ಜೌನ್‌ಪುರ (ಉತ್ತರ ಪ್ರದೇಶ):ಜಿಲ್ಲೆಯ ಮಡಿಯಾಹುನ್ ಕೊತ್ವಾಲಿ ಪ್ರದೇಶದ ಜೈರಾಮ್‌ಪುರ ಗ್ರಾಮದಲ್ಲಿ ಪತಿಯು ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಲೆ ಮಾಡಿದ ಬಳಿಕ, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಒಂದೇ ಕುಟುಂಬದ ಐವರು ಸಾವಿಗೀಡಾಗಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
ಮಾಹಿತಿ ತಿಳಿದ ಪೊಲೀಸರು ಐವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗ್ರಾಮೀಣ ಎಸ್ಪಿ ಶೈಲೇಂದ್ರ ಕುಮಾರ್ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಪತಿ ನಾಗೇಶ್ ವಿಶ್ವಕರ್ಮ ತನ್ನ ಪತ್ನಿ ರಾಧಿಕಾ, ಮಗಳು ನಿಕೇತಾ, ಮಗ ಆದರ್ಶ್ ಮತ್ತು ಮೂರು ವರ್ಷದ ಅಮಾಯಕ ಮಗಳು ಆಯುಷಿಯನ್ನು ಕೊಲೆ ಮಾಡಿದ್ದಾನೆ ಎಂದು ಗ್ರಾಮಾಂತರ ಎಸ್ಪಿ ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದರು.
ಪೊಲೀಸರು ಹೇಳಿದ್ದೇನು?:ಈ ಬಗ್ಗೆ ನಾಗೇಶ್ ಅವರ ಸಂಬಂಧಿ ಡಯಲ್ 112ಗೆ ಮಾಹಿತಿ ನೀಡಿದ್ದಾರೆ. ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಐವರ ಮೃತದೇಹಗಳು ಬಿದ್ದಿದ್ದವು. ಪತ್ನಿಯನ್ನು ಭಾರಿ ಆಯುಧದಿಂದ ಹತ್ಯೆ ಮಾಡಲಾಗಿದೆ. ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಇದಾದ ಬಳಿಕ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗೇಶ್ ವಿಶ್ವಕರ್ಮ ಈ ಹಿಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ಅವಧಿಯಲ್ಲಿ ನಾಗೇಶ್ ಮುಂಬೈನಿಂದ ಮರಳಿದ್ದರು. ಎರಡು ದಿನಗಳ ಹಿಂದೆ ಅವರು ಜಮೀನು ಮಾರಿ ಸ್ವಲ್ಪ ಹಣವನ್ನು ಸ್ವೀಪರ್‌ಗೆ ನೀಡಿದ್ದರು. ಈ ವಿಚಾರವಾಗಿ ಪತಿ ಹಾಗೂ ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಕೋಪದಲ್ಲಿದ್ದ ಗಂಡ, ಹೆಂಡತಿ ರಾಧಿಕಾಳ ತಲೆಗೆ ಭಾರವಾದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಇದಾದ ನಂತರ ಪತಿ ನಾಗೇಶ್ ಮಗಳು ನಿಕಿತಾ, ಆಯುಷಿ ಮತ್ತು ಮಗ ಆದರ್ಶ್ ಅವರ ಕತ್ತು ಹಿಸುಕಿ ಸಾಯಿಸಿದ್ದಾನೆ. ಇದಾದ ನಂತರ ಆತನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಗ್ರಾಮಾಂತರ ಎಸ್ಪಿ ಡಾ.ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಡೆತ್ ನೋಟ್ ಪತ್ತೆ:ಸೂಸೈಡ್ ನೋಟ್ ಪತ್ತೆಯಾಗಿದೆ. ಆತ್ಮಹತ್ಯೆ ಪತ್ರದಿಂದ ಕಾರಣ ತಿಳಿದು ಬಂದಿದೆ. ಮೃತ ನಾಗೇಶ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಅವಧಿಯಲ್ಲಿ ಅವರು ಮನೆಗೆ ಮರಳಿದರು. ಇಲ್ಲಿ ಏಳು ಲಕ್ಷ ರೂಪಾಯಿಗೆ ಜಮೀನು ಮಾರಿದರು. ಇದಾದ ನಂತರ, ಜಲಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವ ಸಿಂಗ್‌ಗೆ ಶಾಲೆಯಲ್ಲಿ ಪ್ಯೂನ್ ಹುದ್ದೆಗೆ ಏಳು ಲಕ್ಷ ರೂಪಾಯಿ ನೀಡಲಾಯಿತು. ನೆರೆಹೊರೆಯ ಭಾನು ವಿಶ್ವಕರ್ಮ ಅವರು ಮಧ್ಯಸ್ಥಿಕೆ ವಹಿಸಿದ್ದರು.
ಹಲವು ಬಾರಿ ಕೇಳಿದರೂ ನಾಗೇಶನಿಗೆ ಕೆಲಸ ಸಿಕ್ಕಿಲ್ಲ, ಹಣ ವಾಪಸ್ ಬರುತ್ತಿಲ್ಲ. ಇದೇ ವಿಚಾರಕ್ಕೆ ಪತಿ, ಪತ್ನಿಯರ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತ ನಾಗೇಶ್ ಇಂತಹ ಅಪಾಯಕಾರಿ ಹೆಜ್ಜೆ ಇಟ್ಟಿದ್ದಾರೆ. ಈ ಬಗ್ಗೆ ನಾಗೇಶ್ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದರೊಂದಿಗೆ ತನ್ನ ಪತಿ ಮತ್ತು ಮಕ್ಕಳ ಸಾವಿಗೆ ಆತನೇ ಹೊಣೆಯಾಗಿದ್ದಾನೆ ಎಂದು ಎಸ್ಪಿ ಡಾ.ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದರು. ಸಹೋದರ ತ್ರಿಭುವನ್ ವಿಶ್ವಕರ್ಮ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಪತ್ನಿ, ಪ್ರಿಯಕರನ ಕೊಂದ ಪತಿ