ಗುವಾಹಟಿ: ಅಸ್ಸೋಂ ಚಹಾ ಉದ್ಯಮ 200ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಆದರೆ, ರಾಜ್ಯದ ಚಹಾ ಉದ್ಯಮ ಕರುಣಾಜನಕ ಪರಿಸ್ಥಿತಿಯಲ್ಲಿದೆ. ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಈ ಚಹಾ ಉದ್ಯಮವೂ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದು, ಅನೇಕರ ಜೀವನ ಕೂಡ ಈ ಟೀ ಉದ್ಯಮವನ್ನು ಅವಲಂಬಿಸಿದೆ. ರಾಜ್ಯದಲ್ಲಿ ಟೀ ಎಸ್ಟೇಟ್ ಸಂಖ್ಯೆ ಅಥವಾ ಟೀ ಬೆಳೆಗಳ ಭೂಮಿಗಳ ಸಂಖ್ಯೆ ಹೆಚ್ಚಾಗಿತ್ತಿದೆಯಾದರೂ ಪ್ರತಿ ವರ್ಷ ಟೀ ಉತ್ಪನ್ನಗಳ ಸಂಖ್ಯೆ ಮಾತ್ರ ಕುಸಿಯುತ್ತದೆ.
ಇಳಿಕೆ ಕಂಡ ಉತ್ಪಾದನೆ: 2017ರ ಸರ್ಕಾರದ ದತ್ತಾಂಶದ ಪ್ರಕಾರ, ರಾಜ್ಯದಲ್ಲಿ ಸಣ್ಣ ಟೀ ಎಸ್ಟೇಟ್ ಸೇರಿದಂತೆ 88,442 ಟೀ ತೋಟಗಳಿವೆ. 2022ರಲ್ಲಿ ಈ ಸಂಖ್ಯೆ 1,22,440 ಆಗಿದೆ. 2017ರಲ್ಲಿ ಟೀ ಕೃಷಿಗೆ 3.14 ಲಕ್ಷ ಹೆಕ್ಟೇರ್ಗಳಲ್ಲಿ ನಡೆಯುತ್ತಿತ್ತು. ಈ ಸಂಖ್ಯೆ ಕೂಡ ಏರಿಕೆ ಕಂಡಿದ್ದು, 2022ರಲ್ಲಿ 3.47 ಲಕ್ಷ ಹೆಕ್ಟೇರ್ನಲ್ಲಿ ಟೀ ಕೃಷಿ ನಡೆಯುತ್ತಿದೆ. ಟೀ ಗಾರ್ಡನ್ಗಳ ಗಾತ್ರ ಮತ್ತು ಟೀ ಬೆಳೆಯುವ ಭೂಮಿಗಳು ಏರಿಕೆ ಕಂಡಿದೆ. ಆದರೆ, ಈ ಹಿಂದಿಗೆ ಹೋಲಿಕೆ ಮಾಡಿದರೆ ಉತ್ಪಾದನೆ ಮತ್ತು ಉತ್ಪನ್ನಗಳಲ್ಲಿ ಮಾತ್ರ ಗಂಡನೀಯವಾಗಿ ಕಡಿಮೆಯಾಗಿದೆ. 2017ರಲ್ಲಿ ರಾಜ್ಯದಲ್ಲಿ ಒಟ್ಟಾರೆ ಟೀ ಉತ್ಪಾದನೆ 66.53 ಕೋಟಿ ಇದ್ದು, ಹೆಕ್ಟೇರ್ ಭೂಮಿಯಲ್ಲಿ 2119 ಕೆಜಿ ಇಳುವರಿಯಾಗುತ್ತಿತ್ತು. ಆದರೆ, ಆಗಸ್ಟ್ನಲ್ಲಿ ಈ ಉತ್ಪಾದನೆ 39.28 ಕೋಟಿ ಕೆಜಿ ಆಗಿದ್ದು, ಹೆಕ್ಟೇರ್ ಭೂಮಿಯಲ್ಲಿ ಇಳುವರಿ 1132 ಕೆಜಿ ಆಗಿದೆ.
ತಜ್ಞರು ಹೇಳುವಂತೆ, ಟೀ ತೋಟಗಳ ಸಂಖ್ಯೆ ಮತ್ತು ಟೀ ಬೆಳೆಯುವ ಭೂಮಿಯ ಉತ್ಪಾದನೆ ಹೆಚ್ಚಾದರೂ ಅದರ ಉತ್ಪಾದನೆಯಲ್ಲಿ ಇಳಿಮುಖವಾಗುತ್ತಿದೆ ಎಂದರೆ ರಾಜ್ಯದ ಆರ್ಥಿಕತೆ ಕಷ್ಟದಲ್ಲಿದೆ ಎಂದು ಅರ್ಥ ಎಂದಿದ್ದಾರೆ. ಮಾರ್ಚ್ 16ರ ಅಸ್ಸೋಂನ ಆರ್ಥಿಕ ಸಮೀಕ್ಷೆ, ಚಹಾ ವಲಯದಲ್ಲಿನ ಕರಾಳ ಸ್ಥಿತಿಯನ್ನು ತಿಳಿಸಿದೆ.