ಮೇಷ: ಈ ವಾರ ನಿಮಗೆ ಅತ್ಯಂತ ಪ್ರಮುಖ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ಸುಧಾರಣೆ ತರಲು ತಮ್ಮೆಲ್ಲ ಪ್ರಯತ್ನವನ್ನು ಮಾಡಲಿದ್ದಾರೆ. ಆದರೆ ಇದು ಕಾರ್ಯಗತವಾಗಲು ಸಾಕಷ್ಟು ಸಮಯ ಬೇಕಾದೀತು. ಪ್ರೇಮ ಸಂಬಂಧದಲ್ಲಿರುವವರು ವಾರದ ಆರಂಭದಲ್ಲಿ ಸಾಕಷ್ಟು ಪ್ರಣಯ ಮತ್ತು ಸೃಜನಶೀಲತೆಯನ್ನು ತೋರಲಿದ್ದಾರೆ. ವಾರ ಕಳೆದಂತೆ ನಿಮ್ಮ ಕಾರ್ಯನಿರತತೆಯು ನಿಮ್ಮ ಸಂಬಂಧವನ್ನು ಬಾಧಿಸಲಿದೆ. ಆದರೆ ವಾರದ ಕೊನೆಯ ದಿನಗಳಲ್ಲಿ, ನಿಮ್ಮ ಸಂಬಂಧದಲ್ಲಿ ಪ್ರೇಮವು ಹೆಚ್ಚಲಿದೆ. ನಿಮ್ಮ ಪ್ರೇಮಿಯೊಂದಿಗೆ ಎಲ್ಲಾದರೂ ಹೋಗಲು ನಿಮಗೆ ಅವಕಾಶ ದೊರೆಯಲಿದೆ. ನೀವು ನಿಮ್ಮ ಪ್ರಣಯ ಸಂಗಾತಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಪರಿಚಯಿಸಬಹುದು. ನಿಮ್ಮ ಜಾಣ್ಮೆಯನ್ನು ಬಳಸಿ ಅನೇಕ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಾಧ್ಯವಾಗಲಿದೆ. ಸರ್ಕಾರಿ ವಲಯದಿಂದ ಏನಾದರೂ ದೊಡ್ಡದಾದ ಸೌಲಭ್ಯವು ನಿಮ್ಮನ್ನು ಕಾಯುತ್ತಿದೆ. ಅದನ್ನು ಅಳವಡಿಸಿಕೊಳ್ಳಲು ಯತ್ನಿಸಿ. ವ್ಯವಹಾರದ ದೃಷ್ಟಿಯಿಂದ ಈ ವಾರವು ಒಳ್ಳೆಯದು. ಈ ಹಿಂದೆ ನೀವು ಮಾಡಿದ ಪ್ರಯತ್ನಗಳು ಮತ್ತು ಈಗ ಮಾಡಲಿರುವ ಪ್ರಯತ್ನಗಳು ನಿಮಗೆ ಸಾಕಷ್ಟು ಲಾಭವನ್ನು ನೀಡಲಿವೆ. ನಿಮ್ಮ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತವಾಗಲಿದೆ. ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ವಿವಾದ ಮತ್ತು ಕೋಪದಿಂದ ದೂರವಿರಬೇಕು. ಆಗ ಮಾತ್ರವೇ ಎಲ್ಲವೂ ಸರಾಗವಾಗಿ ನಡೆಯುತ್ತದೆ ಹಾಗೂ ಕೆಲಸವು ಚೆನ್ನಾಗಿರಲಿದೆ.
ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೆ ವೈವಾಹಿಕ ಬದುಕಿನಲ್ಲಿ ಒತ್ತಡ ಹೆಚ್ಚಲಿದೆ. ನಿಮ್ಮ ಸೊಕ್ಕಿನ ಸ್ವಭಾವವು ನಿಮ್ಮ ವೈವಾಹಿಕ ಬದುಕಿನಲ್ಲಿ ಸಮಸ್ಯೆಯನ್ನು ಹೆಚ್ಚಿಸಬಹುದು. ಈ ಕುರಿತು ಎಚ್ಚರಿಕೆಯಿಂದ ಇರಿ. ಪ್ರೇಮ ಸಂಬಂಧದಲ್ಲಿರುವ ಜನರು ಸುಂದರ ಸ್ಥಳಗಳಿಗೆ ಪ್ರಯಾಣಿಸಬಹುದು. ಪರಸ್ಪರ ಸಾಮಿಪ್ಯತೆಯೂ ಹೆಚ್ಚಲಿದೆ. ನಿಮ್ಮ ಸಂಬಂಧವನ್ನು ಅರಿತುಕೊಂಡು ಇನ್ನಷ್ಟು ಸಾಮಿಪ್ಯವನ್ನು ಸಾಧಿಸಲಿದ್ದೀರಿ. ಕಠಿಣ ಶ್ರಮದ ಕಾರಣ ನಿಮಗೆ ಒಳ್ಳೆಯ ಯಶಸ್ಸು ದೊರೆಯಲಿದೆ. ಆದರೆ ಏನಾದರೂ ವಿಷಯದ ಕುರಿತ ಮಾನಸಿಕ ಭೀತಿಯು ನಿಮ್ಮನ್ನು ಕಾಡಬಹುದು. ಈ ಚಿಂತೆಯಲ್ಲಿ ಮುಳುಗುವ ಬದಲಿಗೆ ಅವುಗಳನ್ನು ಇತರರೊಂದಿಗೆ ಹಂಚಿಕೊಂಡರೆ ಅದು ನಿಮ್ಮ ಪಾಲಿಗೆ ಪ್ರಯೋಜನಕಾರಿಯಾದೀತು. ಕೆಲಸದಲ್ಲಿ ನಿಮ್ಮ ಸ್ಥಾನವು ಭದ್ರಗೊಳ್ಳಲಿದೆ. ಮಾನಸಿಕ ಒತ್ತಡ ಹೊರತುಪಡಿಸಿದರೆ ಬೇರೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದು. ನೀವಾಗಿಯೇ ಯಾವುದೇ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವ್ಯವಹಾರದ ವಿಚಾರದಲ್ಲಿ ಈ ವಾರವು ಪ್ರಗತಿಯನ್ನು ತಂದು ಕೊಡಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ.
ಮಿಥುನ: ಈ ವಾರ ನಿಮಗೆ ಅನುಕೂಲಕರವಾಗಿದೆ. ವಿವಾಹಿತ ವ್ಯಕ್ತಿಗಳ ಒತ್ತಡವು ದೂರಗೊಳ್ಳಲಿದೆ ಹಾಗೂ ನಿಮ್ಮ ಸಂಬಂಧದಲ್ಲಿ ಪ್ರೇಮ ಮತ್ತು ಪ್ರಣಯ ಹೆಚ್ಚಲಿದೆ. ಮಗುವಿನ ಕುರಿತು ಒಂದಷ್ಟು ಚರ್ಚೆಯನ್ನು ಮಾಡಲಿದ್ದೀರಿ. ಪ್ರೇಮ ಸಂಬಂಧದ ಕುರಿತು ಮಾತನಾಡುವುದಾದರೆ, ಈ ವಾರವು ಅನುಕೂಲಕರವಲ್ಲ. ಹೀಗಾಗಿ ಸಮಯವನ್ನು ಎಚ್ಚರಿಕೆಯಿಂದ ಕಳೆಯಿರಿ. ಅಲ್ಲದೆ ಹೆಚ್ಚು ಮಾತನಾಡಬೇಡಿ. ವಾರದ ಆರಂಭಿಕ ದಿನಗಳಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗಬಹುದು. ವ್ಯವಹಾರದ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದ್ದು ನಿಮ್ಮ ಪ್ರಗತಿ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಅನುಕೂಲಕರ. ನಿಮ್ಮ ಕೆಲಸದಲ್ಲಿ ನಿಮ್ಮ ಸ್ಥಾನವನ್ನು ನೀವು ಭದ್ರಗೊಳಿಸಲಿದ್ದೀರಿ. ಕೆಲಸ ಮಾಡುವಾಗ ಸಂತಸವನ್ನು ಅನುಭವಿಸಲಿದ್ದೀರಿ. ಇದು ನಿರಂತರವಾಗಿ ಕಾರ್ಯಕ್ಷಮತೆಯಲ್ಲಿ ಸುಧಾರಣೆಯನ್ನು ತರಬಹುದು. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದ ಕುರಿತು ಹೆಚ್ಚಿನ ಶ್ರಮ ಪಡಬೇಕು. ನೀವು ಕಠಿಣ ಶ್ರಮ ಪಡಬೇಕು. ಆಗ ಮಾತ್ರವೇ ಉತ್ತಮ ಫಲಿತಾಂಶ ಪಡೆಯಲಿದ್ದೀರಿ.
ಕರ್ಕಾಟಕ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಅಭಿಪ್ರಾಯವನ್ನು ಅರಿತುಕೊಳ್ಳಲು ಯತ್ನಿಸಿ. ಆಗ ಮಾತ್ರವೇ ನಿಮ್ಮ ಸಂಬಂಧದಲ್ಲಿ ಸ್ಥಿರತೆ ಕಂಡು ಬರಲಿದೆ. ಪ್ರೇಮ ಸಂಬಂಧದ ಕುರಿತು ಮಾತನಾಡುವುದಾದರೆ, ನಿಮ್ಮ ಪ್ರೇಮಿಯ ಮಾತನ್ನು ಆಲಿಸುವುದರಿಂದ ಮತ್ತು ಅವರ ಜೊತೆಗೆ ಸಮಯ ಕಳೆಯುವುದರಿಂದ ಸಂಬಂಧದಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿವೆ. ಅವರಿಗೆ ಒಂದಷ್ಟು ಸಮಯವನ್ನು ನೀಡಿರಿ ಹಾಗೂ ಅವರ ವರ್ತನೆಯಲ್ಲಿ ಬದಲಾವಣೆ ಉಂಟಾಗಲು ಕಾರಣವೇನು ಎಂಬುದನ್ನು ಅರಿತುಕೊಳ್ಳಲು ಯತ್ನಿಸಿ. ವಾರದ ಆರಂಭದಲ್ಲಿ, ಕುಟುಂಬಕ್ಕೆ ಹೊಸ ವ್ಯಕ್ತಿಗಳ ಆಗಮನದ ಕಾರಣ ಉತ್ಸುಕತೆಯು ಕಾಣಿಸಿಕೊಳ್ಳಲಿದೆ. ಅಲ್ಲದೆ ಪರಸ್ಪರ ಆಸಕ್ತಿ ತೋರಲಿದ್ದೀರಿ. ಮನೆಯ ವಾತಾವರಣವು ಚೆನ್ನಾಗಿರಲಿದೆ. ಖರ್ಚುವೆಚ್ಚಗಳು ಹಾಗೆಯೇ ಮುಂದುವರಿಯಲಿವೆ. ಆದರೆ ಆದಾಯವು ಚೆನ್ನಾಗಿರಲಿದೆ. ಸರ್ಕಾರಿ ಉದ್ಯೋಗದಲ್ಲಿರುವವರು ಒಳ್ಳೆಯ ಲಾಭಗಳಿಸಲಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು, ತಮ್ಮ ಜಾಣ್ಮೆಯ ಕಾರಣ ಉತ್ತಮಗಳಿಕೆ ಮಾಡಲಿದ್ದಾರೆ. ಅಲ್ಲದೆ ಉತ್ತಮ ಪ್ರೋತ್ಸಾಹಕವೂ ದೊರೆಯಲಿದೆ.
ಸಿಂಹ:ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಒತ್ತಡ ಅನುಭವಿಸಬಹುದು. ಹೀಗಾಗಿ ಅವರ ಅನ್ಯೋನ್ಯತೆಯಲ್ಲಿ ಕೊರತೆ ಉಂಟಾಬಹುದು. ಹೀಗಾಗಿ ಈ ಒತ್ತಡದಿಂದ ದೂರವಿರಿ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಮನಸ್ಸಿನಲ್ಲಿ ಪರಸ್ಪರ ಪ್ರೇಮ ಭಾವನೆ ಇರಲಿದೆ. ನಿಮ್ಮ ಕೆಲಸದ ವಿಚಾರದಲ್ಲಿ ನೀವು ಸಮರ್ಪಣಾ ಭಾವವನ್ನು ತೋರಲಿದ್ದೀರಿ. ಇದು ನಿಮಗೆ ಕೆಲಸಕ್ಕೆ ದೃಢತೆಯನ್ನು ಒದಗಿಸಲಿದೆ. ನಿಮಗೆ ಇಷ್ಟವಿಲ್ಲದಿದ್ದರೂ ನಿಮ್ಮ ಬಾಸ್ ನಿಮಗೆ ಪ್ರಶಂಸೆಯ ಮಳೆಗರೆಯಲಿದ್ದಾರೆ. ಆದರೂ, ಈ ಸಮಯದಲ್ಲಿ ನಿಮ್ಮ ವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಮನೋಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು. ಆದರೆ ಆದಾಯವು ಚೆನ್ನಾಗಿರಲಿದೆ. ಹೊಸ ಸಾಧನವನ್ನು ಖರೀದಿಸಲು ನಿಮಗೆ ಅವಕಾಶ ಸಿಗಬಹುದು. ನೀವು ನಿಮ್ಮ ಕುಟುಂಬದ ಸದಸ್ಯರ ಅಗತ್ಯತೆಗಳನ್ನು ಈಡೇರಿಸುವುದಕ್ಕಾಗಿ ಏನಾದರೂ ವಿಶೇಷವಾದುದನ್ನು ನೀವು ಮಾಡಲಿದ್ದೀರಿ. ಎಲ್ಲಾದರೂ ದೂರಕ್ಕೆ ಸಾಗಲು ಕುಟುಂಬದಲ್ಲಿ ಯೋಜನೆ ರೂಪಿಸುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳು ಸ್ವಲ್ಪ ತಾಳ್ಮೆ ತೋರಬೇಕು.
ಕನ್ಯಾ: ಈ ವಾರದಲ್ಲಿ ನಿಮ್ಮ ಆಕಾಂಕ್ಷೆಗಳು ಈಡೇರಲಿವೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನ ಸವಾಲುಗಳಿಂದ ಹೊರ ಬರಲಿದ್ದಾರೆ ಹಾಗೂ ತಮ್ಮ ಮನಸ್ಸಿನಲ್ಲಿ ಇರುವುದೆಲ್ಲವನ್ನು ತಮ್ಮ ಜೀವನ ಸಂಗಾತಿಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದರಿಂದಾಗಿ ನಿಮ್ಮ ಮನಸ್ಸು ತಿಳಿಗೊಳ್ಳಲಿದೆ ಹಾಗೂ ಸಂಬಂಧದಲ್ಲಿ ಅನ್ಯೋನ್ಯತೆ ಕಾಣಿಸಿಕೊಳ್ಳಲಿದೆ. ಈ ವಾರದಲ್ಲಿ, ಪ್ರೇಮದ ಜೀವನದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಲಿದೆ. ಹೀಗಾಗಿ ಪ್ರೇಮ ಜೀವನವು ಸಾಮಾನ್ಯವಾಗಿರಲಿದೆ. ನಿಮ್ಮ ಪ್ರೇಮಿಯ ಕುರಿತು ನೀವು ಕಾಳಜಿ ವಹಿಸಬೇಕಾದೀತು. ನಿಮ್ಮ ಮನಸ್ಸಿನಲ್ಲಿ ಯಾವುದೇ ಇಚ್ಛೆ ಇರಲಿ, ಕಾಲ ಕಳೆದಂತೆ ಇದು ಈಡೇರಲಿದೆ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದ್ದು ನಿಮ್ಮ ಮನಸ್ಸಿನಲ್ಲಿ ಶಾಂತಿ ನೆಲೆಸಲಿದೆ. ಈ ವಾರದಲ್ಲಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ಇದಕ್ಕೆ ಗಮನ ಹರಿಸುವುದು ಅಗತ್ಯ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಕೆಲವೊಂದು ಹೊಸ ಪ್ರಯೋಗಗಳನ್ನು ಮಾಡಲಿದ್ದಾರೆ. ನಿಮ್ಮ ಯಾರಾದರೂ ಒಬ್ಬ ಸಂಗಾತಿಯ ಸಹಾಯದಿಂದ ನಿಮ್ಮ ಕೆಲಸಕ್ಕೆ ವೇಗ ನೀಡಲು ನೀವು ಯತ್ನಿಸಬಹುದು. ಇದು ನಿಮ್ಮ ಪಾಲಿಗೆ ಪ್ರಯೋಜನಕಾರಿ ಎನಿಸಲಿದೆ.