ಕರ್ನಾಟಕ

karnataka

ETV Bharat / bharat

ರಾಷ್ಟ್ರಪತಿ, ಪ್ರಧಾನಿ ಭೇಟಿ ನಡುವೆಯೇ ಕಾನ್ಪುರದಲ್ಲಿ ಗಲಾಟೆ, ಕಲ್ಲು ತೂರಾಟ - ಕಾನ್ಪುರದಲ್ಲಿ ಕೋಮು ಗಲಾಟೆ

ಕಾನ್ಪುರದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ ಪಾಲ್ಗೊಂಡಿದ್ದಾರೆ. ಈ ನಡುವೆ ಬಿಜೆಪಿ ನಾಯಕರೊಬ್ಬರ ವಿವಾದಾತ್ಮಕ ಹೇಳಿಕೆಯಿಂದಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ.

communal ruckus in Kanpur head of President visit
ರಾಷ್ಟ್ರಪತಿ, ಪ್ರಧಾನಿ ಭೇಟಿ ನಡುವೆಯೇ ಕಾನ್ಪುರದಲ್ಲಿ ಕೋಮು ಗಲಾಟೆ, ಕಲ್ಲು ತೂರಾಟ

By

Published : Jun 3, 2022, 5:47 PM IST

Updated : Jun 3, 2022, 6:45 PM IST

ಕಾನ್ಪುರ (ಉತ್ತರ ಪ್ರದೇಶ):ಉತ್ತರ ಪ್ರದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಭೇಟಿ ನೀಡಿರುವರ ಬೆನ್ನಲ್ಲೇ ಗಲಾಟೆ ಉಂಟಾಗಿದೆ. ಕಾನ್ಪುರದಲ್ಲಿ ಎರಡು ಗಂಪುಗಳಿಂದ ಭಾರಿ ಕಲ್ಲು ತೂರಾಟ ನಡೆದಿದೆ. ಅಲ್ಲದೇ, ಬಾಂಬ್​ಗಳನ್ನು ಸ್ಫೋಟಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕಾನ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ ಪಾಲ್ಗೊಂಡಿದ್ದಾರೆ. ನಂತರ ಸರ್ಕ್ಯೂಟ್ ಹೌಸ್​ಗೆ ರಾಷ್ಟ್ರಪತಿ ಕೋವಿಂದ್​ ಆಗಮಿಸುವ ನಿರೀಕ್ಷೆ ಇದೆ. ಆದರೆ, ಈ ನಡುವೆ ಬಿಜೆಪಿ ನಾಯಕರೊಬ್ಬರ ವಿವಾದಾತ್ಮಕ ಹೇಳಿಕೆಯಿಂದಾಗಿ ಎರಡು ಸಮುದಾಯಗಳ ಮಧ್ಯೆ ಗಲಾಟೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಪತಿ, ಪ್ರಧಾನಿ ಭೇಟಿ ನಡುವೆಯೇ ಕಾನ್ಪುರದಲ್ಲಿ ಗಲಾಟೆ, ಕಲ್ಲು ತೂರಾಟ

ಇದೇ ವೇಳೆ, ಬಾಂಬ್ ಸ್ಫೋಟದ ಸುದ್ದು ಕೂಡ ಕೇಳಿ ಬಂದಿದೆ ಎನ್ನಲಾಗುತ್ತಿದೆ. ಇದರಿಂದ ಬಾಂಬ್‌, ಗುಂಡುಗಳನ್ನೂ ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಈ ದಿಢೀರ್ ನಡೆದ ಘಟನೆಯಿಂದ ಇಡೀ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ವಿಷಯ ತಿಳಿದ ಎರಡು ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಬಂದಿದ್ದಾರೆ. ನೂರಾರು ಜನರು ಬೀದಿಗಳಲ್ಲಿ ಪರಸ್ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮೂಸೆ ವಾಲಾ ಹತ್ಯೆ: ಲಾರೆನ್ಸ್ ಬಿಷ್ಣೋಯ್ ಜೊತೆ ಸಂಬಂಧ ಹೊಂದಿದ್ದ ಇಬ್ಬರ ಬಂಧನ

Last Updated : Jun 3, 2022, 6:45 PM IST

ABOUT THE AUTHOR

...view details