ಕರ್ನಾಟಕ

karnataka

ETV Bharat / bharat

ಮಕ್ಕಳಿಗೆ ಲಸಿಕೆ ಹಾಕುವ ಸರ್ಕಾರ ನಿರ್ಧಾರ ಒಳ್ಳೆಯದು: ತಜ್ಞ ವೈದ್ಯ ಗರ್ಗ್​

ಈಗ ಅಮೆರಿಕದಲ್ಲಿ ಮಕ್ಕಳಲ್ಲೂ ಒಮಿಕ್ರಾನ್​ ವೈರಸ್​ ಕಾಣಿಸಿಕೊಂಡಿದೆ. ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ ಎಂದು ಗುಜರಾತ್​ನ ವೈದ್ಯ ಪ್ರವೀಣ್​ ಗರ್ಗ್​ ಹೇಳಿದ್ದಾರೆ.

By

Published : Dec 30, 2021, 2:27 PM IST

Children prone to be affected by new variant omicron  corona vaccine for children between 12 to 15 years  expert opinion on covid vaccines for children  Vaccine for kids in India  ಮಕ್ಕಳಿಗೆ ಲಸಿಕೆ ಹಾಕುವ ಸರ್ಕಾರ ನಿರ್ಧಾರ ಒಳ್ಳೆಯದು  ಅಮೆರಿಕದಲ್ಲಿ ಮಕ್ಕಳಲ್ಲಿ ಕಾಣಿಸಿಕೊಂಡ ಒಮಿಕ್ರಾನ್​ ಭಾರತದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ  ಗುಜರಾತ್​ನ ಖ್ಯಾತ ವೈದ್ಯ ಪ್ರವೀಣ್​ ಗರ್ಗ್​
ಮಕ್ಕಳಿಗೆ ಲಸಿಕೆ ಹಾಕುವ ಸರ್ಕಾರ ನಿರ್ಧಾರ ಒಳ್ಳೆಯದು

ಅಹಮದಾಬಾದ್ (ಗುಜರಾತ್):ಕೊರೊನಾವೈರಸ್ ಪ್ರಕರಣಗಳು ಮತ್ತೆ ವಿಶ್ವಾದ್ಯಂತ ಉಲ್ಬಣಿಸಿವೆ. ದೇಶದಲ್ಲಿ ಸದ್ಯಕ್ಕೆ ಪರಿಸ್ಥಿತಿ ಸಾಕಷ್ಟು ನಿಯಂತ್ರಣದಲ್ಲಿದೆ. ಆದರೂ ಸಹ ರೂಪಾಂತರಿ ಪ್ರಕರಣಗಳು ಏರಿಕೆ ಕಾಣುತ್ತಿದೆ. ಹೊಸ ಸಮಸ್ಯೆಯನ್ನು ಎದುರಿಸಲು ನರೇಂದ್ರ ಮೋದಿ ಸರ್ಕಾರ 15-17 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್​ ಡೋಸ್​ ನೀಡುವ ನಿರ್ಧಾರ ತೆಗೆದುಕೊಂಡಿದೆ.


ಅಹಮದಾಬಾದ್‌ನ ಪ್ರಸಿದ್ಧ ವೈದ್ಯ ಡಾ.ಪ್ರವೀಣ್ ಗರ್ಗ್ ಸದ್ಯದ ಕೊರೊನಾ ಪರಿಸ್ಥಿತಿಯ ಬಗ್ಗೆ ಈಟಿವಿ ಭಾರತ್‌ ವರದಿಗಾರರ ಜೊತೆ ಈ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೊರೊನಾ ವೈರಸ್‌ನಿಂದ ಮಕ್ಕಳು ಕಡಿಮೆ ಪ್ರಭಾವಿತರಾಗಿದ್ದರೂ ಸಹ 15 ರಿಂದ 17 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಲು ಪ್ರಾರಂಭಿಸುವ ಸರ್ಕಾರದ ನಿರ್ಧಾರವನ್ನು ಡಾ. ಗರ್ಗ್ ಬೆಂಬಲಿಸಿದ್ದಾರೆ.ಕೊರೊನಾವೈರಸ್ ನಿರಂತರವಾಗಿ ತನ್ನ ರೂಪವನ್ನು ಬದಲಾಯಿಸುತ್ತಿದೆ. ಈಗ ಒಮಿಕ್ರಾನ್​ ರೂಪಾಂತರದೊಂದಿಗೆ ತನ್ನ ಬಾಹುಗಳನ್ನು ಹರಡುತ್ತಿದೆ. ಅಮೆರಿಕದಲ್ಲಿ ಸುಮಾರು 7.5 ಮಿಲಿಯನ್ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.

ಹಾಗಾಗಿ, ಮಕ್ಕಳಿಗೆ ಲಸಿಕೆ ಹಾಕುವುದು ಸರಿಯಾದ ಹೆಜ್ಜೆ. ಏಕೆಂದರೆ ವೈರಸ್‌ನ ಹೆಚ್ಚಿನ ರೂಪಾಂತರಗಳು ಇದ್ದಲ್ಲಿ ಅವರಿಗೆ ರಕ್ಷಣೆಯ ಅಗತ್ಯವಿರುತ್ತದೆ. ಮಕ್ಕಳ ಮೇಲೆ ಅದರ ನಡವಳಿಕೆ ಅಥವಾ ಪರಿಣಾಮವನ್ನು ತಿಳಿಯಲಾಗುವುದಿಲ್ಲ ಎಂದರು.

ಶಾಲಾ-ಕಾಲೇಜುಗಳ ಪುನರಾರಂಭದೊಂದಿಗೆ ವಿದ್ಯಾರ್ಥಿಗಳು ಪರಸ್ಪರ ಸಂಪರ್ಕಕ್ಕೆ ಬಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಲಸಿಕೆಗಳು ಪರಿಣಾಮಕಾರಿ ಮುಂಜಾಗ್ರತಾ ಕ್ರಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.

For All Latest Updates

ABOUT THE AUTHOR

...view details