ಕರ್ನಾಟಕ

karnataka

ETV Bharat / bharat

ದಪ್ಪನೆಯ ಕೂದಲು, ಹೊಳೆಯುವ ಚರ್ಮ ಬೇಕೇ?: ಇದಕ್ಕೆ ಮಲ್ಟಿವಿಟಮಿನ್​ಗಳು ಸಹಕಾರಿ

ದಪ್ಪ, ಹೊಳೆಯುವ ಕೂದಲು ಮತ್ತು ಚೆಂದದ ಹೊಳೆಯುವ ಚರ್ಮವನ್ನು ಯಾರೂ ಬೇಡ ಎನ್ನಲಾರರು. ಇದನ್ನು ಹೊಂದುವ ಸರಳ ಮಾರ್ಗವೆಂದರೆ ಆರೋಗ್ಯಕರವಾದ ಆಹಾರ ಸೇವನೆ. ನಾವು ತಿನ್ನುವ ಆಹಾರ ನಮ್ಮ ಕೂದಲು ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿರಲಿ.

By

Published : Mar 9, 2021, 6:55 PM IST

ಮಲ್ಟಿವಿಟಾಮಿನ್​ಗಳು
ಮಲ್ಟಿವಿಟಾಮಿನ್​ಗಳು

ವಿಟಮಿನ್ ಇ ಸಾಮಾನ್ಯವಾಗಿ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೇದು. ವಿಟಮಿನ್ ಇ ಅಂಶವಿರುವ ಯಾವುದೇ ಪದಾರ್ಥಗಳು, ಕ್ರೀಂಗಳು, ಎಣ್ಣೆಯನ್ನು ಚರ್ಮಕ್ಕೆ ಹಚ್ಚಿದಾಗ ಅದು ಉರಿಯೂತವನ್ನು ಕಡಿಮೆ ಮಾಡುತ್ತದೆ. ನಾವು ಎಷ್ಟು ತಿನ್ನುತ್ತೇವೆ ಎನ್ನುವುದಕ್ಕಿಂತ ಏನನ್ನು ತಿನ್ನುತ್ತೇವೆ ಎಂಬುದು ಮುಖ್ಯ. ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿ ನಮ್ಮ ಚರ್ಮಕ್ಕೆ ಮತ್ತು ಕೂದಲಿಗೆ ಬೇಕಾದ ಪೋಷಕಾಂಶ ಇರುವುದು ಮುಖ್ಯ.

ನಮ್ಮ ಆಹಾರದಿಂದ ನಾವು ಕೆಲವು ಟಾನಿಕ್‌, ಜೀವಸತ್ವಗಳು, ಖನಿಜಗಳು ಅಗತ್ಯವಾದ ಅಮೈನೋ ಆಮ್ಲಗಳು, ಪ್ರೋಟೀನ್​​, ಕಾರ್ಬೋಹೈಡ್ರೇಟ್‌ ಇತ್ಯಾದಿಗಳನ್ನು ಪಡೆಯಬೇಕು. ನಾವು ತಿನ್ನುವಾಗ ಆಹಾರವನ್ನು ಶಕ್ತಿಯಾಗಿ ವಿಭಜಿಸಲಾಗುತ್ತದೆ ಮತ್ತು ಅದೇ ಶಕ್ತಿಯನ್ನು ಕೂದಲು ಕಿರುಚೀಲಗಳಿಗೆ ಸಹ ಕಳುಹಿಸಲಾಗುತ್ತದೆ. ಕೂದಲಿನ ಕೋಶವು ಕೂದಲಿನ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಕೋಶಕವನ್ನು ಚೆನ್ನಾಗಿ ನೋಡಿಕೊಂಡರೆ, ಬೆಳೆಯುವ ಕೂದಲು ದಪ್ಪ ಮತ್ತು ಕೋಮಲವಾಗಿರುತ್ತದೆ.

ಹೆಚ್ಚಿನ ಒತ್ತಡದ ಜೀವನ, ಧೂಳು ಮತ್ತು ಮಾಲಿನ್ಯ, ಆಹಾರ ಪದ್ಧ, ಜೀವನಶೈಲಿ, ರಾಸಾಯನಿಕ ಉತ್ಪನ್ನಗಳು, ಸ್ಟೈಲಿಂಗ್ ಇತ್ಯಾದಿಗಳು ನೆತ್ತಿಯ ಹಾನಿಗೆ ಕಾರಣವಾಗುತ್ತವೆ. ಹಾನಿ ಉಂಟಾದಾಗಲೆಲ್ಲಾ ದೊಡ್ಡ ಆಘಾತ ಉಂಟಾಗುವುದಂತೂ ಗ್ಯಾರಂಟಿ. ಇದು ನಮ್ಮ ಕೂದಲುಗಳ ಹಾನಿಗೆ ಕಾರಣವಾಗುತ್ತದೆ. ಆದಾಗ್ಯೂ ಕೆಲವೊಮ್ಮೆ ಅನಾರೋಗ್ಯಕರ ಆಹಾರದ ಪರಿಣಾಮವಾಗಿ ಕೂದಲುಗಳ ಹುಟ್ಟುವ ಪ್ರಕ್ರಿಯೆಯೂ ಉತ್ತಮವಾಗಿರುವುದಿಲ್ಲ. ಕೂದಲು ಕೋಶಕವು ಆಂತರಿಕವಾಗಿ ಪಡೆಯುತ್ತಿರುವ ಆಹಾರವು ಗುರುತು ಹಿಡಿಯದ ಕಾರಣ, ಅಗತ್ಯವಾದ ಪೋಷಕಾಂಶಗಳ ಕೊರತೆ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದ್ದರಿಂದ ಅಗತ್ಯವಿರುವ ವಿಟಮಿನ್ ಬಿ ಕಾಂಪ್ಲೆಕ್ಸ್, ಬಯೋಟಿನ್, ಖನಿಜಗಳು ಮತ್ತು ಇತರ ಜೀವಸತ್ವಗಳನ್ನು ಒಳಗೊಂಡ ಮಾತ್ರೆಗಳನ್ನು ಸೇವಿಸಲು ನೀಡಲಾಗುತ್ತದೆ.

ನೆತ್ತಿಯಿಂದ ಅಥವಾ ಚರ್ಮದಿಂದ ಸರಿಯಾಗಿ ಹೀರಲ್ಪಡದ ಕಾರಣ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವ ಉತ್ಪನ್ನಗಳ ಅನ್ವಯವು ಸಾಕಾಗುವುದಿಲ್ಲ. ಮಲ್ಟಿವಿಟಾಮಿನ್‌ಗಳನ್ನು ಮೌಖಿಕವಾಗಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರಿಂದ ಅದು ವ್ಯವಸ್ಥೆಯಲ್ಲಿ ಹೀರಲ್ಪಡುತ್ತದೆ. ಬಳಿಕ ರಕ್ತದ ಮೂಲಕ ಕಿರುಚೀಲಗಳು ಮತ್ತು ಇತರ ಭಾಗಗಳಿಗೆ ತಲುಪುತ್ತದೆ.

ಮಲ್ಟಿವಿಟಾಮಿನ್​ಗಳು ಸಹಾಯಕಾರಿ, ಮೇಲಾಗಿ ಭಾರತೀಯರಿಗೆ ಹೆಚ್ಚು ಸಹಾಯಕಾರಿಯಾಗಿವೆ. ಏಕೆಂದರೆ ಅವುಗಳನ್ನು ದೇಹದ ಅವಶ್ಯಕತೆಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತದೆ. ಒಬ್ಬರು ತಮ್ಮದೇ ಆದ ಮಲ್ಟಿವಿಟಾಮಿನ್‌ಗಳನ್ನು ಹೊಂದಬಹುದು, ಆದರೆ ಕೆಲವರು ಔಷಧಿಯನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಒಮ್ಮೆ ಸಂಪರ್ಕಿಸುವುದು ಉತ್ತಮ. ನಿಮ್ಮ ದೇಹದಲ್ಲಿ ಯಾವ ವಿಟಮಿನ್​ ಕಡಿಮೆ ಇದೆ, ಎಷ್ಟು ಪ್ರಮಾಣದಲ್ಲಿ ಇರಬೇಕು ಎಂದು ವೈದ್ಯರು ನಿರ್ಧರಿಸಿ, ಇದಕ್ಕೆ ತಕ್ಕ ಔಷಧಿ ನೀಡುತ್ತಾರೆ. ಅಲ್ಲದೇ ಮಲ್ಟಿವಿಟಮಿನ್​ಗಳನ್ನು ಅತೀಯಾಗಿ ತೆಗೆದುಕೊಳ್ಳುವುದು ಕೂಡ ಕೂದಲು ಉದುರುವುದು ಮತ್ತು ಇತರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂಬುದನ್ನು ಸಹ ನೆನಪಿನಲ್ಲಿಡಬೇಕು.

ಕ್ರೀಮ್‌ಗಳು, ಶ್ಯಾಂಪೂಗಳು, ಕಂಡಿಷನರ್‌ಗಳು, ಕೂದಲಿನ ಎಣ್ಣೆಗಳು ಎಲ್ಲವೂ ಸ್ವಲ್ಪ ಮಟ್ಟಿನ ಕೆಲವು ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ ಅದರ ಅಗತ್ಯತೆಗಳು ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವುದಿಲ್ಲ. ಸಮತೋಲಿತ ಆಹಾರವನ್ನು ಸೇವಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಆರೋಗ್ಯಕರ ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು. ನಮ್ಮ ಭಾರತೀಯ ಆಹಾರ ಪದ್ಧತಿ ಅದು ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಗಿರಲಿ, ಅದು ಸಮತೋಲಿತವಾಗಿರಬೇಕು. ಏಕೆಂದರೆ ನಾವು ಸೇವಿಸುವ ಆಹಾರವೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಕೂದಲಿನ ಪೋಷಣೆಗೆ ಒಂದು ಉತ್ತಮವಾದ ವಿಧಾನವೆಂದರೆ, ಹಾಲಿನ ಸಹಾಯದಿಂದ ಕೂದಲನ್ನು ತೊಳೆಯುವುದು. ಹಾಲಿನಿಂದ ಹತ್ತು ಅಥವಾ ಹದಿನೈದು ನಿಮಿಷಗಳ ಕಾಲ ಕೂದಲನ್ನು ನೆನೆಸಿ ತದನಂತರದಲ್ಲಿ ಕಂಡೀಷನರ್ ಅನ್ನು ಹಾಕಿ ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ. ನಂತರದಲ್ಲಿ ನಿಮ್ಮ ಕೂದಲಿನಲ್ಲಿ ಆಗುವ ಬದಲಾವಣೆಯನ್ನು ನೀವು ಗಮನಿಸಬಹುದು. ಇದು ನಿಮ್ಮ ಕೂದಲನ್ನು ಉತ್ತಮವಾಗಿರುವಂತೆ ಮಾಡುವುದಲ್ಲದೆ ಮೆತ್ತನೆಯ ಅನುಭವ ನೀಡುತ್ತದೆ.

ABOUT THE AUTHOR

...view details