕವಾಗಿ ಬಳಲಬಹುದು. ಇದರಿಂದ ದೂರವಿರಲು ಯತ್ನಿಸಿ. ಕುಟುಂಬದಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿ. ಉದ್ಯೋಗದಲ್ಲಿರುವವರಿಗೆ ಈ ವಾರ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಕೆಲಸದ ಮೇಲೆ ನೀವು ಗಮನ ನೀಡಿ. ಯಾವುದರ ಕುರಿತೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಆಗ ಮಾತ್ರವೇ ನೀವು ಯಶಸ್ಸನ್ನು ಗಳಿಸಬಹುದು. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ಉದ್ಯೋಗಿಗಳ ಹಿತಾಸಕ್ತಿಗಳಿಗೆ ನೀವು ಗಮನ ನೀಡಬೇಕು. ಇಲ್ಲದಿದ್ದರೆ ಅವರ ಕಡೆಯಿಂದ ಸಮಸ್ಯೆ ಎದುರಾಗಬಹುದು. ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ವಿವಾಹಿತ ವ್ಯಕ್ತಿಗಳು ಸಾಮಾನ್ಯ ಗೃಹಸ್ಥ ಬದುಕನ್ನು ಸಾಗಿಸಲಿದ್ದಾರೆ. ನಿಮ್ಮ ಕುರಿತು ಅವರು ಹೊಂದಿರುವ ಮೌಲ್ಯವು ಇನ್ನೂ ಹೆಚ್ಚಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನೀವು ನಿಮ್ಮ ಪ್ರೇಮಿಯ ಜೊತೆ ಸಮಯ ಕಳೆಯಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಮಿಥುನ:ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೀರಿ. ನಿಮ್ಮ ಕ್ರಮಗಳ ಕುರಿತು ಪ್ರಶಂಸೆ ವ್ಯಕ್ತವಾಗಲಿದೆ. ಆದಾಯ ಹೆಚ್ಚಲಿದೆ. ಖರ್ಚುವೆಚ್ಚಗಳು ತಗ್ಗಲಿದ್ದು ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಈ ಕಾರಣದಲ್ಲಿ ನಿಮ್ಮ ಧೈರ್ಯವು ಉತ್ತುಂಗದಲ್ಲಿರಲಿದೆ. ಅದೃಷ್ಟವು ನಿಮ್ಮ ಪರವಾಗಿದೆ. ಈ ಕಾರಣದಿಂದಾಗಿ ನಿಮಗೆ ಯಶಸ್ಸಿನ ಬಾಗಿಲು ತೆರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದಾರೆ ಹಾಗೂ ಕಠಿಣ ಶ್ರಮ ಪಡಲಿದ್ದಾರೆ. ನಿಮ್ಮ ಕೆಲಸಕ್ಕೆ ನೀವು ಸಾಕಷ್ಟು ಗಮನ ನೀಡಲಿದ್ದೀರಿ. ಇದು ಉತ್ತಮ ಫಲಿತಾಂಶ ನೀಡಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಹೀಗಾಗಿ ನೀವು ನಿಮ್ಮ ವ್ಯವಹಾರದ ಕುರಿತು ಸಾಕಷ್ಟು ಆಶಾವಾದ ತೋರಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಸಂಬಂಧದಲ್ಲಿ ಪ್ರೇಮವು ಹೆಚ್ಚಲಿದೆ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ ಈ ವಾರವು ಉತ್ತಮ. ಹದಗೆಟ್ಟಿರುವ ವೈವಾಹಿಕ ಜೀವನದಲ್ಲಿ ನೀವು ಹಿರಿಯರ ಆಶೀರ್ವಾದವನ್ನು ಪಡೆಯಲಿದ್ದೀರಿ. ನಿಮ್ಮ ಸಮಸ್ಯೆ ಬಗೆಹರಿಯಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.
ಕರ್ಕಾಟಕ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ಈ ಪ್ರಯಾಣವು ನಿಮಗೆ ಸಂತಸ ಮತ್ತು ಉಲ್ಲಾಸವನ್ನು ನೀಡಲಿದೆ. ಉದ್ಯೋಗಿಗಳಿಗೆ ತಮ್ಮ ಕೆಲಸದಲ್ಲಿ ಸಣ್ಣಪುಟ್ಟ ಸವಾಲುಗಳು ಎದುರಾಗಬಹುದು. ಆದರೆ ಇವೆಲ್ಲವೂ ಈ ಹಿಂದಿನ ಸವಾಲುಗಳಷ್ಟು ದೊಡ್ಡ ಸವಾಲುಗಳಲ್ಲ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಹಣವನ್ನು ನೀವು ಹೂಡಿಕೆ ಮಾಡಿ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ವಿವಾಹಿತ ವ್ಯಕ್ತಿಗಳು ತಮ್ಮ ಗೃಹಸ್ಥ ಬದುಕಿನಲ್ಲಿ ಪರಸ್ಪರರ ಜವಾಬ್ದಾರಿಗಳನ್ನು ಪೂರ್ಣಗೊಳಿಸುವುದರಿಂದ ಅವರು ಬದುಕು ಚೆನ್ನಾಗಿರಲಿದೆ ಹಾಗೂ ಸಂಬಂಧದಲ್ಲಿ ಪ್ರೀತಿ ಇರಲಿದೆ. ಪ್ರೇಮಿಸುತ್ತಿರುವವರಿಗೆ ವಾರದ ಕೊನೆಯ ದಿನಗಳು ಉತ್ತಮ. ನೀವು ಪರಸ್ಪರ ಮುಕ್ತವಾಗಿ ಮಾತನಾಡಲು ಅವಕಾಶ ಪಡೆಯಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ನೇರ ಆಹಾರದಿಂದ ದೂರವಿರುವುದು ಒಳ್ಳೆಯದು. ವಿದ್ಯಾರ್ಥಿಗಳು ಶಿಕ್ಷಣದ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.
ಸಿಂಹ:ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಮಾನಸಿಕ ಚಿಂತೆಗಳು ಎದುರಾಗಲಿದ್ದು ವಾರದ ಮಧ್ಯದಲ್ಲಿ ಇವೆಲ್ಲವೂ ದೂರವಾಗಲಿವೆ ಹಾಗೂ ಅದೃಷ್ಟ ಬಲ ನಿಮಗೆ ದೊರೆಯಲಿದೆ. ಕೆಲಸದಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಏನಾದರೂ ಒಳ್ಳೆಯ ಸುದ್ದಿ ಪಡೆಯಲಿದ್ದೀರಿ. ನಿಮ್ಮ ಗೃಹಸ್ಥ ಬದುಕು ಚೆನ್ನಾಗಿರಲಿದೆ. ಸಂಬಂಧದಲ್ಲಿ ಪ್ರೀತಿಯು ಹೆಚ್ಚಲಿದೆ ಹಾಗೂ ಪ್ರೇಮದ ಬದುಕು ಸಾಗಿಸುವವರು ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ಪ್ರಣಯದ ಜೊತೆಗೆ ಪರಸ್ಪರ ಅರ್ಥೈಸುವಿಕೆಯು ನಿಮ್ಮ ಸಂಬಂಧದಲ್ಲಿ ಬೆಳೆಯಲಿದೆ. ಹೀಗಾಗಿ ನಿಮ್ಮ ಸಂಬಂಧದಲ್ಲಿ ನೀವು ಪಕ್ವತೆಯನ್ನು ಪಡೆಯಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಹೀಗಾಗಿ ಈ ಸಮಯವನ್ನು ಆನಂದಿಸಲು ನಿಮಗೆ ಸಾಧ್ಯವಾಗುತ್ತದೆ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಯಶಸ್ಸು ಪಡೆಯಲಿದ್ದು, ಅವರ ಕೆಲಸದಲ್ಲಿ ಪ್ರಗತಿ ದೊರೆಯಲಿದೆ. ಇದೇ ವೇಳೆ, ವ್ಯವಹಾರದಲ್ಲಿ ತೊಡಗಿರುವವರು ತಮ್ಮ ಕೆಲಸದ ಮೇಲೆ ಹಿಡಿತ ಸಾಧಿಸಿ ಯಶಸ್ಸನ್ನು ಗಳಿಸಲಿದ್ದಾರೆ. ಈ ವಾರವು ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು. ನಿಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವಾರದ ಆರಂಭಿಕ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಕ್ಕೆ ಅನುಕೂಲಕರ.
ಕನ್ಯಾ: ಈ ನಿಮಗೆ ವಾರವು ಸಾಧಾರಣವಾಗಿ ಫಲದಾಯಕ ಎನಿಸಲಿದೆ. ಆದರೆ ನಿಮ್ಮ ಚುರುಕುತನದ ಮೂಲಕ ನೀವು ಯಶಸ್ಸನ್ನು ಪಡೆಯಲಿದ್ದೀರಿ. ಸಂಬಳಕ್ಕೆ ದುಡಿಯುವ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ತೋರುವ ಪ್ರಾಮಾಣಿಕತೆಗಾಗಿ ಹೆಸರುವಾಸಿಯಾಗಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ದೂರದ ಪ್ರದೇಶಗಳಲ್ಲಿ ಕೆಲಸ ಮಾಡಿ ಮತ್ತು ದೂರದ ರಾಜ್ಯಗಳನ್ನು ಸಂಪರ್ಕಿಸುವ ಮೂಲಕ ಪ್ರಯೋಜನ ಪಡೆಯಲಿದ್ದಾರೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಬಂಧದಲ್ಲಿ ನೀವು ಸೃಜನಶೀಲತೆಯನ್ನು ತೋರಲಿದ್ದೀರಿ ಹಾಗೂ ನಿಮ್ಮ ಜೀವನ ಸಂಗಾತಿಯನ್ನು ಮೆಚ್ಚಿಸಲು ಸಕಲ ಯತ್ನ ಮಾಡಲಿದ್ದೀರಿ. ಪ್ರೇಮದ ಬದುಕು ಸಾಗಿಸುವವರು ಏರುಪೇರನ್ನು ಎದುರಿಸಬೇಕಾಗುತ್ತದೆ. ಆದರೆ ನಿಮ್ಮ ನಡುವಿನ ಸಂಭಾಷಣೆಯು ಪ್ರೀತಿಯಿಂದ ಕೂಡಲಿದೆ. ಪರಸ್ಪರರ ಹೃದಯ ಗೆಲ್ಲುವಲ್ಲಿ ಅವರು ಯಶಸ್ವಿಯಾಗಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಕೆಲವೊಂದು ಅಡೆತಡೆಗಳನ್ನು ಎದುರಿಸಲಿದ್ದಾರೆ. ಆದರೂ ತಮ್ಮ ಚುರುಕು ಬುದ್ಧಿಮತ್ತೆಯ ಕಾರಣ ಅವರು ಅಧ್ಯಯನದಲ್ಲಿ ಪ್ರಯೋಜನ ಪಡೆಯಲಿದ್ದಾರೆ. ವಾರದ ಮಧ್ಯ ಭಾಗದಲ್ಲಿ ಪ್ರಯಾಣಿಸುವುದು ಒಳ್ಳೆಯದು.