ಕಛ್/ಹೈದರಾಬಾದ್:ಗುಜರಾತ್ನಲ್ಲಿ ಎಟಿಎಸ್ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆ ನಡೆಸಿ ಮತ್ತೊಂದು ಭರ್ಜರಿ ಬೇಟೆಯಾಡಿದೆ. ಕಛ್ ಕರಾವಳಿಯಲ್ಲಿ ಪಾಕಿಸ್ತಾನದಿಂದ ಸಾಗಿಸಲಾಗುತ್ತಿದ್ದ 50 ಕೆಜಿ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ. ಇನ್ನೊಂದೆಡೆ ಹೈದರಾಬಾದ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಪಾಕಿಸ್ತಾನದಿಂದ ಅಕ್ರಮವಾಗಿ ಗುಜರಾತ್ನ ಕಛ್ ಬಂದರಿನಿಂದ 50 ಕೆಜಿ ಕೆಜಿ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಟಿಎಸ್ ಮತ್ತು ಭಾರತೀಯ ಕೋಸ್ಟ್ ಗಾರ್ಡ್ 350 ಕೋಟಿ ರೂಪಾಯಿ ಮೌಲ್ಯದ ಅಫೀಮುಅನ್ನು ಜಪ್ತಿ ಮಾಡಿದೆ. ಜೊತೆಗೆ ಪಾಕಿಸ್ತಾನದ 6 ಪ್ರಜೆಗಳನ್ನು ಬಂಧಿಸಿ, ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ತಿಂಗಳು ಸೆಪ್ಟೆಂಬರ್ 14 ರಂದು ಅರಬ್ಬಿ ಸಮುದ್ರದಲ್ಲಿ ಭಾರತೀಯ ಜಲಪ್ರದೇಶದಲ್ಲಿ 200 ಕೋಟಿ ಮೌಲ್ಯದ 40 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು.