ಕರ್ನಾಟಕ

karnataka

ವಾಣಿಜ್ಯ ಬಳಕೆ ಗ್ಯಾಸ್​ ಸಿಲಿಂಡರ್‌ ಬೆಲೆ ಮತ್ತೆ ಇಳಿಕೆ: ಹೊಸ ದರ ಹೀಗಿದೆ..

ದೇಶದ ತೈಲ ಕಂಪನಿಗಳು ವಾಣಿಜ್ಯ ಮತ್ತು ಜೆಟ್ ಇಂಧನ ಬೆಲೆ ಕಡಿತಗೊಳಿಸಿವೆ. ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿವೆ.

By

Published : Jun 1, 2023, 10:19 AM IST

Published : Jun 1, 2023, 10:19 AM IST

Commercial gas cylinder prices slashed  Check latest rates in Delhi  Gas new rates  ಆದ್ರೆ ಗೃಹ ಬಳಕೆಯ ಗ್ಯಾಸ್​ ಬೆಲೆ ತಟಸ್ಥ  ವಾಣಿಜ್ಯ ಗ್ಯಾಸ್​ ಬೆಲೆಯಲ್ಲಿ ಮತ್ತೆ ಇಳಿಕೆ  ವಾಣಿಜ್ಯ ಮತ್ತು ಜೆಟ್ ಇಂಧನ ಬೆಲೆಯನ್ನೂ ಕಡಿತ  ಹೊಸ ದರಗಳು ಜೂನ್ 1 ರಿಂದ ಜಾರಿಗೆ  ತೈಲ ಮಾರುಕಟ್ಟೆ ಕಂಪನಿಗಳಿಂದ ಶುಭ ಸುದ್ದಿ  ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆ  ಎಲ್‌ಪಿಜಿ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆ  ಕಂಪನಿಗಳು ದರವನ್ನು ಕಡಿಮೆ
ವಾಣಿಜ್ಯ ಗ್ಯಾಸ್​ ಬೆಲೆಯಲ್ಲಿ ಮತ್ತೆ ಇಳಿಕೆ

ನವದೆಹಲಿ:ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಶುಭ ಸುದ್ದಿ ನೀಡಿವೆ. ಎಲ್‌ಪಿಜಿ ಸಿಲಿಂಡರ್‌ ಬೆಲೆ ಪರಿಷ್ಕರಣೆಯಾಗಿದೆ. ಆದರೆ ಇದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ಮಾತ್ರ ಅನ್ವಯ. ವರದಿಯ ಪ್ರಕಾರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 83 ರೂಪಾಯಿ ಕಡಿಮೆಯಾಗಿದೆ.

ಎಲ್ಲೆಲ್ಲಿ, ಎಷ್ಟು ಬೆಲೆ? ನವದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಬೆಲೆ 83.5 ರೂಪಾಯಿ ಇಳಿಕೆಯಾಗಿದ್ದು, ಇದೀಗ ಹೊಸ ಬೆಲೆ 1,773 ರೂಪಾಯಿ ಇದೆ. ಕಳೆದ ತಿಂಗಳು ವಾಣಿಜ್ಯ ಅನಿಲ ಬೆಲೆ ಸಿಲಿಂಡರ್‌ಗೆ 1,856.50 ರೂಪಾಯಿಗೆ ಮಾರಾಟವಾಗುತ್ತಿತ್ತು. ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರ 1,103 ರೂಪಾಯಿಯಲ್ಲೇ ಮಾರಾಟವಾಗುತ್ತಿದೆ.

ಈ ಮೊದಲು ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ 1,856.50 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ಇದರ ಬೆಲೆ 1,773 ರೂಪಾಯಿಗೆ ಇಳಿಕೆ ಕಂಡಿದೆ. ಅಂದರೆ 83.50 ರೂಪಾಯಿ ಕಡಿಮೆ ಆಗಿದೆ. ಆದರೆ ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 1,.960.50 ರಿಂದ 1,875.50 ಕ್ಕೆ ಇಳಿಕೆಯಾಗಿದ್ದರೆ, ಮುಂಬೈಯಲ್ಲಿ 1,808.50 ರಿಂದ 1,725 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಚೆನ್ನೈನಲ್ಲಿ ಎಲ್​ಪಿಜಿ ಸಿಲಂಡರ್‌ ದರ 2,021.50 ರಿಂದ ರೂ 84.50 ಕ್ಕೆ ಇಳಿದು ರೂ 1,937 ಕ್ಕೆ ತಲುಪಿದೆ.

ಗೃಹ ಬಳಕೆ ಸಿಲಿಂಡರ್‌ ಬೆಲೆ ಬದಲಿಲ್ಲ: ಕಳೆದ ಕೆಲವು ತಿಂಗಳುಗಳಿಂದ ಡೊಮೆಸ್ಟಿಕ್​ ಎಲ್‌ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಬಾರಿ ಮಾರ್ಚ್ ವೇಳೆಗೆ ಬೆಲೆಯಲ್ಲಿ ಬದಲಾವಣೆ ಆಗಿತ್ತು. ಅಂದಿನಿಂದ ಇಂದಿನವರೆಗೂ ಅದರ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ. ಲೇಹ್‌ನಲ್ಲಿ 1,340, ಐಜ್ವಾಲ್‌ನಲ್ಲಿ 1260, ಭೋಪಾಲ್‌ನಲ್ಲಿ 1,108.5, ಜೈಪುರದಲ್ಲಿ 1,106.5, ಬೆಂಗಳೂರಿನಲ್ಲಿ 1105.5, ದೆಹಲಿಯಲ್ಲಿ 1103, ಮುಂಬೈನಲ್ಲಿ 1102.5 ಮತ್ತು ಶ್ರೀನಗರದಲ್ಲಿ 1219 ರೂಪಾಯಿಗೆ ಸಿಲಿಂಡರ್ ಮಾರಾಟವಾಗುತ್ತಿವೆ.

ಇನ್ನು ಬಿಹಾರ ರಾಜಧಾನಿ ಪಾಟ್ನಾದಲ್ಲಿ 1201 ರೂ., ತಮಿಳುನಾಡಿನ ಕನ್ಯಾಕುಮಾರಿ ರೂ.1187, ಅಂಡಮಾನ್ ರೂ.1179, ಜಾರ್ಖಂಡ್‌ನ ರಾಂಚಿ ರೂ.1160.5, ಉತ್ತರಾಖಂಡದ ಡೆಹ್ರಾಡೂನ್ ರೂ.1122, ಚೆನ್ನೈ ರೂ.1118.5, ಆಗ್ರಾ ರೂ.1115.5, ಚಂಡೀಗಢ ರೂ.1112.5, ಅಹಮದಾಬಾದ್‌ನಲ್ಲಿ 1110 ರೂ., ಶಿಮ್ಲಾದಲ್ಲಿ 1147.5 ರೂ. ಮತ್ತು ಲಖನೌದಲ್ಲಿ ಸಿಲಿಂಡರ್‌ಗೆ 1140.5 ರೂ.ಗೆ ಸಿಲಿಂಡರ್ ಮಾರಾಟವಾಗುತ್ತಿದೆ.

ತೈಲ ಕಂಪನಿಗಳು ಜೆಟ್ ಇಂಧನ (ವಾಯು ಇಂಧನ) ಬೆಲೆಯನ್ನೂ ಸಹ ಕಡಿತಗೊಳಿಸಿವೆ. ಸುಮಾರು 6,600 ರೂ.ಗಳಷ್ಟು ಬೆಲೆ ಇಳಿಕೆಯಾಗಿದೆ. ಇದು ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಜೂನ್ 1 ರಿಂದ ಅಂದರೆ ಇಂದಿನಿಂದಲೇ ಹೊಸ ದರಗಳನ್ನು ಜಾರಿಗೆ ತರಲಾಗಿದೆ.

ಈ ಹಿಂದೆ ಮೇ 1, 2023 ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 172 ರೂಪಾಯಿ ಕಡಿಮೆ ಮಾಡಲಾಗಿತ್ತು.

ಇದನ್ನೂ ಓದಿ:ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ₹171 ಇಳಿಕೆ: ಹೊಸ ದರ ಹೀಗಿದೆ..

ABOUT THE AUTHOR

...view details