ನಬರಂಗಪುರ (ಒಡಿಶಾ): ಜಗತ್ತು ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದು, ಒಡಿಶಾದ ಹಳ್ಳಿಯೊಂದರ ಜಮೀನಿನಲ್ಲಿ ಕೊರೊನಾ ವೈರಸ್ ಆಕಾರದ ಸೌತೆಕಾಯಿಯೊಂದು ಬೆಳೆದಿದೆ.
ಒಡಿಶಾದ ನಬರಂಗಪುರ ಜಿಲ್ಲೆಯ ಸರಗುಡ ಗ್ರಾಮದ ರಬಿ ಕಿರಣ್ ನಾಗ್ ಎಂಬವರ ಜಮೀನಿನಲ್ಲಿ ಈ ಸೌತೆಕಾಯಿ ಪತ್ತೆಯಾಗಿದ್ದು, ಇದನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ಏಕೆಂದರೆ ಇದು, ವಿಜ್ಞಾನಿಗಳು ಕೊರೊನಾ ವೈರಸ್ ಎಂದು ಗುರುತಿಸಲು ನೀಡಿದ ರೂಪದಂತಿದೆ.
ಕೊರೊನಾ ವೈರಸ್ ಆಕಾರದ ಸೌತೆಕಾಯಿ ಇದನ್ನೂ ಓದಿ: Dengue in Delhi : ದೆಹಲಿಯಲ್ಲಿ ಒಂದೇ ವಾರದಲ್ಲಿ 2,570 ಡೆಂಘೀ ಪ್ರಕರಣ ದಾಖಲು
ನಾನು ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ನೀಡಲು ಸರಗುಡಾ ಗ್ರಾಮದ ನನ್ನ ಜಮೀನಿಗೆ ಭೇಟಿ ನೀಡಿದಾಗ, ಅವರಲ್ಲಿ ಒಬ್ಬರು ಕೊರೊನಾ ವೈರಸ್‌ನಂತೆ ಕಾಣುವ ಸೌತೆಕಾಯಿ ಕಿತ್ತುಕೊಂಡು ಬಂದು ತೋರಿಸಿದರು. ಸೌತೆಕಾಯಿಯನ್ನು ನೋಡಿದ ನನಗೆ ಸಂಪೂರ್ಣವಾಗಿ ಆಶ್ಚರ್ಯವಾಯಿತು.
ನಾನು ಸೌತೆಕಾಯಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಸಾಕಷ್ಟು ಜನರು ಅದರ ಬಗ್ಗೆ ವಿಚಾರಿಸಿದ್ದಾರೆ. ಇದನ್ನು ನೋಡಲು ಜಮೀನಿಗೆ ಬರುತ್ತಿದ್ದಾರೆ ಎಂದು ಜಮೀನು ಮಾಲೀಕ ರಬಿ ಕಿರಣ್ ನಾಗ್ ಹೇಳಿದ್ದಾರೆ.