ಕರ್ನಾಟಕ

karnataka

By

Published : Dec 23, 2020, 3:41 PM IST

ETV Bharat / bharat

ಬಾಡಿಗೆಗೆ ಬಂದ ವ್ಯಕ್ತಿ ಬೆಳೆಸಿದ ಸಂಬಂಧ: ಮದ್ವೆಯಾದ ನಂತರ ಮತಾಂತರದ ವರಸೆ

ದೆಹಲಿ ನಗರದಲ್ಲಿ ಬಾಡಿಗೆಗೆಂದು ಮನೆ ಪಡೆದುಕೊಂಡ ವ್ಯಕ್ತಿಯೋರ್ವ, ಆ ಮಹಿಳೆಯನ್ನೇ ಪ್ರೀತಿಸುವುದಾಗಿ ನಂಬಿಸಿದ್ದಾನೆ. ಬಳಿಕ, ದೈಹಿಕ ಸಂಪರ್ಕ ಬೆಳೆಸಿ ತದನಂತರ ಮದುವೆಯಾಗಿದ್ದಾನೆ. ಇದಾದ ಮೇಲೆ ಮತಾಂತರಗೊಳ್ಳುವಂತೆ ಹಿಂಸಿಸುತ್ತಿದ್ದಾನೆ ಎಂದು ಮಹಿಳೆಯೋರ್ವಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

File Photo
ಸಾಂದರ್ಭಿಕ ಚಿತ್ರ

ನವದೆಹಲಿ: ತನ್ನ ಮನೆಗೆ ಬಾಡಿಗೆದಾರನಾಗಿ ಬಂದ ವ್ಯಕ್ತಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ತದನಂತರ ಮದುವೆ ಮಾಡಿಕೊಂಡು ಇದೀಗ ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾನೆ ಎಂದು ನೊಂದ ಯುವತಿ ಸರಿತಾ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ದೂರಿನಲ್ಲಿ ಮಹಿಳೆ ಹೇಳಿದ್ದೇನು?

ದೆಹಲಿ ನಗರದಲ್ಲಿ ವಾಸವಾಗಿದ್ದ ತನ್ನ ಮನೆಗೆ ಸಾಹಿಬ್ ಅಲಿ (20) ಎಂಬ ವ್ಯಕ್ತಿ ಬಾಡಿಗೆದಾರನಾಗಿ ಸೇರಿಕೊಂಡಿದ್ದ. ಆದರೆ ಆತ ತನ್ನನ್ನು ರಾಹುಲ್​​ ಎಂದು ಪರಿಚಯಿಸಿಕೊಂಡಿದ್ದಾನೆ. ದಿನಕಳೆದಂತೆ ತನ್ನ ಜೊತೆ ಸ್ನೇಹ ಬೆಳೆಸಿದ್ದು, ಕೆಲ ದಿನಗಳ ನಂತರ ಪ್ರೀತಿಸುವುದಾಗಿ ನಂಬಿಸಿದ್ದಾನೆ. ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಇದಾದ ನಂತರ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ತನ್ನ ನೈಜ ಹೆಸರನ್ನು ಮುಚ್ಚಿಟ್ಟಿದ್ದ ಯುವಕ, ಆತನ ತಂದೆ, ತಾಯಿ, ಸಹೋದರ, ಸಹೋದರಿಗೆ ಪರಿಚಯಿಸಿ, ಕೊಟ್ಟ ಮಾತಿನಂತೆ ಮದುವೆಯಾಗಿದ್ದಾನೆ.

ಮದುವೆಯಾದ ಕೆಲ ತಿಂಗಳ ಬಳಿಕ ನೈಜತೆ ತೋರಿದ ಸಾಹಿಬ್​​, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹಿಂಸಿಸುತ್ತಿದ್ದ. ಸಾಹಿಬ್​ ಅಲಿ ಮನೆಗೆ ತಾನು ಬಂದಾಗಲೂ ಸಹ ಆತನ ಕುಟುಂಬಸ್ಥರು ತನಗೆ ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಸಾಹಿಬ್ ಅಲಿ ಅಲಿಯಾಸ್ ರಾಹುಲ್ ಅವರ ತಂದೆ ಹಜಿಸುನ್ನಾಲಾ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇಲೆ ಸರಿತಾ ವಿಹಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ), 366 (ಅಪಹರಣ ಅಥವಾ ಮಹಿಳೆಯನ್ನು ಮದುವೆಯಾಗುವಂತೆ ಒತ್ತಾಯಿಸುವುದು), 354 (ಮಹಿಳೆಯ ಮೇಲೆ ಹಲ್ಲೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ABOUT THE AUTHOR

...view details