ಕರ್ನಾಟಕ

karnataka

ETV Bharat / bharat

ರಾಜಕೀಯ ವ್ಯವಹಾರಗಳ ಗುಂಪು, ಟಾಸ್ಕ್​ ಫೋರ್ಸ್​​ ರಚಿಸಿದ ಸೋನಿಯಾ: ಇಬ್ಬರು ರೆಬಲ್​ಗಳಿಗೂ ಸ್ಥಾನ - ಕಾಂಗ್ರೆಸ್​ ರಾಜಕೀಯ ವ್ಯವಹಾರಗಳ ಗುಂಪು

ರಾಜಸ್ಥಾನದ ಉದಯಪುರದಲ್ಲಿ ಚಿಂತನಾ ಶಿಬಿರದಲ್ಲಿ ಘೋಷಣೆಯಂತೆಯೇ ರಾಜಕೀಯ ವ್ಯವಹಾರಗಳ ಗುಂಪು ಮತ್ತು ವಿವಿಧ ವಿಷಯಗಳಿಗಾಗಿ ಟಾಸ್ಕ್​​ಫೋರ್ಸ್ ರಚಿಸಿ ಸೋನಿಯಾ ಗಾಂಧಿ ಆದೇಶಿಸಿದ್ದಾರೆ.

Congress chief Sonia Gandhi sets up Task Force-2024
ಕಾಂಗ್ರೆಸ್​ ಟಾಸ್ಕ್​ ಫೋರ್ಸ್​​ ರಚಿಸಿದ ಸೋನಿಯಾ ಗಾಂಧಿ

By

Published : May 24, 2022, 1:05 PM IST

ನವದೆಹಲಿ: ಮುಂಬರುವ 2024ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್​​ ಎರಡು ಹೊಸ ತಂಡಗಳನ್ನು ರಚನೆ ಮಾಡಿದೆ. ರಾಜಕೀಯ ವ್ಯವಹಾರಗಳ ಗುಂಪು ಮತ್ತು ಟಾಸ್ಕ್​ ಫೋರ್ಸ್​​ ರಚಿಸಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶಿಸಿದ್ದಾರೆ.

ಕಾಂಗ್ರೆಸ್​ ಪುನಶ್ಚೇತನಕ್ಕಾಗಿ ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಚಿಂತನಾ ಶಿಬಿರ ನಡೆಸಲಾಗಿತ್ತು. ಈ ವೇಳೆ ರಾಜಕೀಯ ಸಲಹೆಗಳನ್ನು ಕೊಡಲು ರಾಜಕೀಯ ವ್ಯವಹಾರಗಳ ಗುಂಪು ರಚಿಸುವುದಾಗಿ ಸೋನಿಯಾ ಘೋಷಿಸಿದ್ದರು. ಅಲ್ಲದೇ, ಪಕ್ಷದ ಸಂಘಟನೆ, ವಿವಿಧ ಹುದ್ದೆಗಳಿಗೆ ನೇಮಕಾತಿ ನಿಯಮ, ಸಂವಹನ ಮತ್ತು ಪ್ರಚಾರ, ಹಣಕಾಸು ಹಾಗೂ ಚುನಾವಣಾ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳಿಗಾಗಿ ಟಾಸ್ಕ್​​ಫೋರ್ಸ್ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು. ಅಂತೆಯೇ ಇದಾದ 10 ದಿನಗಳಲ್ಲೇ ಇವುಗಳನ್ನು ಅವರು ಅನುಷ್ಠಾನಕ್ಕೆ ತಂದಿದ್ದಾರೆ.

ಇಬ್ಬರು ರೆಬಲ್​ಗಳಿಗೆ ಸ್ಥಾನ:ಪಕ್ಷದ ನಾಯಕತ್ವದ ವಿರುದ್ಧ ಭಿನ್ನ ಧ್ವನಿ ಎತ್ತಿದ್ದ ಇಬ್ಬರು ನಾಯಕರಿಗೂ ರಾಜಕೀಯ ವ್ಯವಹಾರಗಳ ಗುಂಪಿನಲ್ಲಿ ಸ್ಥಾನ ನೀಡಲಾಗಿದೆ. ಭಿನ್ನಮತದ ಗುಂಪಿನ (ಜಿ-23) ಪ್ರಮುಖರಾದ ಗುಲಾಂ ನಬಿ ಆಜಾದ್​ ಮತ್ತು ಆನಂದ್ ಶರ್ಮಾ​ ಸ್ಥಾನ ಪಡೆದಿದ್ದು, ಈ ಮೂಲಕ ಪಕ್ಷದಲ್ಲಿನ ಭಿನ್ನಮತ ಶಮನಕ್ಕೆ ಸೋನಿಯಾ ಪ್ರಯತ್ನಿಸುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಅಂದಹಾಗೆ, ಈ ರಾಜಕೀಯ ವ್ಯವಹಾರಗಳ ಗುಂಪಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ, ದಿಗ್ವಿಜಯ್​ ಸಿಂಗ್​, ಆನಂದ್ ಶರ್ಮಾ​, ಕೆ.ಸಿ.ವೇಣುಗೋಪಾಲ್​ ಮತ್ತು ಜಿತೇಂದ್ರ ಸಿಂಗ್ ಸೇರಿದಂತೆ ಒಟ್ಟು ಎಂಟು ಸದಸ್ಯರಿದ್ದಾರೆ.

ಅದೇ ರೀತಿಯಾಗಿ ಟಾಸ್ಕ್​​ಫೋರ್ಸ್​​ನಲ್ಲಿ ಪಿ.ಚಿದಂಬರಂ, ಮುಕುಲ್​ ವಾಸ್ನಿಕ್​, ಜೈರಾಮ್​ ರಮೇಶ್​, ಕೆ.ಸಿ.ವೇಣುಗೋಪಾಲ್​, ಅಜಯ್​ ಮಕೇನ್, ಪ್ರಿಯಾಂಕಾ ಗಾಂಧಿ, ರಂ​ದೀಪ್​ ಸಿಂಗ್​ ಸುರ್ಜೇವಾಲಾ ಮತ್ತು ಸುನೀಲ್​ ಕಾನುಗೋಲು ಇದ್ದು, ಪ್ರತಿಯೊಬ್ಬ ನಾಯಕರಿಗೂ ನಿರ್ದಿಷ್ಟ ಜವಾಬ್ದಾರಿ ನೀಡಲಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಪರಿಷತ್ ಚುನಾವಣೆ​​: ಪಟ್ಟಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಭುಗಿಲೆದ್ದ ಅಸಮಾಧಾನ

ABOUT THE AUTHOR

...view details