ಕರ್ನಾಟಕ

karnataka

ETV Bharat / bharat

ರೈಲಿಗೆ ಸಿಲುಕಿ ಸಾಯುವ ಆನೆಗಳ ರಕ್ಷಣೆಗೆ ಹೊಸ ಪ್ಲಾನ್​: ಹಗಲು-ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್​

2002 ರಿಂದ ಇಲ್ಲಿಯವರೆಗೆ 19 ವರ್ಷಗಳ ಅವಧಿಯಲ್ಲಿ ಮಧುಕ್ಕರೈ-ಪಾಲಕ್ಕಾಡ್ ಮಾರ್ಗದಲ್ಲಿ ರೈಲಿಗೆ ಸಿಲುಕಿ 29 ಆನೆಗಳು ಸಾವಿಗೀಡಾಗಿವೆ. ಕಳೆದ ವರ್ಷವಷ್ಟೇ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ನವಕ್ಕರೈ ಬಳಿ ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಒಂದು ಗರ್ಭಿಣಿ ಆನೆ ಸೇರಿದಂತೆ ಮೂರು ಆನೆಗಳು ದಾರುಣವಾಗಿ ಸಾವಿಗೀಡಾಗಿದ್ದವು. ಇದನ್ನೆಲ್ಲಾ ನಿಯಂತ್ರಣ ಮಾಡಲು ತಮಿಳುನಾಡು ಸರ್ಕಾರ ಹೊಸ ಯೋಜನೆ ರೂಪಿಸಿದೆ.

ರೈಲಿಗೆ ಸಿಲುಕಿ ಸಾಯುವ ಆನೆಗಳ ರಕ್ಷಣೆಗೆ ಹೊಸ ಪ್ಲಾನ್​: ಹಗಲು- ರಾತ್ರಿ ಎಚ್ಚರವಹಿಸುತ್ತಿದ್ದಾರೆ ಸಿಬ್ಬಂದಿ !
ರೈಲಿಗೆ ಸಿಲುಕಿ ಸಾಯುವ ಆನೆಗಳ ರಕ್ಷಣೆಗೆ ಹೊಸ ಪ್ಲಾನ್​: ಹಗಲು- ರಾತ್ರಿ ಎಚ್ಚರವಹಿಸುತ್ತಿದ್ದಾರೆ ಸಿಬ್ಬಂದಿ !

By

Published : May 4, 2022, 9:07 PM IST

Updated : May 4, 2022, 9:52 PM IST

ಕೊಯಮತ್ತೂರು: ಪಶ್ಚಿಮ ಘಟ್ಟಗಳ ಪಾಲಕ್ಕಾಡ್ ಮೂಲಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವೆ ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳು ಸಂಚರಿಸುತ್ತವೆ. ಕೊಯಮತ್ತೂರಿನ ಮದುಕ್ಕರೈನಿಂದ ಕೇರಳದ ಪಾಲಕ್ಕಾಡ್‌ವರೆಗೆ ಸುಮಾರು 24 ಕಿಲೋಮೀಟರ್‌ಗಳಷ್ಟು ರೈಲ್ವೆ ಹಳಿಗಳು ಅರಣ್ಯ ಪ್ರದೇಶದ ಸಮೀಪದಲ್ಲಿವೆ. ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಹೊಸ ಪ್ಲಾನ್​ ರೂಪಿಸಿದೆ.

2002 ರಿಂದ ಇಲ್ಲಿಯವರೆಗೆ 19 ವರ್ಷಗಳ ಅವಧಿಯಲ್ಲಿ ಮಧುಕ್ಕರೈ-ಪಾಲಕ್ಕಾಡ್ ಮಾರ್ಗದಲ್ಲಿ ರೈಲಿಗೆ ಸಿಲುಕಿ 29 ಆನೆಗಳು ಸಾವಿಗೀಡಾಗಿವೆ. ಕಳೆದ ವರ್ಷವಷ್ಟೇ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ನವಕ್ಕರೈ ಬಳಿ ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಒಂದು ಗರ್ಭಿಣಿ ಆನೆ ಸೇರಿದಂತೆ ಮೂರು ಆನೆಗಳು ದಾರುಣ ಘಟನೆಯೊಂದರಲ್ಲಿ ಸಾವಿಗೀಡಾಗಿದ್ದವು.

ಲೋಕೋ ಪೈಲಟ್​ಗಳ ಮೇಲೆ ಆರೋಪ:ಈ ಘಟನೆಯ ನಂತರ ಅರಣ್ಯ ಇಲಾಖೆಯು ರೈಲು ಹಳಿಗಳನ್ನು ದಾಟುವ ಕಾಡಾನೆಗಳ ಮೇಲೆ ನಿಗಾ ಇರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆ ಮರಪಾಲಂ ಹಾಗೂ ಕಂಜಿಕೋಡ್‌ ನ ಎ ಮತ್ತು ಬಿ ಲೈನ್ ಟ್ರ್ಯಾಕ್‌ಗಳಲ್ಲಿ ಲೋಕೋ ಪೈಲಟ್‌ಗಳು ವೇಗದ ಮಿತಿಯನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಮದ್ರಾಸ್ ಹೈಕೋರ್ಟ್ ಆನೆಗಳ ಸಾವಿನ ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.

ಆನೆಗಳು ರೈಲಿಗೆ ಸಿಲುಕಿ ಸಾವಿಗೀಡಾಗುವುದನ್ನು ತಪ್ಪಿಸಲು ಹಳಿ ದಾಟುವ ಆನೆಗಳ ಮೇಲೆ ನಿಗಾ ವಹಿಸಿ ಅರಣ್ಯಕ್ಕೆ ಹಿಂದಿರುಗಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಳ್ಳಬೇಟೆ ತಡೆ ವೀಕ್ಷಕರು ತೊಡಗಿಸಿಕೊಂಡಿದ್ದಾರೆ. ಏಳು ಕಳ್ಳಬೇಟೆ ತಡೆ ವೀಕ್ಷಕರು ಎರಡು ಗುಂಪುಗಳಾಗಿ ಎ ಮತ್ತು ಬಿ ಲೈನ್ ಟ್ರ್ಯಾಕ್‌ಗಳಲ್ಲಿ ಆನೆಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ರೈಲಿಗೆ ಸಿಲುಕಿ ಸಾಯುವ ಆನೆಗಳ ರಕ್ಷಣೆಗೆ ಹೊಸ ಪ್ಲಾನ್​: ಹಗಲು-ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್​

ಆನೆಗಳು ರೈಲು ಹಳಿ ಬಳಿ ಬಂದರೆ ಅವುಗಳನ್ನು ಕಾಡಿಗೆ ಮರಳುವಂತೆ ಮಾಡುತ್ತೇವೆ ಎನ್ನುತ್ತಾರೆ ಅರಣ್ಯ ರಕ್ಷಕ ಕರುಣಾನಿಧಿ. ಒಂದು ತಂಡ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಮತ್ತು ಇನ್ನೊಂದು ತಂಡ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಿಗಾ ವಹಿಸಲಿದೆ. ಅರಣ್ಯ ಪ್ರದೇಶದ ಸಮೀಪವಿರುವ ರೈಲ್ವೆ ಹಳಿಗಳಲ್ಲಿ ಗರಿಷ್ಠ 12 ಗಂಟೆಗಳಲ್ಲಿ ಮೂರು ಬಾರಿ ಗಸ್ತು ತಿರುಗಲಾಗುತ್ತದೆ ಎಂದು ವಿವರಿಸಿದ್ದಾರೆ.

ಕೆಲಸ ಹೇಗೆ?: ಆನೆಗಳು ಹಳಿಗಳನ್ನು ದಾಟುವುದನ್ನು ಕಂಡ ನಂತರ ಈ ಬಗ್ಗೆ ಬೇಟೆ ತಡೆ ವೀಕ್ಷಕರು ವಾಳಯಾರ್ ರೈಲ್ವೆ ನಿಲ್ದಾಣಕ್ಕೆ ಮಾಹಿತಿ ನೀಡುತ್ತಾರೆ ಮತ್ತು ಆನೆಯ ಬಗ್ಗೆ ಲೋಕೋ ಪೈಲಟ್‌ಗಳಿಗೆ ಎಚ್ಚರಿಕೆ ರವಾನೆಯಾಗುತ್ತದೆ. ಇದರಿಂದ ಆನೆಗಳು ಹಳಿಗಳಲ್ಲಿ ಸಾಯುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ ಕರುಣಾನಿಧಿ.

ನಾನಾ ಸಂಕಷ್ಟಗಳ ನಡುವೆಯೂ ಹಲವು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಕಳ್ಳಬೇಟೆ ತಡೆ ವೀಕ್ಷಕರಾದ ಕರುಪ್ಪುಸಾಮಿ. ಕಳೆದ ವರ್ಷ ನವಕರೈ ಬಳಿ ನಡೆದ ದುರಂತ ಘಟನೆ ನಮ್ಮನ್ನು ತೀವ್ರವಾಗಿ ಕಾಡಿತು. ಆ ಬಳಿಕ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಿದ್ದೇವೆ. ನಾವು 24 ಗಂಟೆಗಳ ಕಾಲ ರೈಲ್ವೆ ಹಳಿಗಳಲ್ಲಿ ನಿಗಾ ಇಡುತ್ತಿದ್ದೇವೆ ಎಂದಿದ್ದಾರೆ.

Last Updated : May 4, 2022, 9:52 PM IST

For All Latest Updates

ABOUT THE AUTHOR

...view details