ಕರ್ನಾಟಕ

karnataka

ETV Bharat / bharat

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ

ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 55-65 ಕಿಮೀ ವೇಗದಲ್ಲಿ ಮತ್ತು ಆಂತರಿಕ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಭಾರಿ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಐಎಂಡಿ ಮುನ್ಸೂಚನೆ ನೀಡಿದೆ.

Deep Depression Crosses Digh
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

By

Published : Aug 20, 2022, 9:09 AM IST

ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಈ ಬಗ್ಗೆ ಭಾರತ ಹವಾಮಾನ ಇಲಾಖೆ ಟ್ವೀಟ್​ ಮಾಡಿದ್ದು, ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಬಂಗಾಳ, ಉತ್ತರ ಒಡಿಶಾ ಮತ್ತು ಜಾರ್ಖಂಡ್‌ನಾದ್ಯಂತ ಉತ್ತರ ಛತ್ತೀಸ್‌ಗಢದ ಕಡೆಗೆ ಚಂಡಮಾರುತ ಚಲಿಸಲಿದೆ ಎಂದು ಹೇಳಿದೆ. ನಂತರ, ಆಳವಾದ ವಾಯು ಭಾರ ಕುಸಿತ ಕ್ರಮೇಣ ದುರ್ಬಲಗೊಳ್ಳುತ್ತದೆ ಎಂದು ಹೇಳಿದೆ.

ಈ ವ್ಯವಸ್ಥೆಯು ವಾಯುವ್ಯ ಬಂಗಾಳ ಕೊಲ್ಲಿಯ ಮೇಲೆ, ಒಡಿಶಾದ ಬಾಲಸೋರ್‌ನಿಂದ ಸುಮಾರು 200 ಕಿಮೀ ಪೂರ್ವ - ಆಗ್ನೇಯಕ್ಕೆ ಮತ್ತು ಮಧ್ಯಾಹ್ನದ ನಂತರ ದಿಘಾದಿಂದ 140 ಕಿಮೀ ಪೂರ್ವ-ಆಗ್ನೇಯದಲ್ಲಿ ವಾಯುಭಾರ ಸಕ್ರಿಯವಾಗಿತ್ತು. ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 55-65 ಕಿಮೀ ವೇಗದಲ್ಲಿ ಮತ್ತು ಅನೇಕ ಒಳ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಭಾರಿ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಐಎಂಡಿ ಮುನ್ಸೂಚನೆ ನೀಡಿದೆ.

ಏತನ್ಮಧ್ಯೆ, ಉತ್ತರ ಬಾಲಸೋರ್, ಮಯೂರ್‌ಭಂಜ್ ಮತ್ತು ಭದ್ರಕ್ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪಿಕೆ ಜೆನಾ ಹೇಳಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎರಡು NDRF ಮತ್ತು ODRAF ತಂಡಗಳನ್ನು ಬಾಲಸೋರ್‌ಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ

ಇದನ್ನು ಓದಿ:ಮಾತಾ ವೈಷ್ಣೋದೇವಿ ದೇಗುಲ ಬಳಿ ಹಠಾತ್​ ಮಳೆಗೆ ಭಾರೀ ಪ್ರವಾಹ .. ವಿಡಿಯೋ ನೋಡಿ

ABOUT THE AUTHOR

...view details