ಕರ್ನಾಟಕ

karnataka

ಕೋವ್ಯಾಕ್ಸಿನ್‌ ತೆರೆದ ಬಾಟಲಲ್ಲಿ 2 ರಿಂದ 8 ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲಿಯೂ 28 ದಿನಗಳವರೆಗೆ ಸ್ಥಿರ..!

ಕೋವ್ಯಾಕ್ಸಿನ್‌ಗೆ ಇದೀಗ ಕೋಲ್ಡ್‌ ಸ್ಟೋರೆಜ್‌ನ ಅವಶ್ಯಕತೆ ಇಲ್ಲ ಎಂದು ಭಾರತ್‌ ಬಯೋಟೆಕ್‌ ಹೇಳಿದ್ದು, ಲಸಿಕೆ ತೆರೆದ ಬಾಟಲ್​​ನಲ್ಲಿ 2 ರಿಂದ 8 ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲಿಯೂ 28 ದಿನಗಳವರೆಗೆ ಸ್ಥಿರವಾಗಿರುತ್ತದೆ ಎಂದು ಹೇಳಿದೆ.

By

Published : Dec 20, 2021, 8:06 PM IST

Published : Dec 20, 2021, 8:06 PM IST

COVAXIN Open Vial is stable at 2 to 8C for 28 days
ಕೋವ್ಯಾಕ್ಸಿನ್‌ ತೆರೆದ ಬಾಟಲಲ್ಲಿ 2 ರಿಂದ 8 ಡಿಗ್ರಿಸೆಲ್ಸಿಯಸ್‌ ವಾತಾವರಣದಲ್ಲಿಯೂ 28 ದಿನಗಳವರೆಗೆ ಸ್ಥಿರ..!

ನವದೆಹಲಿ: ಕೋವಿಡ್‌ ವೈರಸ್‌ಗಾಗಿ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್‌ ತೆರೆದ ಬಾಟಲ್​​​ನಲ್ಲಿ 2 ರಿಂದ 8 ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲಿ 28 ದಿನಗಳ ವರೆಗೆ ಸ್ಥಿರವಾಗಿರುತ್ತದೆ ಎಂದು ಭಾರತ್‌ ಬಯೋಟೆಕ್‌ ಹೇಳಿದೆ.

2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ 28 ದಿನಗಳವರೆಗೆ ಸಂಗ್ರಹಿಸಬಹುದು. ಒಂದು ದಿನದಲ್ಲಿ ಅಥವಾ ಪ್ರತಿರಕ್ಷಣೆ ಅವಧಿಯ ಕೊನೆಯಲ್ಲಿ ತಕ್ಷಣವೇ ಇದನ್ನು ತಿರಸ್ಕರಿಸುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದೆ.

ಪರಿಸರದ ಸಂರಕ್ಷಣೆಗೆ ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಬಹು ಡೋಸ್ ಸೀಸೆ ನೀತಿಯು ಕೋಲ್ಡ್ ಚೈನ್ ಲಾಜಿಸ್ಟಿಕ್ಸ್ ಹಾಗೂ ನಿರ್ವಹಣೆ ಕಡಿಮೆ ಮಾಡುವ ಮೂಲಕ ಸಂಗ್ರಹಣೆ ಏಜೆನ್ಸಿಗಳಿಗೂ ಹಣ ಉಳಿಸುತ್ತದೆ. ತೆರೆದ ಬಾಟಲಿಯ ತ್ಯಾಜ್ಯಕ್ಕೆ ಸಂಬಂಧಿಸಿದ ವೆಚ್ಚಗಳು, ಕೋಲ್ಡ್ ಚೈನ್ ವಿತರಣೆ, ಕೋಲ್ಡ್ ಚೈನ್ ಸ್ಟೋರೇಜ್, ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಇತ್ಯಾದಿಗಳನ್ನು ಇದು ಕಡಿಮೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದೆ.

ಅತಿ ಮುಖ್ಯವಾಗಿ ಲಸಿಕೆಗಳ ತಯಾರಿಕೆ, ಸಂಗ್ರಹಣೆ, ವಿತರಣೆ ಹಾಗೂ ವಿಲೇವಾರಿಯಲ್ಲಿ ಬಳಸಲಾಗುವ ಪ್ಯಾಕಿಂಗ್ ಸಾಮಗ್ರಿಗಳು ಮತ್ತು ಏಕ ಬಳಕೆಯ ಪ್ಲಾಸ್ಟಿಕ್‌ಗಳ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಪರಿಸರ ಸ್ನೇಹಿ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಯ ಪಟ್ಟಿಯಿಂದ 28 ದಿನಗಳ ಬಹು-ಡೋಸ್ ಸೀಸೆ ನೀತಿಯ ಅಡಿ ಲಸಿಕೆ ಬಳಸಲು ಅನುಮೋದನೆ ನೀಡಿತ್ತು.

ಕೋವ್ಯಾಕ್ಸಿನ್‌ ಲಸಿಕೆಯ ಜೀವಿತಾವಧಿ ತಯಾರಿಕೆಯ ದಿನಾಂಕದಿಂದ 12 ತಿಂಗಳವರೆಗೆ ವಿಸ್ತರಿಸಲು ಈ ಮೊದಲು ಸಿಡಿಎಸ್‌ಸಿಒ ಅನುಮತಿ ನೀಡಿತ್ತು. ಶೆಲ್ಫ್ - ಲೈಫ್ ವಿಸ್ತರಣೆಯ ಈ ಅನುಮೋದನೆಯು ಹೆಚ್ಚುವರಿ ಸ್ಥಿರತೆಯ ಡೇಟಾದ ಲಭ್ಯತೆ ಆಧರಿಸಿದೆ. ಶೆಲ್ಫ್-ಲೈಫ್ ವಿಸ್ತರಣೆಯೊಂದಿಗೆ ಆಸ್ಪತ್ರೆಗಳು ಈಗ ಮುಕ್ತಾಯದ ಸಮೀಪದಲ್ಲಿರುವ ಲಸಿಕೆಯ ಸ್ಟಾಕ್ ಅನ್ನು ಬಳಸಿಕೊಳ್ಳಬಹುದು ಹಾಗೂ ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ.

ಇದನ್ನೂ ಓದಿ:ಕೋವ್ಯಾಕ್ಸಿನ್‌ ಶೆಲ್ಫ್-ಲೈಫ್ 12 ತಿಂಗಳ ವಿಸ್ತರಣೆಗೆ ಸಿಡಿಎಸ್‌ಸಿಒ ಅನುಮೋದನೆ: ಭಾರತ್‌ ಬಯೋಟೆಕ್‌

ABOUT THE AUTHOR

...view details