ಚೆನ್ನೈ:ಇಲ್ಲಿಂದದುಬೈಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ವ್ಯಕ್ತಿ ನೀಡಿದ ಕಾರಣ ಮಾತ್ರ ಅಚ್ಚರಿ ಮೂಡಿಸಿದೆ. ಆತನ ತಂಗಿ ಮತ್ತು ಆಕೆಯ ಪತಿ ದುಬೈಗೆ ತೆರಳಬೇಕಿತ್ತು. ಅವರ ಕಿತ್ತಾಟದಿಂದ ವಿಮಾನ ತಪ್ಪುವ ಹಿನ್ನೆಲೆಯಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ.
ಚೆನ್ನೈನಿಂದ 7.20 ಕ್ಕೆ ಹೊರಡಬೇಕಿದ್ದ ಇಂಡಿಗೋ ವಿಮಾನ ಹಾರಾಟ ನಡೆಸಲು ಕೆಲವೇ ನಿಮಿಷಗಳ ಮುಂಚೆ ಆರೋಪಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ವಿಮಾನದಲ್ಲಿ ಬಾಂಬ್ ಇದೆ ಎಂದು ಹೇಳಿದ್ದ. ರ್ಷಣ ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಇಡೀ ವಿಮಾನವನ್ನು ಶೋಧ ನಡೆಸಲಾಯಿತು.