ನವದೆಹಲಿ:ಹೊಸ ವರ್ಷ ಮತ್ತು ಕ್ರಿಸ್ಮಸ್ಗೂ ಮುನ್ನವೇ ಕೇಂದ್ರ ಸರ್ಕಾರ ಭಾರತೀಯರಿಗೆ ಬಂಪರ್ ಗಿಫ್ಟ್ ನೀಡಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಶುಕ್ರವಾರ ತೈಲ ಮಾರುಕಟ್ಟೆ ಕಂಪನಿಗಳು ಕಡಿತಗೊಳಿಸಿವೆ. ಪ್ರತಿ ಸಿಲಿಂಡರ್ ಬೆಲೆ ರೂ.39.50 ಇಳಿಕೆಯಾಗಲಿದೆ. ಕಡಿಮೆಯಾದ ಹೊಸ ದರಗಳು ಇಂದಿನಿಂದ ಅಂದರೆ ಡಿಸೆಂಬರ್ 22, 2023 ರಿಂದ ಜಾರಿಗೆ ಬರಲಿವೆ. ಆದರೇ ಗೃಹ ಬಳಿಕೆಯ ಎಲ್‌ಪಿಜಿ ಸಿಲೆಂಡರ್ನ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸದ್ಯ ಗೃಹ ಬಳಕ್ಕೆ ಸಿಲಿಂಡರ್ ಬೆಲೆಗಳು ಸ್ಥಿರವಾಗಿ ಮುಂದುವರೆದಿದೆ.
ಈ ಹಿಂದೆ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1796.50 ರೂ., ಮುಂಬೈನಲ್ಲಿ 1749 ರೂ., ಕೋಲ್ಕತ್ತಾದಲ್ಲಿ 1908 ರೂ. ಮತ್ತು ಚೆನ್ನೈನಲ್ಲಿ 1968.50 ರೂ. ಇತ್ತು. ಇದೀಗಾ 39.50 ರೂಪಾಯಿಗಳ ಬೆಲೆ ಇಳಿಕೆಯ ನಂತರ, ಈಗ ಕೋಲ್ಕತ್ತಾದಲ್ಲಿ 1869 ರೂ, ಮುಂಬೈನಲ್ಲಿ 1710 ರೂ ಮತ್ತು ಚೆನ್ನೈನಲ್ಲಿ 1929.50 ರೂಗೆ ಲಭ್ಯವಾಗಲಿದೆ.
ಇದಕ್ಕೂ ಮುನ್ನ ಡಿಸೆಂಬರ್ 1 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 21 ರೂ ನಷ್ಟು ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಮೊದಲು ನ.16ರಂದು 57 ರೂ.ಗಳ ರಿಯಾಯಿತಿ ನೀಡಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಪ್ರತಿ ತಿಂಗಳು ನಿರಂತರವಾಗಿ ಏರಿಳಿತಗೊಳ್ಳುತ್ತಿದೆ.