ನವದೆಹಲಿ:ವಿವಿಧ ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಖೇಶ್ ಚಂದ್ರಶೇಖರ್ ಅವರು ಮಾಡಿರುವ ಗಂಭೀರ ಆರೋಪಗಳ ಕುರಿತು ತನಿಖೆ ನಡೆಸಿ ತ್ರಿಸದಸ್ಯ ಸಮಿತಿಯು ತನ್ನ ವರದಿಯನ್ನು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸಲ್ಲಿಸಿದೆ.
ಲೆಫ್ಟಿನೆಂಟ್ ಗವರ್ನರ್ ಸಚಿವಾಲಯದ ಮೂಲಗಳ ಪ್ರಕಾರ, ಸಮಿತಿಯ ವರದಿಯಲ್ಲಿ ಸುಕೇಶ್ ಚಂದ್ರಶೇಖರ್ ಹೇಳಿಕೆ ಎರಡು ಬಾರಿ ಪಡೆದುಕೊಂಡಿದೆ. ಎರಡೂ ಬಾರಿ ತಮ್ಮ ಆರೋಪಗಳಲ್ಲಿ ಸತ್ಯವನ್ನೂ ದೃಢಪಡಿಸಿರುವುದನ್ನು ಹಾಗೂ ತಮ್ಮ ಆರೋಪಗಳ ದೃಢೀಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಿಬಿಐ ಮತ್ತು ಇಡಿಗೆ ನೀಡಿದ್ದೇನೆ ಎಂದು ಆರೋಪಿ ತಿಳಿಸಿದ್ದಾರೆ ಎಂದು ತಿಳಿಸಿದೆ.
ತಿಹಾರ್ ಜೈಲಿನಲ್ಲಿರುವ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಮತ್ತು ಮಾಜಿ ಡಿಜಿ ಸಂದೀಪ್ ಗೋಯಲ್ ಜತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಚಿವ ಕೈಲಾಶ್ ಗೆಹ್ಲೋಟ್ ವಿರುದ್ಧ ಆರೋಪಿ ಸುಕೇಶ್ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಕುರಿತು ಮಾಹಿತಿ ನೀಡಿದೆ.
ಸತ್ಯೇಂದ್ರ ಜೈನ್‌ಗೆ 10 ಕೋಟಿ, ಆಪ್‌ಗೆ 50 ಕೋಟಿ ದೇಣಿಗೆ ನೀಡಿರುವೆ ಸ್ಪಷ್ಟವಾಗಿ ಆರೋಪಿ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ರಾಜ್ಯಸಭಾ ಸ್ಥಾನದ ಭರವಸೆ ನೀಡಲಾಗಿತ್ತು ಎಂದಿದ್ದಾರೆ. ದೆಹಲಿಯ ಫಾರ್ಮ್ ಹೌಸ್ ನಲ್ಲಿ ನಾಲ್ಕು ವಿವಿಧ ಕಂತುಗಳಲ್ಲಿ ಈ ಹಣವನ್ನು ನೀಡಲಾಗಿದೆ. ಇದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೂ ಗೊತ್ತಿದೆ ಎಂದು ಸುಕೇಶ್ ಮಾಹಿತಿ ನೀಡಿದ್ದಾರೆ. ತನಿಖಾ ಸಮಿತಿಯ ಮುಂದೆ ಸುಕೇಶ್ ಅವರು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾಟ್ಸ್ಆ್ಯಪ್ ಚಾಟ್ ಸಂದೇಶದ ದಾಖಲೆ ಒದಗಿಸಿದ್ದಾರೆ.