ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಅಮರನಾಥದ ಪವಿತ್ರ ಗುಹಾ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದ್ದು, 15 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.ಇದರಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಅಮರನಾಥದ ಪವಿತ್ರ ಗುಹಾ ದೇಗುಲದ ಬಳಿ ಮೇಘಸ್ಫೋಟ: ಐವರ ಸಾವು ಭಾರಿ ಪ್ರಮಾಣದಲ್ಲಿ ಸಂಭವಿಸಿದ ಈ ಮೇಘ ಸ್ಫೋಟದಲ್ಲಿ ಇದುವರೆಗೂ 40 ಕ್ಕೂ ಹೆಚ್ಚು ಮಂದಿ ಯಾತ್ರಿಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಸೇನಾ ಪಡೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
15 ಕ್ಕೆ ಹೆಚ್ಚಿದ ಸಾವಿನ ಸಂಖ್ಯೆ, 40ಕ್ಕೂ ಹೆಚ್ಚು ಯಾತ್ರಿಕರು ನಾಪತ್ತೆ 25ಕ್ಕೆ ಹೆಚ್ಚು ಟೆಂಟ್ಗಳು ಮಹಾ ಮಳೆಗೆ ತೇಲಿಕೊಂಡು ಹೋಗಿವೆ. ಭಾರಿ ಪ್ರಮಾಣದಲ್ಲಿ ಹಾನಿಯಾಗಿರುವ ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ವಾರ್ಷಿಕ 43 ದಿನಗಳ ಅಮರನಾಥ ಯಾತ್ರೆಯು ಆರಂಭವಾಗಿದೆ. ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಗುಹಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
15 ಕ್ಕೆ ಹೆಚ್ಚಿದ ಸಾವಿನ ಸಂಖ್ಯೆ, 40ಕ್ಕೂ ಹೆಚ್ಚು ಯಾತ್ರಿಕರು ನಾಪತ್ತೆ ಈ ದುರಂತ ಹಿನ್ನೆಲೆ ತಾತ್ಕಾಲಿಕವಾಗಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ:ಆ ರೀತಿಯ ನಿವೇಶನ, ಮನೆಗಳನ್ನು ಹಂಚಿಕೆ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿದ ಸರ್ಕಾರ: ಕಾರಣ?