ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಇಳಿಕೆ ಕಂಡ ಕೋವಿಡ್​​.. ಹೊಸ ಪ್ರಕರಣಗಳ ಪೈಕಿ ಕೇರಳದಲ್ಲೇ ಅಧಿಕ - ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಸತತ ಆರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಕೋವಿಡ್ ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ. ನಿನ್ನೆ ಪತ್ತೆಯಾಗಿರುವ ಪ್ರಕರಣಗಳ ಪೈಕಿ ಕೇರಳದಲ್ಲೇ ಅತಿ ಹೆಚ್ಚು ಕೊರೊನಾ ಕೇಸ್​ಗಳು ವರದಿಯಾಗಿವೆ.

ಕೋವಿಡ್
ಕೋವಿಡ್

By

Published : Sep 27, 2021, 10:16 AM IST

ನವದೆಹಲಿ: ಭಾರತದಲ್ಲಿ ಹೊಸದಾಗಿ 26,041 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 3,36,78,786 ಕ್ಕೇರಿದೆ. ವೈರಸ್​ಗೆ ನಿನ್ನೆ 276 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 4,47,194ಕ್ಕೆ ಏರಿಕೆ ಕಂಡಿದೆ.

ಆರು ದಿನಗಳ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು ಕಡಿಮೆಯಾಗಿದ್ದು, ಸದ್ಯ 2,99,620 ಆ್ಯಕ್ಟಿವ್ ಪ್ರಕರಣಗಳಿವೆ. ಸೆಪ್ಟೆಂಬರ್ 26 ರಂದು 29,621 ಮಂದಿ ಗುಣಮುಖರಾಗಿದ್ದು, ಈವರೆಗೆ 3,29,31,972 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಹೊಸದಾಗಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಪೈಕಿ 15,951 ಕೇಸ್​ಗಳು ಕೇರಳವೊಂದರಲ್ಲೇ ಪತ್ತೆಯಾಗಿದ್ದು, 165 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲೀಗ 1,63,280 ಆ್ಯಕ್ಟಿವ್ ಕೇಸ್​ಗಳಿವೆ

ಕಳೆದ 24 ಗಂಟೆಗಳಲ್ಲಿ 38,18,362 ಕೋವಿಡ್ ವ್ಯಾಕ್ಸಿನ್ ಡೋಸ್​ಗಳನ್ನು ಹಾಕಲಾಗಿದ್ದು, ಈವರೆಗೆ 86,01,59,011 ಲಸಿಕಾ ಡೋಸ್​ಗಳನ್ನು ನೀಡಲಾಗಿದೆ.

ನಿನ್ನೆ ಒಂದೇ ದಿನ 11,65,006 ಸ್ವ್ಯಾಬ್ ಟೆಸ್ಟ್​ಗಳನ್ನು ಮಾಡಲಾಗಿದ್ದು, ಈವರೆಗೆ 56,44,08,251 ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details