ಕರ್ನಾಟಕ

karnataka

ETV Bharat / bharat

ಅರುಣಾಚಲ ಪ್ರದೇಶದ ಸನಿಹದಲ್ಲೇ ಚೀನಾದಿಂದ ಹೆದ್ದಾರಿ ನಿರ್ಮಾಣ

ಚೀನಾ ಅರುಣಾಚಲ ಪ್ರದೇಶದ ಸಮೀಪದಲ್ಲಿ ರಸ್ತೆಯೊಂದನ್ನು ನಿರ್ಮಿಸಿದ್ದು, ರಸ್ತೆ ಕಾಮಗಾರಿಗೆ 310 ಮಿಲಿಯನ್ ಡಾಲರ್ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ.

By

Published : May 21, 2021, 4:22 AM IST

China builds key highway through Brahmaputra Canyon in Tibet close to Arunachal Pradesh border
ಅರುಣಾಚಲ ಪ್ರದೇಶದ ಸನಿಹದಲ್ಲೇ ಚೀನಾದಿಂದ ಹೆದ್ದಾರಿ ನಿರ್ಮಾಣ

ನವದೆಹಲಿ: ಇತ್ತೀಚೆಗೆ ಟಿಬೆಟ್​ ಬಳಿ ಬ್ರಹ್ಮಪುತ್ರ ನದಿಗೆ ಬೃಹತ್ ಡ್ಯಾಮ್ ಕಟ್ಟುವುದಾಗಿ ಘೋಷಿಸಿದ್ದ ಚೀನಾ ಸದ್ದಿಲ್ಲದೇ ಮತ್ತೊಂದು ಕಾರ್ಯವನ್ನು ಮಾಡಿ ಮುಗಿಸಿದೆ. ಅರುಣಾಚಲ ಪ್ರದೇಶಕ್ಕೆ ಸಮೀಪದಲ್ಲಿರುವ ಬ್ರಹ್ಮಪುತ್ರ ಕಣಿವೆ ಮಾರ್ಗದಲ್ಲಿ ಒಂದು ಹೆದ್ದಾರಿಯನ್ನು ನಿರ್ಮಾಣ ಮಾಡಿದ್ದು, ವಿವಾದ ಸೃಷ್ಟಿಗೆ ಕಾರಣವಾಗಿದೆ.

ಜಗತ್ತಿನ ಅತ್ಯಂತ ಆಳದ ಹೆದ್ದಾರಿ ಎಂದು ಚೀನಾ ಬಣ್ಣಿಸಿದ್ದು, ಸುಮಾರು 6,009 ಮೀಟರ್ ಆಳವಿರುವ ಕಣಿವೆಯಲ್ಲಿ ಹೆದ್ದಾರಿ ನಿರ್ಮಿಸಲಾಗಿದೆ. ಈ ರಸ್ತೆಯು ಹಿಂದಿನ ಶನಿವಾರ ಪೂರ್ಣಗೊಂಡಿದೆ ಎಂದು ಅಲ್ಲಿನ ಸರ್ಕಾರಿ ಕ್ಸಿನುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಇದನ್ನೂ ಓದಿ:ಕೊರೊನಾ ಸೋಂಕು ತಾವೇ ಪರೀಕ್ಷೆ ಮಾಡಿಕೊಳ್ಳಬಹುದು, ಕೇವಲ ರೂ.250 ಮಾತ್ರ!

ಈ ರಸ್ತೆ ಕಾಮಗಾರಿಗೆ 310 ಮಿಲಿಯನ್ ಡಾಲರ್ ಖರ್ಚಾಗಿದ್ದು, ಯರ್ಲುಂಗ್ ಝಾಂಗ್​ಬೋ ಗ್ರ್ಯಾಂಡ್ ಕಣಿವೆಯ ಮೂಲಕ ಹಾದುಹೋಗಲಿದೆ. ಟಿಬೆಟ್​ನಲ್ಲಿ ಯರ್ಲುಂಗ್ ಝಾಂಗ್​​ಬೋ ಎಂದು ಬ್ರಹ್ಮಪುತ್ರ ನದಿಯನ್ನು ಕರೆಯಲಾಗುತ್ತದೆ.

ನಿಂಗ್ಚಿಯ ಪಾಡ್ ಟೌನ್​​​ಶಿಪ್ ಮತ್ತು ಮೆಡಾಗ್ ಕೌಂಟಿಗೆ ನಡುವೆ ಈ ರಸ್ತೆ ನಿರ್ಮಾಣವಾಗಿದ್ದು, 2,114 ಮೀಟರ್ ಉದ್ದದ ಸುರಂಗವನ್ನು ಕೊರೆಯಲಾಗಿದೆ. ಇದರಿಂದಾಗಿ ಈ ಎರಡೂ ಪ್ರದೇಶಗಳ ನಡುವೆ ​ ಪ್ರಯಾಣದ ಸಮಯ 8 ಗಂಟೆಗಳ ಉಳಿತಾಯವಾಗಲಿದೆ.

ಮೆಡಾಗ್ ಟಿಬೆಟ್​ನ ಕೊನೆಯ ಕೌಂಟಿ ಆಗಿದ್ದು, ಅರುಣಾಚಲಪ್ರದೇಶದ ಗಡಿಗೆ ತುಂಬಾ ಸನಿಹದಲ್ಲಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್​ನ ಭಾಗ ಎಂಬ ಚೀನಾದ ವಾದವನ್ನು ಭಾರತ ತಿರಸ್ಕರಿಸಿದ್ದು, ಈಗಲೂ ತನ್ನ ವಾದನನ್ನು ಮುಂದುವರೆಸಿದೆ.

ABOUT THE AUTHOR

...view details