ನವದೆಹಲಿ:ಕೊರೊನಾ ವೈರಸ್ ವಿರುದ್ಧದ ರಾಮಬಾಣ ಕೋವ್ಯಾಕ್ಸಿನ್ ಲಸಿಕೆ ಇಂದಿನಿಂದ ಜನರಿಗೆ ನೀಡಲು ಪ್ರಾರಂಭಿಸಿದ್ದು, ಇದರ ಬೆನ್ನಲ್ಲೇ ಭಾರತ್ ಬಯೋಟೆಕ್ ಮಹತ್ವದ ಆದೇಶ ಹೊರಹಾಕಿದೆ.
ಭಾರತ್ ಬಯೋಟೆಕ್ನಿಂದ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್ನಿಂದ ಯಾವುದಾದರೂ ಅಡ್ಡಿಪರಿಣಾಮಗಳು ಉಂಟಾದರೆ ಪರಿಹಾರ ನೀಡಲು ಸಿದ್ಧ ಎಂದು ತಿಳಿಸಿದೆ. ಕೇಂದ್ರ ಸರ್ಕಾರದಿಂದ 55 ಲಕ್ಷ ಡೋಸ್ ಖರೀದಿ ಮಾಡಲು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಇದರ ಬೆನ್ನಲ್ಲೇ ಭಾರತ್ ಬಯೋಟೆಕ್ ಇಂತಹ ಮಹತ್ವದ ಆದೇಶ ಹೊರಹಾಕಿದೆ.